ಉಡುಪಿ:(ಡಿ.31) ಆನ್ ಲೈನ್ ಆರ್ಡರ್ ಮಾಡಿ ಕಾರಿನಲ್ಲೇ ಬರ್ಗರ್ ತಿಂದು , ಕಾರಿನಲ್ಲಿಯೇ ಕುಳಿತು ಇಬ್ಬರು ಯುವಕರು ಕಸ ಎಸೆಯುತ್ತಿದ್ದ ಘಟನೆ ಉಡುಪಿ ನಗರದ ಬನ್ನಂಜೆಯಲ್ಲಿ ನಡೆದಿದೆ.
ಇದನ್ನೂ ಓದಿ: Astronomy: 2025 ರಲ್ಲಿ ಖಗೋಳದಲ್ಲಿ ಕೆಲ ವಿಶೇಷಗಳು ನಡೆಯಲಿವೆ?!
ಏನಿದು ಘಟನೆ?
ಆನ್ ಲೈನ್ ಆರ್ಡರ್ ಮಾಡಿ ಕಾರಿನಲ್ಲೇ ಬರ್ಗರ್ ತಿಂದು , ಬರ್ಗರ್ ತಿನ್ನುತ್ತಾ ಕುಳಿತಲ್ಲೇ ಕಾರಿನಿಂದ ಕಸ ಎಸೆಯುತ್ತಿದ್ದ ಇಬ್ಬರು ಯುವಕರನ್ನು ಕಂಡು ಬೈಕ್ ಸವಾರನೋರ್ವ ಪ್ರಶ್ನಿಸಿದ್ದಾನೆ.
ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಾ ಬೈಕ್ ಸವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಡಿಯೋ ಚಿತ್ರೀಕರಣ ಮಾಡುತ್ತಿದ್ದಂತೆ ಯುವಕರು ಕಾಲ್ಕಿತ್ತಿದ್ದಾರೆ. ಏಕಾಏಕಿ ಅತೀ ವೇಗದಲ್ಲಿ ಕಾರು ಚಲಾಯಿಸಿ ಎಸ್ಕೇಪ್ ಆಗಿದ್ದಾರೆ.
ಕಾರಿನಲ್ಲೇ ಕುಳಿತು ರಸ್ತೆ ಬದಿ ಕಸ ಎಸೆಯುತ್ತಿದ್ದ ಯುವಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.