Sun. Jan 5th, 2025

Kadaba: ಪ್ರೀತಿಯ ಹೆಸರಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಜೊತೆ ದೈಹಿಕ ಸಂಪರ್ಕ – ಯುವಕ ನ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲು!!!

ಕಡಬ:(ಜ.2) ಪ್ರೀತಿಯ ಹೆಸರಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ವಂಚನೆ ಆರೋಪದಡಿ ಕೋಡಿಂಬಾಳ ದ ಯುವಕನನ್ನು ಬಂಧಿಸಲಾಗಿದೆ.

ಕೋಡಿಂಬಾಳ ಗ್ರಾಮದ ಓಂಕಲ್ ನಿವಾಸಿ ಪ್ರವೀಣ್ ಪೂಜಾರಿ ಬಂಧಿತ ಆರೋಪಿ.

ಆರೋಪಿ ಪ್ರವೀಣ್ ಪೂಜಾರಿ ಕಾಲೇಜೊಂದರಲ್ಲಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪ್ರೀತಿಸುವ ನೆಪದಲ್ಲಿ ಆಕೆಯ ವಿಶ್ವಾಸ ಗಳಿಸಿ ಬಳಿಕ ಬಾಡಿಗೆ ರೂಮ್ ಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ , ವಿಡಿಯೋ ಚಿತ್ರೀಕರಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಪ್ರವೀಣ್ ಪ್ರೀತಿ ಹೆಸರಲ್ಲಿ ಅಪ್ರಾಪ್ತೆ ಜೊತೆ ಅನೇಕ ಕಡೆ ಸುತ್ತಾಡಿದ್ದ , ಅನೇಕ ಬಾರಿ ಪುತ್ತೂರು ಬಳಿಯ ಬಾಡಿಗೆ ರೂಮ್ ಗೆ ಕರೆದೊಯ್ದು ದೈಹಿಕವಾಗಿ ಬಳಸಿಕೊಂಡಿದ್ದ. ಅಲ್ಲದೇ ಗರ್ಭಿಣಿಯಾಗದಂತೆ ಮಾತ್ರೆಯನ್ನು ತಂದು ಕೊಟ್ಟಿದ್ದ..

ಇದರ ಜೊತೆಗೆ ಖಾಸಗಿ ಕ್ಷಣದ ನಗ್ನ ವಿಡಿಯೋ ಗಳನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಎಂದು ಅಪ್ರಾಪ್ತೆ ದೂರಿನಲ್ಲಿ ತಿಳಿಸಿದ್ದಾಳೆ. ಡಿ.30 ರಂದು ಕುಂಬ್ರ ದಲ್ಲಿರುವ ಬಾಡಿಗೆ ರೂಮ್ ಗೆ ಕರೆದೊಯ್ದು ಅಲ್ಲೇ ಉಳಿದುಕೊಂಡು ದೈಹಿಕ ಸಂಪರ್ಕ ಬೆಳೆಸಿದ್ದ . ಮರುದಿನ ರೂಮ್ ನಲ್ಲಿ ಇರುವಾಗಲೇ ಅಪ್ರಾಪ್ತೆ ಯು ತನ್ನ ತಂದೆಗೆ ಕರೆ ಮಾಡಿದ ವಿಚಾರವಾಗಿ ಗಲಾಟೆ ಮಾಡಿ ದೈಹಿಕ ಹಿಂಸೆ ನೀಡಿದ್ದ .

ಬಳಿಕ ಫರಂಗಿಪೇಟೆ ಬಳಿ ರಸ್ತೆ ಬದಿಯಲ್ಲಿ ಬೈಕಿನಲ್ಲಿ ಬಿಟ್ಟು ಹೋಗಿದ್ದ. ನೊಂದ ಅಪ್ರಾಪ್ತೆ ಆತನಿಗೆ ಕರೆ ಮಾಡಿದರೂ ಉತ್ತರಿಸದ ಹಿನ್ನಲೆ ನೊಂದು ಆತ್ಮಹತ್ಯೆ ಗೆ ಯತ್ನಿಸುವ ನಿರ್ಧಾರಕ್ಕೆ ಬಂದು ಫೋನ್ ಮೂಲಕ ಮನೆಯವರ ಜೊತೆ ಮಾತನಾಡಿ ವಿಷಯ ತಿಳಿಸಿದ ಹಿನ್ನಲೆ ಮನೆಯವರು ಧೈರ್ಯ ತುಂಬಿ ಮನೆಗೆ ಕರೆದುಕೊಂಡು ಬಂದಿದ್ದರು. ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಆ ವಿಷಯವನ್ನು ಮುಚ್ಚಿಟ್ಟು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ದೂರು ಸ್ವೀಕರಿಸಿದ ಕಡಬ ಪೊಲೀಸರು ಸುಳ್ಯದಲ್ಲಿದ್ದ ಯುವಕ ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಆರೋಪಿ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *