ಬೆಳ್ತಂಗಡಿ :(ಡಿ.30) ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡದ ವತಿಯಿಂದ ಮೃತ್ಯುಂಜಯ ನದಿಯಲ್ಲಿ ಮಾತೃಸ್ವರೂಪಿ ಗೋವಿನ ದೇಹದ ಅಂಗಾಂಗ ಮತ್ತು ಕರುಗಳನ್ನು ಎಸೆದು ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪೋಲಿಸ್ ಇಲಾಖೆಯ ವಿರುದ್ಧ ಡಿ.30 ರಂದು ಬೃಹತ್ ಪ್ರತಿಭಟನೆ ನಡೆಯಬೇಕಿತ್ತು. ಆದರೆ ಈಗ ರದ್ದಾಗಿದೆ.
ಇದನ್ನೂ ಓದಿ: LOVE JIHAD: ಹಿಂದೂ ಹೆಸರನ್ನಿಟ್ಟುಕೊಂಡು ಯುವತಿ ಜೊತೆ ಕಾಮದಾಟ
ಇಂದು ನಡೆಯಬೇಕಾಗಿದ್ದ ಪ್ರತಿಭಟನಾ ಸಭೆಯನ್ನು ಪೋಲೀಸ್ ರು ಪ್ರಖಂಡದ ಪ್ರಮುಖರಲ್ಲಿ ವಿನಂತಿ ಮಾಡಿದ್ದು, ಒಂದು ವಾರದ ಸಮಯವಕಾಶವನ್ನು ಕೇಳಿದ್ದು ಆರೋಪಿಗಳನ್ನು ಕೂಡಲೇ ಬಂಧಿಸುತ್ತೇವೆ ಎಂದು ವಿನಂತಿಸಿದ ಕಾರಣ ಇಂದು ನಡೆಯಬೇಕಾಗಿದ್ದ ಪ್ರತಿಭಟನಾ ಸಭೆಯನ್ನು ಒಂದು ವಾರ ಮೂಂದೂಡಲಾಗಿದೆ.
ಪೋಲಿಸರು ಹೇಳಿದ ಮಾತಿಗೆ ತಪ್ಪಿದಲ್ಲಿ ಮುಂದಿನ ದಿನ ಬೃಹತ್ ಕಕ್ಕಿಂಜೆ ಚಲೋ ಮಾಡಲಾಗುವುದು ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡದಿಂದ ತಿಳಿಸಲಾಗಿದೆ.