Wed. Jan 8th, 2025

Belthangady: (ಜ.06) ವಿ.ಹಿಂ.ಪ. ಬಜರಂಗದಳ ಬೆಳ್ತಂಗಡಿ ಪ್ರಖಂಡದ ವತಿಯಿಂದ ಚಾರ್ಮಾಡಿಯ ಮೃತ್ಯುಂಜಯ ನದಿಗೆ ಮಾತೃಸ್ವರೂಪಿ ಗೋವಿನ ಅಂಗಾಂಗಗಳನ್ನು ಎಸೆದು ಹಿಂದೂಗಳ ಪಾವಿತ್ರತೆಗೆ ಧಕ್ಕೆ ತಂದಿರುವ ದುಷ್ಟರನ್ನು ಬಂಧಿಸಲು ವಿಫಲವಾದ ಪೋಲಿಸ್ ಇಲಾಖೆ ಮತ್ತು ಸರಕಾರದ ವಿರುದ್ಧ ಬೃಹತ್‌ ಪ್ರತಿಭಟನೆ

ಬೆಳ್ತಂಗಡಿ:(ಜ.4) ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಬಳಿ ಮೃತ್ಯುಂಜಯ ನದಿಗೆ ಗೋಮಾಂಸ ತ್ಯಾಜ್ಯ ಬಿಸಾಡಿ ನದಿಯನ್ನು ಅಪವಿತ್ರ ಗೊಳಿಸುವ ಮೂಲಕ ನದಿಯಲ್ಲಿ ಸ್ನಾನ ಮಾಡುವ ಅಯ್ಯಪ್ಪ ಭಕ್ತರ ಧಾರ್ಮಿಕ ಭಾವನೆಯನ್ನು ಹಾಗೂ

ಇದನ್ನೂ ಓದಿ: Ujire: ಕಾರು ಹಾಗೂ ದ್ವಿ-ಚಕ್ರ ನಡುವೆ ಭೀಕರ ಅಪಘಾತ

ಅದೇ ನದಿ ಮುಂದೆ ಸಾಗಿ ಧರ್ಮಸ್ಥಳ ಸ್ನಾನ ಘಟ್ಟಕ್ಕೆ ತಲುಪುವುದರಿಂದ ಅಲ್ಲಿ ಸ್ನಾನ ಮಾಡುವ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಭಕ್ತರು ಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ.

ಈ ವಿಚಾರವಾಗಿ ಪೊಲೀಸರಿಗೆ ದೂರು ಕೊಟ್ಟು ಮಾಧ್ಯಮ ಗೋಷ್ಠಿಯ ಮೂಲಕ ಸಾರಿ ಹೇಳಿದರೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿರುತ್ತಾರೆ.

ಆದ್ದರಿಂದ ಈ ಕೆಳಗಿನ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸಿ , ಜನವರಿ.6 ರಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಪೇಟೆಯಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.

Leave a Reply

Your email address will not be published. Required fields are marked *