ವಿಟ್ಲ:(ಡಿ.30) ವ್ಯಕ್ತಿಯೋರ್ವರು ಮನೆಯ ಹಟ್ಟಿಯ ಪಕ್ಕಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ.
ಇದನ್ನೂ ಓದಿ: ಉಡುಪಿ: ಹೊಸ ವರ್ಷದ ಪಾರ್ಟಿಗೆಂದು ತರಿಸಿದ್ದ ಗಾಂಜಾ ಮತ್ತು ಎಂಡಿಎಂಎ ಪೊಲೀಸರ ವಶಕ್ಕೆ
ಅತಿಕಾರ ಬೈಲು ನಿವಾಸಿ ವಿಠಲ ಪೂಜಾರಿ (49 ವ.) ಆತ್ಮಹತ್ಯೆ ಮಾಡಿಕೊಂಡವರು.
ಯುವಕೇಸರಿ ಅತಿಕಾರಬೈಲು ಅಧ್ಯಕ್ಷರಾಗಿ, ನಾಟಕ ಕಲಾವಿದರು ಮತ್ತು ಬಿಲ್ಲವ ಸಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಚಂದಳಿಕೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ, ಊರಿನ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯದಲ್ಲಿ ತನ್ನನು ತಾನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.