ಉಡುಪಿ:(ಡಿ.30) ಹೊಸ ವರ್ಷದ ಪಾರ್ಟಿಗೆಂದು ತರಿಸಿದ್ದ ಗಾಂಜಾ ಮತ್ತು ಎಂಡಿಎಂಎ ಅನ್ನು ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: New Year party: ಹೊಸ ವರ್ಷದ ಪಾರ್ಟಿಗೆ ಹೋಟೆಲ್, ಲಾಡ್ಜ್ ಮಾಲೀಕರಿಗೆ ಶಿವಮೊಗ್ಗ ಎಸ್ಪಿ ಖಡಕ್ ಸೂಚನೆ!!
ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ಹೊಸ ವರ್ಷದ ಪಾರ್ಟಿಗಾಗಿ ತರಿಸಲಾಗಿದ್ದ 2.87 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಮತ್ತು ಎಂಡಿಎಂಎ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನೀರೆ ಹೆದ್ದಾರಿಯಲ್ಲಿ ಯಾರ ಭಯವಿಲ್ಲದೇ ಸಾರ್ವಜನಿಕವಾಗಿ ಗಾಂಜಾ ಮತ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧನ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನು ಕಾಪುವಿನ ಪ್ರೇಮಾನಾಥ(23), ಪ್ರಜ್ವಲ್(28), ಪೆರ್ಡೂರಿನ ಶೈಲೇಶ್ ಶೆಟ್ಟಿ (24) ಮತ್ತು ಉಡುಪಿಯ ರತನ್ (27) ಎಂದು ಗುರುತಿಸಲಾಗಿದೆ.
ಮಾದಕ ದ್ರವ್ಯ ಮಾರಾಟ ಯತ್ನದ ಮಾಹಿತಿ ಮೇರೆಗೆ ಕಾರ್ಕಳ ಉಪವಿಭಾಗ ಮತ್ತು ಸೆನ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ 87,500 ರೂಪಾಯಿ ಮೌಲ್ಯದ ಒಂದು ಕೆಜಿ ಗಾಂಜಾ ಮತ್ತು ಎರಡು ಲಕ್ಷ ರೂಪಾಯಿ ಮೌಲ್ಯದ 37 ಗ್ರಾಮ್ ತೂಕದ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ.