ವಿಟ್ಲ :(ಡಿ.29) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿಟ್ರಸ್ಟ್ (ರಿ.)ವಿಟ್ಲ ತಾಲೂಕಿನ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರದ ಮಾತೃಶ್ರೀ ಡಾ ಹೇಮಾವತಿ ವಿ ಹೆಗ್ಡೆಯವರ ವಾತ್ಸಲ್ಯಮಯಿ ಚಿಂತನೆಯಂತೆ ಸಮಾಜದಲ್ಲಿನ ಅತ್ಯಂತ ನಿರ್ಗತಿಕ ಆಶಕ್ತ ಜೀವಗಳನ್ನು ತನ್ನ ಕಾರ್ಯಕರ್ತರ ಮೂಲಕ
ಇದನ್ನೂ ಓದಿ: ಉಡುಪಿ: ಮದವೇರಿದ ಎರಡು ಗೂಳಿಗಳ ಕಾಳಗ
ಗುರುತಿಸಿ ಮಾಸಿಕವಾಗಿ ಒಂದು ಸಾವಿರದಂತೆ ಮಾಶಾಸನವನ್ನು ನೀಡಿ ವಾತ್ಸಲ್ಯ ಪೌಷ್ಠಿಕಾoಶ ಭರಿತ ಆಹಾರವನ್ನು ಮಾಸಿಕವಾಗಿ ಒದಗಿಸುತಿದ್ದು ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ 19 ಮಂದಿ ಫಲಾನುಭವಿಗಳು ಆಯ್ಕೆಯಾಗಿರುತ್ತಾರೆ.
ಅದರಂತೆ ವಿಟ್ಲ ಯೋಜನಾ ಕಚೇರಿಯ ಕಲ್ಲಡ್ಕ ವಲಯದ 4 ಕುಟುಂಬಗಳಾದ ವೀರಕಂಭ ಕಾರ್ಯಕ್ಷೇತ್ರದ ಗಾಣದ ಕೊಟ್ಯ ರಾಘವೇಂದ್ರ, ನೆಟ್ಲ ಕಾರ್ಯಕ್ಷೇತ್ರದ ದೇವಕಿ, ಕಲ್ಲಡ್ಕ ಕಾರ್ಯಕ್ಷೇತ್ರದ ಈಶ್ವರ ನಾಯ್ಕ, ಮಾಮೇಶ್ವರ ಕಾರ್ಯಕರ್ತ ನಾರಾಯಣ ಇವರ ಮನೆಗೆ ಭೇಟಿ ನೀಡಿ ಗೃಹೋಪಯೋಗಿ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ,ಮೇಲ್ವಿಚಾರಕಿ ಸುಗುಣಶೆಟ್ಟಿ, ಜ್ಞಾನವಿಕಾಸ ಸಮನ್ವಯಧಿಕಾರಿ ದೀಪಾ, ಜನಜಾಗೃತಿ ವೇದಿಕೆಯ ಸದಸ್ಯ ಚಿನ್ನಾ ಮೈರಾ, ಶೌರ್ಯ ತಂದದ ಸದಸ್ಯ ಸಂತೋಷ್,ಸೇವಾ ಪ್ರತಿನಿಧಿ ವಿಜಯ, ರೇವತಿ, ಸುಕನ್ಯ ಗಣೇಶ್, ಉಪಸ್ಥಿತರಿದ್ದರು.