ಮೂಡಬಿದಿರೆ:(ಜ.3) ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜನಕಟ್ಟೆಯ ಆರಂತಬೆಟ್ಟು ಎಂಬಲ್ಲಿನ ಶೆಡ್ ಒಂದಕ್ಕೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಅಲ್ಲಿ ಅಂದರ್ – ಬಾಹರ್ ಜೂಜು ಆಡುತ್ತಿದ್ದ 7 ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ಪ್ರತಿಭಾ ದಿನೋತ್ಸವಕ್ಕೆ ಚಾಲನೆ
ಮೂಡುಬಿದಿರೆ ತಾಲ್ಲೂಕಿನ ಸಂಪಿಗೆ ಅಂಚೆಯ ಪುತ್ತಿಗೆ ಪದವು ಮನೆಯ ಶರೀಫ್ (52), ಬೆಳುವಾಯಿಯ ಆರಂತಬೆಟ್ಟುವಿನ ಜಗದೀಶ್ ಆಚಾರ್ಯ(43), ತೋಡಾರಿನ ಜಯರಾಮ ಶೆಟ್ಟಿ (53),
ಕಾರ್ಕಳ ತಾಲ್ಲೂಕು ಬಜಗೋಳಿ ಗ್ರಾಮದ ಮೂಡಲ್ ಬಂಡಸಾಲೆ ಮನೆಯ ಸತೀಶ್ ಶೆಟ್ಟಿ (46), ಕಾಂತಾವರದ ಜೀವಂದರ್(48), ಸಾಣೂರಿನ ಸುನಿಲ್ ಕುಮಾರ್ (43), ತೆಳ್ಳಾರ್ ರಸ್ತೆ ಬಳಿಯ ಗುಡ್ಡೆಯಂಗಡಿಯ ಮನೋಹರ ಸಾಲ್ಯಾನ್ (56) ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳಿಂದ ಜೂಜಾಟಕ್ಕೆ ಬಳಸಿದ್ದ ನಗದು 56,170, ಎಂಟು ಮೊಬೈಲ್ ಫೋನುಗಳು, ಒಂದು ಕಾರು, ಆರು ಬೈಕ್‌ಗಳು, ಒಂದು ಆಟೋರಿಕ್ಷಾ, ಇಸ್ಪೀಟ್ ಎಲೆಗಳು, ಮೇಜು ಮತ್ತು ಕುರ್ಚಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 9.23 ಲಕ್ಷ ಎಂದು ತಿಳಿದು ಬಂದಿದೆ. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.