Sun. Jan 5th, 2025

Puttur: ಚರಂಡಿ ಮೇಲ್ಭಾಗದ ಪೈಪ್‌ನಲ್ಲಿ ಸಿಲುಕಿದ ಮಹಿಳೆಯ ಕಾಲು!! – ಮಹಿಳೆಯನ್ನು ರಕ್ಷಿಸಿದ ಸ್ಥಳೀಯರು!!

ಪುತ್ತೂರು:(ಡಿ.31) ಮುಖ್ಯರಸ್ತೆ ಬದಿಯ ಚರಂಡಿಯ ಮೇಲ್ಭಾಗದಲ್ಲಿ ಹಾಕಲಾಗಿದ್ದ ಪೈಪ್‌ನಲ್ಲಿ ಮಹಿಳೆಯ ಕಾಲು ಸಿಲುಕಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಇದನ್ನೂ ಓದಿ: ನಾವೂರ: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್‌ ನಲ್ಲಿ ಸಂಭ್ರಮದ ಧನು ಪೂಜೆ

ಪುತ್ತೂರು ನಗರದ ಹೂವಿನ ಮಾರುಕಟ್ಟೆ ಪಕ್ಕದಲ್ಲೇ ಕಾಲನಿಗೆ ಹೋಗುವ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮುಖ್ಯರಸ್ತೆಯಿಂದ ಕಾಲನಿ ರಸ್ತೆಗೆ ತಿರುಗುವ ಪ್ರದೇಶದಲ್ಲಿ ಚರಂಡಿಗೆ ಪೈಪ್‌ಲೈನ್ ಹಾಕಲಾಗಿತ್ತು.

ಇದು ಕೆಲವು ಸಮಯಗಳಿಂದ ತುಂಡಾಗಿದ್ದು, ಸಂಬಂಧಪಟ್ಟವರಿಗೆ ಈ ಬಗ್ಗೆ ವಿಷಯ ತಿಳಿಸುವ ಪ್ರಯತ್ನ ನಡೆಸಲಾಗಿತ್ತು.

ಆದರೂ ಈ ಬಗ್ಗೆ ನಗರಾಡಳಿತ ಎಚ್ಚೆತ್ತುಕೊಂಡಿರಲಿಲ್ಲ. ಪುತ್ತೂರಿಗೆ ಆಗಮಿಸಿದ್ದ ಮಹಿಳೆಯೊಬ್ಬರು ಪೈಪ್‌ಲೈನೊಳಗಡೆ ಕಾಲಿಟ್ಟಿದ್ದಾರೆ. ಪರಿಣಾಮ ಕಾಲು ಪೈಪ್‌ನಲ್ಲಿ ಸಿಲುಕಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೈಪ್‌ಲೈನ್ ಅನ್ನು ಕತ್ತರಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.

Leave a Reply

Your email address will not be published. Required fields are marked *