ಬಂಟ್ವಾಳ:(ಜ.3) ನೇತ್ರಾವತಿ ನದಿಯಲ್ಲಿ ಜನರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ದೋಣಿಯ ಅಂಬಿಗನೋರ್ವ ನಾಪತ್ತೆಯಾಗಿದ್ದು, ಸ್ಥಳೀಯರು ಹುಡುಕಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Mangaluru : ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳಿಗೆ ಶ್ಯೂರಿಟಿ ನೀಡುತ್ತಿದ್ದ ಆರೋಪಿ ಅಂದರ್!!
ಬರೀಮಾರ್ ನೇತ್ರಾವತಿ ನದಿಯಲ್ಲಿ ಅಂಬಿಗ ದಿವಾಕರ ನಾಪತ್ತೆಯಾಗಿದ್ಧಾರೆ. ಬಂಟ್ವಾಳ ತಾಲೂಕಿನ ಬರಿಮಾರ್ ಕಡವಿನಬಾಗಿಲು ನಿವಾಸಿ ಅಂಬಿಗ ದಿವಾಕರ ಎಂಬವರು ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದಾರೆ.
ಕಳೆದ ಸುಮಾರು 30 ವರ್ಷಗಳಿಂದ ನೇತ್ರಾವತಿ ನದಿಯಲ್ಲಿ ಜನರ ಪಾಲಿಗೆ ಸೇತುವೆಯಾಗಿದ್ದು ಕೆಲಸ ಮಾಡಿಕೊಂಡಿದ್ದು, ನುರಿತ ಈಜುಗಾರರಾಗಿದ್ದರು.
ಪ್ರತಿ ದಿನ ಬರಿಮಾರು-ಸರಪಾಡಿಗೆ ದೋಣಿ ಮೂಲಕ ಸಂಪರ್ಕ ಸೇತುವೆಯಾಗಿ ಸಂಪರ್ಕ ಕಲ್ಪಿಸುವ ಪ್ರಮುಖ ವ್ಯಕ್ತಿಯಾಗಿದ್ದ ಇವರು ಇಂದು ಕೂಡ ಕಾಯಕದಲ್ಲಿ ತೊಡಗಿದ್ದರು.
ಬೆಳಿಗ್ಗೆ 9 ಗಂಟೆ ಅಂದಾಜಿಗೆ ಬರಿಮಾರವಿನಿಂದ ಸರಪಾಡಿಗೆ ಹೋಗಿ ಅಲ್ಲಿನ ಅಂಗಡಿಯೊಂದರಿಂದ ಮನೆಗೆ ತರಕಾರಿ ಸಾಮಾಗ್ರಿಗಳನ್ನು ಪಡೆದುಕೊಂಡು ವಾಪಸು ತೆರಳಿದ್ದರು.
ಸುಮಾರು 11 ಗಂಟೆ ವೇಳೆ ದೋಣಿ ಬರಿಮಾರು ಕಡವಿನ ಬಾಗಿಲಿನಲ್ಲಿ ತೇಲಾಡುವ ಸ್ಥಿತಿಯಲ್ಲಿದ್ದು, ದಿವಾಕರ ಅವರು ಕಾಣಿಸದೆ ಹಿನ್ನೆಲೆ ಇವರ ಪತ್ನಿ ಸರಪಾಡಿಯ ಅಂಗಡಿಯೊಂದರ ಮಾಲಕರಿಗೆ ಪೋನ್ ಸಂಪರ್ಕ ಮಾಡಿ ಇವರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಸರಪಾಡಿಯಿಂದ ಬರಿಮಾರು ಕಡೆಗೆ ಬಂದವರು ಮನೆಗೆ ತೆರಳದೆ ನಾಪತ್ತೆಯಾಗಿರುವ ಬಗ್ಗೆ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬರಿಮಾರು ಕಡವಿನ ಬಾಗಿಲಿನಲ್ಲಿ ಹಸಿಹುಲ್ಲು ಕಟ್ಟು, ಮೊಬೈಲ್ ಮತ್ತು ಚಪ್ಪಲಿ ನದಿ ಬದಿಯಲ್ಲಿ ಕಾಣಿಸಿಕೊಂಡಿದೆ. ದಿವಾಕರ ಅವರಿಗೆ ಮೂರ್ಚೆರೋಗದ ಬಾಧೆಯಿದ್ದು, ಈ ಹಿಂದೆ ಮೂರ್ಚೆರೋಗಕ್ಕೆ ತುತ್ತಾಗಿ ನದಿ ಬದಿಯಲ್ಲಿ ಬಿದ್ದುಕೊಂಡಿದ್ದ ಘಟನೆ ನಡೆದಿತ್ತು. ಸ್ಥಳೀಯರು ಅವರಿಗೆ ಕಬ್ಬಿಣದ ವಸ್ತುಗಳನ್ನು ತಾಗಿಸಿ ಎಚ್ಚರಿಸಿಕೊಂಡು ಬಂದ ಬಗ್ಗೆ ಹೇಳಿಕೊಂಡಿದ್ದಾರೆ. ಇವತ್ತು ಕೂಡ ಮೂರ್ಛೆ ರೋಗ ಭಾದಿಸಿ ಬಿದ್ದಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗಿದೆ.
ಸ್ಥಳೀಯರು ನದಿಭಾಗದ ಸುತ್ತಮುತ್ತಲು ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ನೀಡಿದ್ದಾರೆ.