ಬೆಳ್ತಂಗಡಿ:(ಜ.4) ಗುರುವಾಯನಕೆರೆ, ಕಾರ್ಕಳ ಮೂಡುಬಿದ್ರೆ ಕೂಡು ರಸ್ತೆಯ ಶಕ್ತಿನಗರ ಸರ್ಕಲ್ ನಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವನ್ನು 5 ಬಾರಿ ಪ್ರತಿನಿಧಿಸಿರುವ ಬಡವರ ಪರ ಹೋರಾಟ ಮಾಡಿದ ಭ್ರಷ್ಟಾಚಾರವನ್ನು ಕಠಿಣ ಶಬ್ದಗಳಲ್ಲಿ ವಿರೋಧಿಸುತ್ತಿದ್ದ
ಇದನ್ನೂ ಓದಿ: ಕಿನ್ನಿಗೋಳಿ: ಗದ್ದೆಯಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು
ನೇರ ನಡೆನುಡಿಯ ನಾಯಕ ಕುವೆಟ್ಟು ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ದಿವಂಗತ ಕೆ ವಸಂತ ಬಂಗೇರವರ ಪುತ್ಥಳಿ ಯನ್ನು ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ ಕಾರ್ಕಳ ಮೂಡುಬಿದರೆ ಕೂಡು ರಸ್ತೆಯ ಶಕ್ತಿನಗರ ಸರ್ಕಲ್ ನಲ್ಲಿ ಸ್ಥಾಪನೆ ಮಾಡುವಂತೆ
ಮಾಜಿ ತಾಲೂಕು ಪಂಚಾಯತ್ ಗೋಪಿನಾಥ್ ನಾಯಕ್ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಧನಂಜಯ್ ರಾವ್ ಗುರವಾಯನಕೆರೆ. ಕಾಶ್ಮೀರ್ ಪಾಯಸ್ ಮಾಜಿ ಪಂಚಾಯತ್ ಸದಸ್ಯರು. ರಿಯಾಜ್ ಪಿಲಿಚಾಂಡಿಕಲ್ಲು ಮಾಜಿ ಪಂಚಾಯತ್ ಸದಸ್ಯರು, ಪ್ರವೀಣ್ ಶೆಟ್ಟಿ, ಮಹಮ್ಮದ್ ಹನೀಫ್,
ದೇರಪ್ಪ ಶೆಟ್ಟಿ, ಸೀತಾರಾಮ್ ಶೆಟ್ಟಿ, ರಾಜು ಪೂಜಾರಿ, ಜಯರಾಮ್ ಪೂಜಾರಿ, ಮಜೀದ್ ಮದ್ದಡ್ಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.