Wed. Jan 8th, 2025

Chikkodi: ಪತ್ನಿ ಸರಸಕ್ಕೆ ಬರದಿದ್ದಾಗ ಮಗಳ ಮೇಲೆ ಎರಗಲೇತ್ನಿಸಿದ ಪಾಪಿ ತಂದೆ – ಕಲ್ಲು ಎತ್ತಿ ಹಾಕಿ ಗಂಡನ ಕೊಂದ ಹೆಂಡತಿ – ದೇಹವನ್ನ ಎರಡು ಭಾಗ ತುಂಡರಿಸಿ ಸಾಗಾಟ – ಆದ್ರೆ ಕೊಲೆ ಹಿಂದಿನ ಅಸಲಿ ರಹಸ್ಯ ಕೇಳಿ ಬೆಚ್ಚಿಬಿದ್ದ ಪೋಲಿಸರು!!!

ಚಿಕ್ಕೋಡಿ:(ಜ.3) ಪತ್ನಿ ಸರಸಕ್ಕೆ ಬರದಿದ್ದಾಗ ಮಗಳ ಮೇಲೆ ಎರಗಲೇತ್ನಿಸಿದ ಪಾಪಿಯನ್ನು ಹೆಂಡತಿಯೇ ಹತ್ಯೆ ಮಾಡಿದ ಘಟನೆ ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ಗ್ರಾಮದ ಉಮರಾಣಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಉಜಿರೆ: ಎಸ್‌. ಡಿ. ಎಂ ಕಾಲೇಜು ಬಿ. ವೋಕ್ ವಿಭಾಗದ ವತಿಯಿಂದ

ಪತ್ನಿ ಸರಸಕ್ಕೆ ಬರಲಿಲ್ಲ ಅಂತ ಹೇಳಿ ಮಗಳ ಮೇಲೆಯೇ ಅತ್ಯಾಚಾರ ಮಾಡಲು ಯತ್ನಿಸಿದ್ದ, ಆದರೆ ಅದು ಸಾಧ್ಯವಾಗಿರಲಿಲ್ಲ. ಇದನ್ನು ಮನಗಂಡ ಪತ್ನಿ ಮಕ್ಕಳು ಮಲಗಿದ ಮೇಲೆ ಕಲ್ಲು ಎತ್ತಿ ಹಾಕಿ ಗಂಡನನ್ನು ಕೊಂದಿದ್ದಾಳೆ. ಆರೋಪಿ ಪತ್ನಿ ಸಾವಿತ್ರಿ ಇಟ್ನಾಳೆ(30) . ಶ್ರೀಮಂತ ಇಟ್ನಾಳೆ ಕೊಲೆಯಾದ ವ್ಯಕ್ತಿ.

ಗಂಡನ ಕೊಂದ ಬಳಿಕ ಮಕ್ಕಳು ಅನಾಥರಾಗ್ತಾರೆ ಅಂತಾ ಸಿನಿಮೀಯ ರೀತಿಯಲ್ಲಿ ಸಾವಿತ್ರಿ ಪ್ಲ್ಯಾನ್‌ ಮಾಡಿದ್ದಳು. ಮನೆಯಲ್ಲಿ ಶವ ಇದ್ರೇ ಅರೆಸ್ಟ್ ಮಾಡ್ತಾರೆ ಅಂತಾ ಆಕೆ ಖತರ್ನಾಕ್ ಐಡಿಯಾವೊಂದನ್ನು ಹೂಡಿದ್ದಳು. ಒಬ್ಬಳಿಗೆ ಶವ ಸಾಗಿಸಲು ಆಗಲ್ಲ ಅಂತಾ ಗಂಡನ ದೇಹವನ್ನೇ ತುಂಡರಿಸಿದ್ದಳು. ದೇಹವನ್ನು ಎರಡು ಭಾಗ ತುಂಡರಿಸಿ ಚಿಕ್ಕ ಬ್ಯಾರೆಲ್ ನಲ್ಲಿ ಹಾಕಿ ಸಾಗಾಟ ಮಾಡಿದ್ದಳು.

ಬ್ಯಾರೆಲ್ ಉರುಳಿಸುತ್ತಾ ಶವ ಒಯ್ದು ಪಕ್ಕದ ಗದ್ದೆಗೆ ಸಾವಿತ್ರಿ ಹಾಕಿದ್ದಳು. ಕಟ್ ಮಾಡಿದ್ದ ದೇಹವನ್ನು ಮತ್ತೆ ಜೋಡಿಸಿದ ರೀತಿಯಲ್ಲಿ ಸಾವಿತ್ರಿ ಹಾಕಿದ್ದಳು. ಕೃತ್ಯಕ್ಕೆ ಬಳಸಿದ್ದ ಬ್ಯಾರೆಲ್ ತೊಳೆದು ಬಾವಿಗೆ ಎಸೆದಿದ್ದಳು. ಮತ್ತೆ ಮನೆಗೆ ಬಂದು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ, ರಕ್ತಸಿಕ್ತವಾದ ಹಾಸಿಗೆ, ಬಟ್ಟೆ ಒಂದು ಚೀಲದಲ್ಲಿ ಪ್ಯಾಕ್ ಮಾಡಿ ಅದನ್ನು ಬಾವಿಗೆ ತೆಗೆದುಕೊಂಡು ಹೋಗಿ ಮೇಲೆ ಬರದಂತೆ ಕಲ್ಲು ಕಟ್ಟಿ ಎಸೆದು ವಾಪಸ್ ಆಗಿದ್ದಳು.


ರಕ್ತ ಬಿದ್ದ ಜಾಗವನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಬಳಿಕ ತನ್ನ ಮೈಮೇಲಿದ್ದ ಬಟ್ಟೆ ಸುಟ್ಟು ಹಾಕಿದ್ದಳು. ಸುಟ್ಟಿದ್ದ ಬೂದಿಯನ್ನು ತಿಪ್ಪೆಗೆ ಪತ್ನಿ ಸಾವಿತ್ರಿ ಎಸೆದಿದ್ದಳು. ಕೊಲೆಗೆ ಬಳಸಿದ್ದ ಕಲ್ಲು ತೊಳೆದು ತಗಡಿನ ಶೆಡ್ ನಲ್ಲಿ ಬಚ್ಚಿಟ್ಟಿದ್ದಳು. ಗಂಡನ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿ ಮನೆಯಲ್ಲಿಟ್ಟಿದ್ದಳು. ಈ ವೇಳೆ ಎಚ್ಚರಗೊಂಡ ಮೊದಲ ಮಗಳಿಗೆ ಎಲ್ಲಿಯೂ ಹೇಳದಂತೆ ಸಾವಿತ್ರಿ ತಾಕೀತು ಮಾಡಿದ್ದಳು. ಬೆಳಗಾಗುವಷ್ಟರಲ್ಲಿ ಕೊಲೆಯ ಸುಳಿವೇ ಸಿಗದಂತೆ ಸಾವಿತ್ರಿ ಮಾಡಿದ್ದಳು. ಜಮೀನಿನಲ್ಲಿ ಶವ ಸಿಗ್ತಿದ್ದಂತೆ ಕೊಲೆ ಕೇಸ್ ದಾಖಲಿಸಿಕೊಂಡು ಪೋಲಿಸರು ತನಿಖೆ ನಡೆಸಿದರು. ಚಿಕ್ಕೋಡಿ ಪೊಲೀಸರ ತನಿಖೆ ವೇಳೆ ಹೆಂಡತಿ ಮೇಲೆ ಅನುಮಾನ, ತಮ್ಮದೇ ಭಾಷೆಯಲ್ಲಿ ವಿಚಾರಿಸಿದಾಗ ತನ್ನಿಂದ ತಪ್ಪಾಗಿದೆ ಕ್ಷಮಿಸಿ ಅಂತಾ ಸಾವಿತ್ರಿ ಕಣ್ಣೀರು ಹಾಕಿ ಸತ್ಯ ಒಪ್ಪಿಕೊಂಡಳು.

ಕೊಲೆಗೆ ಕಾರಣ ಬಿಚ್ಚಿಟ್ಟ ಸಾವಿತ್ರಿ?
15 ವರ್ಷದ ಹಿಂದೆ ಸಾವಿತ್ರಿ ಮತ್ತು ಶ್ರೀಮಂತ ಮದುವೆಯಾಗಿದ್ದರು.ಪತಿ ಶ್ರೀಮಂತ ಇಟ್ನಾಳೆ ಕುಡಿತದ ಚಟ ಹೊಂದಿದ್ದ. ಕುಡಿಯಲು ಹಣ ಕೊಡಬೇಕು, ಬೈಕ್ ಕೊಡಿಸುವಂತೆ ಕಿರುಕುಳ ನೀಡುತ್ತಿದ್ದ. ಯಾರ ಜೊತೆಗೆ ಆದ್ರೂ ಮಲಗು ಹಣ ಕೊಡು ಅಂತಾ ಪೀಡಿಸುತ್ತಿದ್ದ, ಇದೇ ಕಾರಣಕ್ಕೆ ಪರ ಪುರುಷರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಮಗಳ ಮೇಲೆ ಎರಗಲೇತ್ನಿಸಿದ್ದನ್ನ ನೋಡಿ ಸಹಿಸಿಕೊಳ್ಳದೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಮಕ್ಕಳು ಅನಾಥವಾಗ್ತವೆ ಬಿಟ್ಟು ಬಿಡಿ ಎಂದು ಆರೋಪಿ ಕಣ್ಣೀರು ಹಾಕಿದ್ದಾಳೆ. ಆರೋಪಿ ಸಾವಿತ್ರಿ ಇಟ್ನಾಳೆ ಬಂಧಿಸಿ ಚಿಕ್ಕೋಡಿ ಠಾಣೆ ಪೊಲೀಸರು ಜೈಲಿಗಟ್ಟಿದ್ದಾರೆ.

Leave a Reply

Your email address will not be published. Required fields are marked *