Wed. Jan 8th, 2025

Gandibagilu: ಸಿಯೋನ್ ಆಶ್ರಮ ಟ್ರಸ್ಟ್ (ರಿ.)‌ ನಲ್ಲಿ ಹೊಸವರ್ಷ ಆಚರಣೆ

ಗಂಡಿಬಾಗಿಲು:(ಜ.2) ಸಿಯೋನ್ ಆಶ್ರಮ ಟ್ರಸ್ಟ್ (ರಿ.), ಗಂಡಿಬಾಗಿಲು ಇಲ್ಲಿ ಹೊಸವರ್ಷ ಸಂಭ್ರಮಾಚರಣೆ, ವಾಹನ ಚಾಲಕ-ಮಾಲಕರ ಸಂಘ ಹಾಗೂ ಊರ-ನೆರೆಕರೆಯ ಗ್ರಾಮಸ್ಥರಿಂದ 12ನೇ ವರ್ಷದ ಸ್ನೇಹಭೋಜನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.

ಇದನ್ನೂ ಓದಿ: ಉಜಿರೆ: ಬೆನಕ ರಜತ ಸಂಭ್ರಮ ಲಾಂಛನ ಅನಾವರಣ

ಸಭಾ ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನಲಂಕರಿಸಿದ್ದ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀಯುತ ಡಾ.ಯು.ಸಿ.ಪೌಲೋಸ್‌ರವರು ಹೊಸ ವರ್ಷಕ್ಕೆ ಶುಭಾಶಯಗಳನ್ನು ಹಾರೈಸಿ, ನಾವು ಯಾವುದೇ ಜಾತಿ-ಮತ ಭೇದ-ಭಾವವಿಲ್ಲದೆ ಐಕ್ಯತೆಯಿಂದ ಒಂದಾಗಿ ಬಾಳೋಣ ಎಂದರು.

ಅತಿಥಿಗಳಾಗಿ ಸಂಸ್ಥೆಯ ಹಿತೈಷಿಗಳಾದ ಶ್ರೀಯುತ ಡೆನ್ನಿ ತೋಟತ್ತಾಡಿ, ರಶ್ಮಿಜೋಯ್ ತೋಟತ್ತಾಡಿ, ಪ್ರಭಾ ಪಣಚಿಕಲ್ ಗಂಡಿಬಾಗಿಲು, ಶ್ರೀಮತಿ ಮೇರಿ ಒ.ಜೆ., ಟ್ರಸ್ಟೀ ಸದಸ್ಯರುಗಳಾದ ಶ್ರೀಮತಿ ಮೇರಿ ಯು.ಪಿ. ಮತ್ತು ಶ್ರೀಯುತ ಸುಭಾಷ್ ಯು.ಪಿ., ಆಶ್ರಮನಿವಾಸಿಗಳಾದ ಪ್ರದೀಪ್ ಮತ್ತು ಯಶೋಧರವರು ವೇದಿಕೆಯನ್ನಲಂಕರಿಸಿದ್ದರು.

ಸಿಯೋನ್ ಆಶ್ರಮ ನಿವಾಸಿಗಳಿಗೋಸ್ಕರ ವಾಹನ ಚಾಲಕ-ಮಾಲಕರ ಸಂಘ ಹಾಗೂ ಊರ ನೆರೆಕರೆಯ ಗ್ರಾಮಸ್ಥರು ಪ್ರತೀ ವರ್ಷ ಜನವರಿ ಒಂದರಂದು ಒಂದು ದಿನದ ಅನ್ನದಾನ ನೀಡುತ್ತಿದ್ದು, ಈ ಕಾರ್ಯಕ್ರಮದ ಮುಂದಾಳತ್ವವನ್ನು ಸಂಸ್ಥೆಯ ಹಿತೈಷಿಗಳಾದ ಶ್ರೀಯುತ ಜೋಸೆಫ್ ಪರುವಕಾರನ್ ಮತ್ತು ಶ್ರೀಯುತ ಡೆನ್ನಿಯವರು ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟೀ ಸದಸ್ಯರುಗಳು, ಕುಟುಂಬಸ್ಥರು, ಸಿಬ್ಬಂದಿವರ್ಗದವರು, ಆಶ್ರಮ ನಿವಾಸಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಿಬ್ಬಂದಿ ಶ್ರೀಮತಿ ಅಕ್ಷತಾರವರು ಸ್ವಾಗತಿಸಿ, ಸಿಬ್ಬಂದಿ ಶ್ರೀಮತಿ ದಿನವತಿಯವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *