Tue. Jan 7th, 2025

Navura: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್‌ ನಲ್ಲಿ ಸಂಭ್ರಮದ ಧನು ಪೂಜೆ – ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಭಾಗಿ

ನಾವೂರ,ಡಿ.31( ಯು ಪ್ಲಸ್ ಟವಿ): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಇಲ್ಲಿ ಧನು ಪೂಜೆ ನಡೆಯಿತು.

ಇದನ್ನೂ ಓದಿ: ಧರ್ಮಸ್ಥಳ: ಅಡಿಗಾಸ್ ಯಾತ್ರಾ ಪ್ರವಾಸ ದರ್ಶನದ ಮಾಹಿತಿ ಕೈಪಿಡಿಯ ಅನಾವರಣ

ಇಂದು ನಡೆದ ಈ ಧನು ಪೂಜೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸೇರಿದಂತೆ ಹಲವಾರು ಮಂದಿ ಭಕ್ತಾದಿಗಳು ಓಂಕಾರ ಸ್ಮರಣೆ ಮತ್ತು ವಿಷ್ಣು ಸಹಸ್ರನಾಮ ಪಠಣ ಮಾಡಿದರು. ಇದೇ ವೇಳೆ ಮಾತನಾಡಿದ ಶಾಸಕರು, ಗೋಪಾಲಕೃಷ್ಣ ದೇವಸ್ಥಾನದಲ್ಲಿ ಹಿಂದೂ ಸಮಾಜ ಧಾರ್ಮಿಕ ಆಚರಣೆಯನ್ನು ಮಾಡುತ್ತಿರುವುದು ಶ್ಲಾಘನೀಯವಾದ ಕಾರ್ಯ ಎಂದರು.

ಇನ್ನು ದೇವಸ್ಥಾನದಲ್ಲಿ ಆಡಳಿತ ಮಂಡಳಿಯ ಪ್ರಮುಖರುಗಳಲ್ಲಿ ಓರ್ವರಾದ ಡಾ.ಪ್ರದೀಪ್ ಅವರು ಮಾತನಾಡಿ, ಧನು ಪೂಜೆ ಆಚರಣೆಯ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ, ಡಾ.ಎನ್.ಎಮ್, ದೇವಳದ ಟ್ರಸ್ಟ್‌ ನ ಅಧ್ಯಕ್ಷ ಹರೀಶ್ ಸಾಲಿಯಾನ್ ಸೇರಿದಂತೆ ಹಲವಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು