Wed. Jan 8th, 2025

Vitla: ಸಂಚರಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ಸಿನಿಂದ ಕಳಚಿಬಿದ್ದ ಡೀಸೆಲ್ ಟ್ಯಾಂಕ್ !! – ಆಮೇಲೆ ಆಗಿದ್ದೇನು?!

ವಿಟ್ಲ: (ಜ.3) ಸಂಚರಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ಸಿನ ಡೀಸೆಲ್ ಟ್ಯಾಂಕ್ ಕಳಚಿ ಬಿದ್ದ ಘಟನೆ ಮಾಣಿ ಸಮೀಪದ ಮಹಾವೀರ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ಬೆಳ್ತಂಗಡಿ: ಜ. 7 ರಂದು ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಭಕ್ತರಿಗಾಗಿ ನಿರ್ಮಿಸಿದ “ಶ್ರೀ ಸಾನ್ನಿಧ್ಯ” ಉದ್ಘಾಟನೆ ಹಾಗೂ

ಮಂಗಳೂರಿನಿಂದ ಅರಸೀಕೆರೆಗೆ ತೆರಳುತ್ತಿದ್ದ ಸರಕಾರಿ ಬಸ್ ಮಾಣಿ ಸಮೀಪದ ಮಹಾವೀರ ತಲುಪುತ್ತಿದ್ದಂತೆ ಡೀಸೆಲ್ ಟ್ಯಾಂಕ್ ಹೆದ್ದಾರಿಗೆ ಕಳಚಿ ಬಿದ್ದಿದೆ. ಘಟನೆಯಿಂದಾಗಿ ಬಸ್ ರಸ್ತೆಯಲ್ಲೇ ನಿಂತಿದೆ.

ಆ ಬಳಿಕ ಬದಲಿ ಬಸ್ಸಿನ ಮೂಲಕ ಪ್ರಯಾಣಿಕರನ್ನು ಕಳುಹಿಸಿಕೊಡಲಾಯಿತು. ಹೆದ್ದಾರಿ ಕಾಮಗಾರಿ ವಿಳಂಬದಿಂದಾಗಿ ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *