Fri. Jan 10th, 2025

Bantwal: ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ, ಬಿ.ಸಿ. ರೋಡ್ ಇದರ ಆಶ್ರಯದಲ್ಲಿ 29ನೇ ವರ್ಷದ ಸಹಮಿಲನ ಕಾರ್ಯಕ್ರಮ

ಬಂಟ್ವಾಳ:(ಡಿ.31) ಮಧುರ ಮನಸ್ಸುಗಳ ಮಿಲನವೇ ಸಹಮಿಲನ ಎಂದು ಕೃಷಿ ವಿಜ್ಞಾನಿ ಹರೀಶ್ ಶೆಣೈ ಹೇಳಿದರು.

ಇದನ್ನೂ ಓದಿ: ಬಂಟ್ವಾಳ: ಹಿಂದೂ ಯುವಕನಿಗೆ ಮುಸ್ಲಿಂ ಯುವಕರಿಂದ ಥಳಿತ

ಅವರು ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ಬಿಸಿ ರೋಡ್ ಇದರ ಆಶ್ರಯದಲ್ಲಿ ನಡೆದ 29ನೇ ವರ್ಷದ ಸಹಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾಗರಿಕ ಕ್ರಿಯಾ ಸಮಿತಿಯ ಮೂಲಕ ಸಂಚಯಗಿರಿ ಅಭಿವೃದ್ದಿ ಕಾಣುತ್ತಿದೆ, ಇಂತಹ ಸಂಘಟನೆಗಳು ಇದ್ದಾಗ ಸಮಾಜಕ್ಕೆ ಒಳಿತಾಗುತ್ತದೆ ಎಂದರು.

ಪ್ರಾಧ್ಯಾಪಕ ಡಾ. ದಾಮೋದರ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕನಸು, ಗುರಿ,‌ಸತತ ಪ್ರಯತ್ನ ಇದ್ದಾಗ ಸಾಧನೆ ಮಾಡಲು ಸಾಧ್ಯವಿದೆ. ಕನಸನ್ನು‌ ನನಸು ಮಾಡುವತ್ತ ನಮ್ಮ ಗುರಿಯಿರಬೇಕು. ಅವಕಾಶವನ್ನು ಸದುಪಯೋಗಪಡಿಸಿಕೊಂಡಾಗ ಯಶಸ್ಸು ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.


ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಪುರುಷೋತ್ತಮ ಹೆಬ್ಬಾರ್ ಮರಕಡ ಭಾಗವಹಿಸಿದ್ದರು.
ನಾಗರಿಕ ಕ್ರಿಯಾ ಸಮಿತಿ ಗೌರವಾಧ್ಯಕ್ಷ ನರಸಿಂಹ ರಾಜ್ ಹೊಳ್ಳ, ಉಪಾಧ್ಯಕ್ಷೆ ಪ್ರಿಯಾಲತಾ, ಕ್ರೀಡಾ ಕಾರ್ಯದರ್ಶಿ ಪುರಂದರ ಶೆಟ್ಟಿ ಉಪಸ್ಥಿತರಿದ್ದರು. 75 ವರ್ಷ ದಾಟಿದ ಹಿರಿಯರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.


ಸಾಧಕರನ್ನು ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಾರಾಯಣ ನಾಯ್ಕ್ ದಂಪತಿಯನ್ನು ಗೌರವಿಸಲಾಯಿತು. ಕಾರ್ಯದರ್ಶಿ ಶೇಖರ ಎಂ. ಸ್ವಾಗತಿಸಿದರು, ಉಪನ್ಯಾಸಕಿಯರಾದ ಜ್ಯೋತಿ,
ಅಕ್ಷತ ಎಂ. ಸನ್ಮಾನಿತರನ್ನು ಪರಿಚಯಿಸಿದರು. ಕೋಶಾಧಿಕಾರಿ ಎ. ದಾಮೋದರ ಸಂಚಯಗಿರಿ ವಂದಿಸಿದರು, ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ , ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *