ಬೆಳ್ತಂಗಡಿ:(ಜ.3) ಅಖಿಲ ಭಾರತ ಬ್ಯಾರಿ ಮಹಾ ಸಭಾ ದ.ಕ. ಮಂಗಳೂರು ವತಿಯಿಂದ ಜನವರಿ 08 ರಂದು ಕುದ್ಮುಲ್ ರಂಗರಾವ್ ವೇದಿಕೆ ಪುರಭವನ ಮಂಗಳೂರಿನಲ್ಲಿ ನಡೆಯುವ ದ.ಕ.ಜಿಲ್ಲಾ ಪ್ರತಿನಿಧಿ ಸಭೆಯ ಪೂರ್ವಭಾವಿ ಸಭೆಯು ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಬಿ. ಶೇಕುಂಞ ಯವರು ಗುರುತು ಚೀಟಿ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.
ಇದನ್ನೂ ಓದಿ: Aries to Pisces: ಹಣಕಾಸಿನ ವಿಚಾರದಲ್ಲಿ ವೃಶ್ಚಿಕ ರಾಶಿಯವರು ಜಾಗರೂಕರಾಗಿರಿ!!!
ಮುಖ್ಯ ಅತಿಥಿ ಹಾಗೂ ವೀಕ್ಷಕರಾಗಿ ಅ.ಭಾ.ಬ್ಯಾ.ಮಹಾಸಭದ ಅಧ್ಯಕ್ಷ ಅಬ್ದುಲ್ ಅಝೀಝ್ ಬೈಕಂಪಾಡಿ ಆಗಮಿಸಿ ಪ್ರತಿನಿಧಿ ಸಭೆಯ ಕಾರ್ಯರೂಪಗಳನ್ನು ತಿಳಿಸಿದರು.
ಅ.ಭಾ.ಬ್ಯಾ.ಮ. ಸಭಾ ಉಪಾಧ್ಯಕ್ಷ ಯು.ಕೆ. ಮೋನು ಪ್ರತಿನಿಧಿ ಸಭೆಯ ಜವಾಬ್ದಾರಿಗಳನ್ನು ತಿಳಿಸಿದರು. ಮಹಾ ಸಭಾದ ಸದಸ್ಯರುಗಳಾದ ಹುಸೈನ್, ಅಶ್ರಫ್ ಸುರತ್ಕಲ್, ಉಮರಬ್ಬ ಮಾಸ್ಟರ್,
ಮುಹಮ್ಮದ್ ಉಜಿರೆ, ಮುಸ್ತಫಾ ಜಿ.ಕೆ., ಬಿ.ಎಮ್.ಹನೀಫ್, ಅಕ್ಬರ್ ಬೆಳ್ತಂಗಡಿ, ಖಾಲಿದ್ ಪುಲಾಬೆ, ನವಾಝ್ ಕಟ್ಟೆ, ರಝಾಕ್ ಕನ್ನಡಿಕಟ್ಟೆ, ಬದ್ರುದ್ದೀನ್ ಕಾಜೂರು, ಉಮರ್ ಚಪ್ಪಲ್ ಮಾಟ್೯, ಉಮರ್ ಮಟನ್,ಹಸೈನಾರ್ BBS, ಅಬ್ಬಾಸ್ ಎಸ್,ಕೆ ಮೊದಲಾದವರು ಉಪಸ್ಥಿತರಿದ್ದರು.
ಉಮರ್‌ಕುಂಞಿ ನಾಡ್ಜೆ ಸ್ವಾಗತಿಸಿ, ಅಬ್ಬೋನು ಮದ್ದಡ್ಕ ವಂದಿಸಿದರು.