ಬೆಂಗಳೂರು:(ಜ.3) ಗಂಡಸರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಬಸ್ ಟಿಕೆಟ್ ದರ ಶೇ.15ರಷ್ಟು ಹೆಚ್ಚಳ ಮಾಡಲು ಇದ್ದ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಇದನ್ನೂ ಓದಿ: ⭕ಮೂಡಬಿದಿರೆ: ಜೂಜು ಅಡ್ಡೆಗೆ ಸಿಸಿಬಿ ಪೋಲಿಸರು ದಾಳಿ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಈ ಸಭೆಯಲ್ಲಿ ಸಾರಿಗೆ ಬಸ್ಸುಗಳ ಟಿಕೆಟ್ ದರ ಹೆಚ್ಚಳದ ಪ್ರಸ್ತಾವನೆ ಕುರಿತಂತೆ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶೇ. 15ರಷ್ಟು ಟಿಕೆಟ್ ದರ ಏರಿಕೆಗೆ ಸಂಪುಟ ಅನುಮೋದನೆ ನೀಡಿದೆ ಎನ್ನಲಾಗಿದೆ.
ಶಕ್ತಿ ಯೋಜನೆಯ ಮುಖಾಂತರ ಕಂಗೆಟ್ಟಿರುವ ಸರ್ಕಾರ ತನ್ನ ಸಾರಿಗೆ ಸಂಸ್ಥೆಗಳಿಗೆ ಹಣವನ್ನು ನೀಡಲಾಗದೆ ಕೈಚೆಲ್ಲಿ ಕುಳಿತಿದೆ. ಈಗಾಗಲೇ ಉಳಿಸಿಕೊಂಡಿರುವ ಸಾಲದ ಹೊರೆಯನ್ನು ಇಳಿಸಿಕೊಳ್ಳಲು ಬರೋಬ್ಬರಿ 2,000 ಕೋಟಿ ಸಾಲ ಮಾಡಲು ಕೂಡ ಸಾರಿಗೆ ಸಂಸ್ಥೆಗೆ ತಿಳಿಸಿದೆ.