Wed. Jan 8th, 2025

Udupi: ಜಿಮ್ ನಲ್ಲಿ ಹೊಡೆದಾಟ ದೂರು – ಪ್ರತಿ ದೂರು ದಾಖಲು

ಉಡುಪಿ:(ಜ.2) ಉಡುಪಿಯ ಅಜ್ಜರಕಾಡು ಸರಕಾರಿ ಜಿಮ್ ನಲ್ಲಿ ಹೊಡೆದಾಟ ನಡೆದಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.

ಉದ್ಯಾವರ ಪ್ರದೀಪ್ ಎಂದಿನಂತೆ ಡಿ.31 ರಂದು ಬೆಳಗ್ಗೆ ಜಿಮ್ ಗೆ ತೆರಳಿದ್ದು , ವಾಪಸ್ ಬರುವಾಗ ಅದೇ ಜಿಮ್ ಎನ್ ಸದಸ್ಯ ಲಕ್ಷಿತ್ ಎಂಬಾತ “ನಿಮ್ಮನ್ನು ಜಿಮ್ ಟ್ರೈನರ್ ಉಮೇಶ್ ಕರೆಯುತ್ತಿದ್ದಾರೆ” ಎಂದು ಹೇಳಿದ್ದ .

ಅದರಂತೆ ಪ್ರದೀಪ್ ಅವರು ಉಮೇಶ್ ಬಳಿಗೆ ಹೋಗಿ ವಿಚಾರಿಸಿದಾಗ ಅವರು , ನಾನು ನಿಮ್ಮನ್ನು ಕರೆದಿಲ್ಲ ಎಂದರು. ಅನಂತರ ಲಕ್ಷಿತ್ ನಲ್ಲಿ ಈ ಬಗ್ಗೆ ಕೇಳಲು ಹೋದಾಗ , ಆತ ಏಕಾಏಕಿ ಜಿಮ್ ಸಲಕರಣೆ ಯಿಂದ ಪ್ರದೀಪ್ ತಲೆಗೆ ಹೊಡೆದಿದ್ದಾನೆ ಎಂದು ಒಂದು ದೂರಿನಲ್ಲಿ ಆರೋಪಿಸಲಾಗಿದೆ.

ಪ್ರತಿದೂರು:

ಇದೇ ಪ್ರಕರಣಕ್ಕೆ ಸಂಬಂಧಿಸಿ ಕೊಡವೂರಿನ ಲಕ್ಷಿತ್ ನೀಡಿದ ಪ್ರತಿದೂರಿನಲ್ಲಿ , ತಾನು ಡಿ.31 ರಂದು ಅಜ್ಜರಕಾಡು ಜಿಮ್ ನ ಕೊಠಡಿಯ ಒಳಗೆ ಹೋದಾಗ ಪ್ರದೀಪ್ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾನೆ. ಅನಂತರ ಜಿಮ್ ನಲ್ಲಿದ್ದ ರಾಡ್ ನಿಂದ ಹಲ್ಲೆಗೆ ಮುಂದಾದ. ಪೆಟ್ಟನ್ನು ತಡೆಯುವ ಪ್ರಯತ್ನದಲ್ಲಿ ಬಲ ಕೈ ಗೆ ಏಟಾಗಿದೆ. ಈ ವೇಳೆ ಪ್ರದೀಪ್ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *