Astronomy:(ಡಿ.31) ಈ ವರ್ಷ 2025 ರಲ್ಲಿ ಖಗೋಳದಲ್ಲಿ ಕೆಲ ವಿಶೇಷಗಳು ನಡೆಯಲಿವೆ. ಅತೀ ಹೆಚ್ಚು ಸೌರ ಜ್ವಾಲೆಗಳು, ನಾಲ್ಕು ಗ್ರಹಣಗಳು, ಮೂರು ಸೂಪರ್ ಮೂನ್ಗಳು, ಶನಿಗ್ರಹದ ಬಳೆ ಮಾಯ.
ಇದನ್ನೂ ಓದಿ: ಉಜಿರೆ: ಜ.1 ರಿಂದ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಉಚಿತ ಸೇವೆ ಆರಂಭ
- ಸೂರ್ಯನ ಜ್ವಾಲೆಗಳ ನರ್ತನ : ಹನ್ನೊಂದು ವರ್ಷದಲ್ಲೊಮ್ಮೆ ನಡೆಯುವ ಅತೀ ಹೆಚ್ಚು ಸೌರಜ್ವಾಲೆಗಳು ಸೂರ್ಯ ಹೊರ ಹಾಕುವಿಕೆ ಕಳೆದ ವರ್ಷ ಪ್ರಾರಂಭವಾದುದು. ಈ ವರ್ಷದ ಪ್ರಾರಂಭದ ಕೆಲ ತಿಂಗಳಲ್ಲಿ ಅತಿಯಾಗಲಿದೆ. ಕುದಿಯುವ ಸೂರ್ಯ ದಶದಿಶೆಗೆ ವಿಶೇಷ ಶಕ್ತಿ ಕಣಗಳೊಂದಿಗೆ ಬೆಳಕನ್ನು ಚಿಮ್ಮಿ, ಅತೀ ಹೆಚ್ಚು ಸೌರಕಲೆಗಳುಂಟಾಗಲಿವೆ.
2. ಗ್ರಹಣಗಳು: ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸುವುವಾದರೂ ಭಾರತಕ್ಕೆ ಒಂದೇ. ಮಾರ್ಚ್ 13/14 ಚಂದ್ರ ಗ್ರಹಣ, ಮಾರ್ಚೆ 29 ಪಾರ್ಶ್ವ ಸೂರ್ಯ ಗ್ರಹಣ, ಸೆಪ್ಟಂಬರ್ 7/8 ಚಂದ್ರ ಗ್ರಹಣ ಹಾಗೂ ಸೆಪ್ಟಂಬರ್ 21 ಪಾರ್ಶ್ವ ಸೂರ್ಯ ಗ್ರಹಣ . ಇವುಗಳಲ್ಲಿ ಭಾರತಕ್ಕೆ ಸಪ್ಟಂಬರ್ 7 ರ ಚಂದ್ರಗ್ರಹಣ ಒಂದೇ ಗೋಚರ.
3. ಸೂಪರ್ ಮೂನ್: ಈ ವರ್ಷ ಮೂರು ಸೂಪರ್ ಮೂನ್ ಗಳು. ಅಕ್ಟೋಬರ್ 7 ನವಂಬರ್5, ಡಿಸೆಂಬರ್ 4 ಸೂಪರ್ ಮೂನ್ಗಳಾದರೆ ಮಾರ್ಚ್ 14, ಎಪ್ರಿಲ್ 13ಹಾಗೂ ಮೇ 12 ಗಳಲ್ಲಿ ಮೈಕ್ರೋ ಮೂನ್ ಸಂಭವಿಸಲಿದೆ.
3. ಶನಿಗ್ರಹದ ಬಳೆ ಮಾಯ : 29ವರ್ಷಕ್ಕೆ ಎರಡು ಬಾರಿ ಭೂಮಿಯವರಿಗೆ ಶನಿಗ್ರಹದ ಸುಂದರ ಬಳೆಗಳು ಕಾಣುವುದೇ ಇಲ್ಲ.ಈ ವರ್ಷದ ಮಾರ್ಚ್ ನಿಂದ ನವಂಬರ್ ವರೆಗೆ ದೂರದರ್ಶಕದಲ್ಲಿ ಶನಿಯ ಬಳೆಗಳೇ ಕಾಣುವುದಿಲ್ಲ. ಶನಿಗ್ರಹದ ಬಳೆಗಳ ಸಮತಲ ಹಾಗೂ ಭೂಮಿಯ ಸಮತಲ ಒಂದೇ ಆಗುವುದೇ ಇದಕ್ಕೆ ಕಾರಣ.
ಈ ವರ್ಷ ಜನವರಿಯಲ್ಲಿ ಮಂಗಳ, ಸೆಪ್ಟಂಬರ್ ನಲ್ಲಿ ಶನಿ ಡಿಸೆಂಬರ್ ನಲ್ಲಿ ಗುರುಗ್ರಹ ಭವ್ಯವಾಗಿ ಕಾಣಲಿವೆ.
ವಿಶೀಷವೆಂದರೆ ಸಂಜೆಯ ಆಕಾಶದಲ್ಲಿ ಜನವರಿ ಅಂತ್ಯದಲ್ಲಿ ಕಣ್ಣಿಗೆ ಕಾಣುವ ನಾಲ್ಲು ಗ್ರಹಗಳು ಹಾಗೆಯೇ ಫೆಬ್ರವರಿ ಅಂತ್ಯದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಬುದ, ಶುಕ್ರ, ಶನಿ ಗುರು ಹಾಗೂ ಮಂಗಳ ಈ ಐದು ಗ್ರಹಗಳೂ ಸುಂದರವಾಗಿ ಕಾಣಲಿವೆ.