Wed. Jan 8th, 2025

Ujire: ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ “ವ್ಯವಹಾರ್” ಮಾರಾಟ ಮೇಳ

ಉಜಿರೆ(ಜ. 2): ವಿದ್ಯಾರ್ಥಿಗಳು ತಮ್ಮ ಸಮಯವನ್ನು ‘ವೇಸ್ಟ್’ ಮಾಡುವ ಬದಲು ‘ಇನ್ವೆಸ್ಟ್’ ಮಾಡಬೇಕು. ಉತ್ತಮ ಉದ್ಯೋಗಿಗಳು ಅಥವಾ ವ್ಯಾಪಾರಿಗಳಾಗಲು ಸೇವಾ ಮನೋಭಾವ, ಸೃಜನಶೀಲತೆಯೊಂದಿಗೆ ಗ್ರಾಹಕರನ್ನು ಸೆಳೆಯುವ ಶಕ್ತಿ ಇರಬೇಕು ಎಂದು ಸೋನಿಯಾ ಯಶೋವರ್ಮ ಹೇಳಿದರು.

ಇದನ್ನೂ ಓದಿ: Mangaluru: ಆಯತಪ್ಪಿ ಪಾಳು ಬಾವಿಗೆ ಬಿದ್ದು ಮೀನುಗಾರ ಮೃತ್ಯು!!

ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗ ಮತ್ತು ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳಲ್ಲಿ ವ್ಯವಹಾರದ ಕುರಿತು ಅರಿವು ಮೂಡಿಸಲು ಕಾಲೇಜಿನ ಒಳಾಂಗಣದಲ್ಲಿ ಜ.1 ರಂದು ಆಯೋಜಿಸಲಾಗಿದ್ದ ‘ವ್ಯವಹಾರ್’ ಮಾರಾಟ ಮೇಳದ ಎರಡನೇ ಆವೃತ್ತಿ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನಲ್ಲಿ ಸ್ವಾವಲಂಬನೆ ಕುರಿತು ಹಲವಾರು ಚಟುವಟಿಕೆಗಳು ನಡೆಯುತ್ತವೆ. ವಿದ್ಯಾರ್ಥಿಗಳು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಸಮಯವನ್ನು ಸದುಪಯೋಗಪಡಿಸಿಕೊಂಡು ಪ್ರಯತ್ನಶೀಲರಾದಾಗ ಜೀವನ ಯಶಸ್ಸಿನ ಹಾದಿ ಹಿಡಿಯುತ್ತದೆ ಎಂದು ಅವರು ಸಲಹೆ ನೀಡಿದರು.

ಹೊಸ ವರ್ಷದ ಶುಭಾಶಯ ತಿಳಿಸಿದ ಅವರು, “ಹೊಸ ವರ್ಷ ಖಾಲಿ ಪುಸ್ತಕವಿದ್ದಂತೆ. ಅದರಲ್ಲಿ ಬಣ್ಣ ತುಂಬುವ ಕೆಲಸ ನಮ್ಮಿಂದ ಆಗಬೇಕಾಗಿದೆ. ಎಲ್ಲರೂ ಉತ್ತಮ ಬಣ್ಣವನ್ನು ತುಂಬುವತ್ತ ಸಾಗಿ. ಅದಕ್ಕೆ ಈ ‘ವ್ಯವಹಾರ್’ ಮೊದಲ ಪುಟವಾಗಲಿ” ಎಂದು ಹಾರೈಸಿದರು.

ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿ ವಿಕ್ರಮ್ ಮಾತನಾಡಿದರು. ಜೀವನದಲ್ಲಿ ಪ್ರತಿನಿತ್ಯ ವ್ಯವಹಾರ ನಡೆಯುತ್ತಲೇ ಇರುತ್ತದೆ. ವ್ಯವಹಾರ ನಡೆಸಲು ಕನೆಕ್ಟಿವಿಟಿ (ಸಂಪರ್ಕ) ಮುಖ್ಯವಾಗಿರುತ್ತದೆ. ವೈಯಕ್ತಿಕ ಮತ್ತು ವ್ಯಾವಹಾರಿಕ ಬದುಕು ಒಂದಕ್ಕೊಂದು ಹೊಂದಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, “ಪಠ್ಯದಲ್ಲಿ ಕಲಿಯುವ ವ್ಯವಹಾರವನ್ನು ಕಾರ್ಯರೂಪಕ್ಕೆ ತರುವ ಸುದಿನ ಇಂದಾಗಿದೆ. ಈ ರೀತಿಯ ವೇದಿಕೆ ಸ್ವ- ಉದ್ಯೋಗಕ್ಕೆ ನೆರವಾಗುತ್ತದೆ” ಎಂದರು.

ಕಾಲೇಜಿನ ಆಡಳಿತಾಂಗ ಕುಲಸಚಿವೆ ಡಾ. ಶಲೀಪ್ ಕುಮಾರಿ, ಪರೀಕ್ಷಾಂಗ ಕುಲಸಚಿವೆ ನಂದಾ ಕುಮಾರಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ., ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶಕುಂತಲಾ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು.

ಆಹಾರ ಪದಾರ್ಥ, ತರಕಾರಿ ವ್ಯಾಪಾರ ಸಹಿತ ಸುಮಾರು 25 ವಿವಿಧ ಮಳಿಗೆಗಳನ್ನು ತೆರೆದು ವಿದ್ಯಾರ್ಥಿಗಳು ವ್ಯವಹಾರ ನಡೆಸಿದರು.

Leave a Reply

Your email address will not be published. Required fields are marked *