Tue. Jan 13th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

Daily Horoscope: ಕಚೇರಿಯ ಕೆಲಸದಲ್ಲಿ ಮಿಥುನ ರಾಶಿಯವರಿಗೆ ಒತ್ತಡ ಇರಲಿದೆ!!

ಮೇಷ ರಾಶಿ : ಕಛೇರಿಯ ಕೆಲಸಗಳನ್ನು ವೇಗವಾಗಿ ಮಾಡಿ ಜವಾಬ್ದಾರಿಯನ್ನು ಮುಗಿಸುವಿರಿ. ಹಿರಿಯರನ್ನು ಅನಾದರ ಮಾಡಿದಂತೆ ಅನ್ನಿಸಬಹುದು. ಖಾಸಗಿ ಸಂಸ್ಥೆಯಲ್ಲಿ ಇರುವವರಿಗೆ ವೇತನವು ಹೆಚ್ಚಾಗಬಹುದು.

ವೃಷಭ ರಾಶಿ :ಆಪ್ತರ ಕಾರಣದಿಂದ ನಿಮ್ಮ ಆಶಾಗೋಪುರ ಕಳಚಿಬೀಳಬಹುದು. ಶ್ರಮಕ್ಕೆ ತಕ್ಕ ಫಲಿತಾಂಶವು ದೊರೆಯದಿದ್ದರೂ ನೆಮ್ಮದಿ ಇರಲಿದೆ. ಜಾಣ್ಮೆಯ ಮಾತಿಗೆ ಯಾರೂ ಮರುಳಾಗರು. ನಿಮಗೆ ಬೇರೆಯವರಿಂದ ಹಣವು ಸಹಾಯದ ರೂಪದಲ್ಲಿ ಬರಬಹುದು. ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳಿದ್ದರೂ ಬೇರೆ ಕಾರ್ಯದ ಒತ್ತಡದಿಂದ ಸಾಧ್ಯವಾಗದು.

ಮಿಥುನ ರಾಶಿ :ನಿಮ್ಮ ಕಣ್ಣು ಸ್ವಚ್ಛವಾಗಿದ್ದರೆ ಎಲ್ಲವೂ ಸುಂದರವೇ. ಯಾರ ಮಾತನ್ನು ಒಪ್ಪಿಕೊಳ್ಳದೇ ನಿಮ್ಮದೇ ಆದ ದಾರಿಯಲ್ಲಿ ನಡೆಯುವಿರಿ. ಅನ್ಯಕಾರಣಗಳಿಂದ ಒತ್ತಡದಲ್ಲಿ ಇರುವಿರಿ. ಕಛೇರಿಯ ಕೆಲಸದಲ್ಲಿ ನಿಮ್ಮ ಮಧ್ಯೆ ಅನಗತ್ಯರ ಪ್ರವೇಶದಿಂದ ಕೋಪಗೊಳ್ಳುವಿರಿ. ಅಲ್ಪ ಆದಾಯದಲ್ಲಿ ತೃಪ್ತಿ ಹೊಂದಬೇಕಾದೀತು. ಹೆಚ್ಚಿನ ಆದಾಯದಿಂದ ದುರಭ್ಯಾಸವು ಹೆಚ್ಚಾಗಬಹುದು. ಶಿಕ್ಷಕರು ವೇತನವನ್ನು ಹೆಚ್ಚಿಸಿಕೊಳ್ಳುವರು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಉತ್ತಮ.

ಕರ್ಕಾಟಕ ರಾಶಿ : ನಂಬಿಕೆಯನ್ನು ಉಳಿಸಿಕೊಳ್ಳಲು ಬಹಳ ಶ್ರಮಪಡುವಿರಿ. ಧಾರ್ಮಿಕ ಆಚಣೆಯು ತೋರಿಕೆಗೆಂದು ಮಾಡುವಿರಿ. ಅಪರಿಚಿತರ ಮೂಲಕ ನಿಮ್ಮ ಹಣವನ್ನು ಕಳೆದುಕೊಳ್ಳಲಿದ್ದೀರಿ. ಒಪ್ಪಿಕೊಂಡ ಕೆಲಸದಲ್ಲಿ ಯಶಸ್ಸು ಸಾಧಿಸುವುದು ಆಗದು.‌ ಇಂದು ಬಹಳ ವಾಗ್ವಾದದ ಅನಂತರ ಸಂಗಾತಿಯ ಬೆಂಬಲವು ನಿಮ್ಮ‌‌ ಕಾರ್ಯಗಳಿಗೆ ಸಿಗಲಿದೆ. ಅಗತ್ಯವಿದ್ದಾಗ ಮಾತ್ರ ಸಾಲದ ಬಗ್ಗೆ ಆಲೋಚಿಸಿ.

ಸಿಂಹ ರಾಶಿ :ಎಂತಹ ಅಭ್ಯಾಸ ನಡೆಸಿದರೂ ನೈಪುಣ್ಯತೆಯು ಇಂದು ನಿಮ್ಮ ಕೈ ಹಿಡಿಯದೇ ಇರಬಹುದು. ಹೊಸ ಉದ್ಯಮದ ಬಗ್ಗೆ ನಿಮ್ಮ ತಲೆಯಲ್ಲಿ ಓಡುತ್ತಿರುವ ವಿಚಾರವನ್ನು ಹೇಳಿಕೊಳ್ಳಿ. ನಿಮ್ಮ ಮಾತಿನಿಂದ‌ ಶತ್ರುಗಳು ಹುಟ್ಟಿಕೊಳ್ಳಬಹುದು.ಶತ್ರುವನ್ನು ಉಪಾಯದಿಂದ ಗೆಲ್ಲುವ ತಂತ್ರ ಬಳಸಿ.

ಕನ್ಯಾ ರಾಶಿ :ಬೇಡದ ಸಲಹೆಗಳು ಬಂದರೂ ನ್ಯಾಯಸಮ್ಮತ ವ್ಯವಸ್ಥೆಯನ್ನು ಬಿಟ್ಟುಹೋಗುವುದು ಸರಿಯಾಗದು. ಯಾವುದೇ ಏರಿಳಿತಗಳಿಲ್ಲದೇ ಒಂದೇ ಹದದಲ್ಲಿ ವ್ಯಾಪಾರವು ಇರುವುದು. ಮಕ್ಕಳ‌ ವಿದ್ಯಾಭ್ಯಾಸವು ಪೂರ್ಣ ಸಮಾಧಾನ ಕೊಡದು. ಕೆಲವನ್ನು ನೀವು ಬುದ್ಧಿಪೂರ್ವಕವಾಗಿ ಮಾಡುವಿರಿ. ಮನೋವಿಕಾರವನ್ನು ಕಡಿಮೆ‌ ಮಾಡಿಕೊಳ್ಳಿ.

ತುಲಾ ರಾಶಿ :ಎಷ್ಟೇ ಪ್ರಯತ್ನಿಸಿದರೂ ಅಸಮಾಧಾನದಲ್ಲಿಯೂ ಯುಕ್ತಾಯುಕ್ತವಾದ ಮಾತುಗಳನ್ನು ಆಡುವಿರಿ. ನಿಮಗೆ ಒಳ್ಳೆಯ ಭೂಮಿಯ ಲಾಭವಾಗುವುದು. ಹಿತಶತ್ರುಗಳು ನಿಮ್ಮ ಸಂಪತ್ತನ್ನು ಬಳಸಿಕೊಳ್ಳಲು ನೋಡಬಹುದು. ಆಸ್ತಿಯ ದಾಖಲೆಗಳು ಕಾಣದೇ ಆತಂಕ ಉಂಟಾಗಬಹುದು.

ವೃಶ್ಚಿಕ ರಾಶಿ :ವೃತ್ತಿಯ ವಿಚಾರದಲ್ಲಿ ಅನುಭವಿಗಳಿಂದ ತಾತ್ಕಾಲಿಕ ಸಮಾಧಾನ ಸಿಗಲಿದೆ. ಮಿತಿ ಮೀರಿದ ಕಾರ್ಯದ ಒತ್ತಡದಿಂದ ನಿಮಗೆ ಕಷ್ಟವಾದೀತು. ಸಲ್ಲದ ಅಪವಾದವು ಬರಲಿದ್ದು ಬೆಂಬಲವನ್ನು ನಿರೀಕ್ಷಿಸಬಹುದು. ಉದ್ಯೋಗದ ಕಾರಣಕ್ಕೆ ಪ್ರವಾಸ ಮಾಡಬೇಕಾಗಬಹುದು. ವಿದೇಶದ ಸಂಪರ್ಕವು ವ್ಯಾಪಾರಕ್ಕಾಗಿ ಇರಲಿದೆ. ಅಪಮಾನವನ್ನು ಸಹಿಸಲಾಗದೇ ಎದುರಿಸಲೂ ಆಗದೇ ಹತಾಶೆಗೊಳ್ಳುವಿರಿ. ದುಃಖವನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಿ.

ಧನು ರಾಶಿ :ನಿಮ್ಮ ಔದಾಸೀನ್ಯವು ಮಕ್ಕಳ‌ಮೇಲೆ‌ ಪರಿಣಾಮ ಬೀರುವುದು. ಜಾಡ್ಯದಿಂದ ಮಾಡಬೇಕಾದುದನ್ನು ಮಾಡಲಾರರು. ಮಾನಸಿಕವಾಗಿ ನಿಮಗೆ ಇಂದು ಏರಿಳಿತಗಳು ಹೆಚ್ಚಾಗುವುದು. ನೂತನ ವೃತ್ತಿಪರರಿಗೆ ಉತ್ಸಾಹವು ಅಧಿಕವಾಗಿ ಇರಲಿದೆ. ಲೆಕ್ಕಾಚಾರದ ವಿಚಾರದಲ್ಲಿ ನಿಮಗೆ ಅಚ್ಚರಿ ಇರುವುದು. ಸತ್ಯವನ್ನು ನೋವಾಗದಂತೆ ತಿಳಿಸಿ. ಉಪಕಾರದ ವಿಚಾರದಲ್ಲಿ ನೀವು ಹಿಂದಿರುವಿರಿ.

ಮಕರ ರಾಶಿ :ಇಂದು ಗೃಹೋಪಯೋಗಿ ಬಳಕೆಯ ವ್ಯಾಪಾರದಲ್ಲಿ ಆದಾಯ ಕಂಡರೂ ಕೆಲವರಿಂದ ವಂಚನೆಯೂ ಆಗುವುದು.‌ ಸರ್ಕಾದ ಕೆಲಸವನ್ನು ಆಪ್ತ ಪ್ರಭಾವೀ ವ್ಯಕ್ತಿಗಳಿಂದ ಮಾಡಿಸಿಕೊಳ್ಳುವಿರಿ. ಅಧ್ಯಾತ್ಮದ ವಿಚಾರದಲ್ಲಿ ಆಸಕ್ತಿಯು ಹೆಚ್ಚಾಗುವುದು . ಸುಮ್ಮನೇ ದೇಹಾಯಾಸವನ್ನು ಮಾಡಿಕೊಳ್ಳುವಿರಿ. ನೆರೆಯವರ ಜೊತೆ ಕಲಹವು ಬೇಡ. ನಂಬಿಕೆಯನ್ನು ಕಳೆದುಕೊಳ್ಳಬೇಕಾಗುವುದು.

ಕುಂಭ ರಾಶಿ :ಸಾಮಾಜಿಕ ಕಾರ್ಯದಿಂದ ನಿಮ್ಮ ಭವಿಷ್ಯವನ್ನು ನಿರ್ಧರಿಸುವುದು ಕಷ್ಟವಾಗುವುದು. ಸತ್ಪಾತ್ರರಿಗೆ ದಾನ ಕೊಡಲು ಇಚ್ಛಿಸುವಿರಿ. ಕೆಲವೊಮ್ಮೆ ನಿಮ್ಮ ಸ್ವಭಾವವು ನಾಟಕೀಯದಂತೆ ತೋರುವುದು. ಕಲ್ಪನೆಯಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಲಿದ್ದೀರಿ.

ಮೀನ ರಾಶಿ :ಹೂಡಿಕೆಯನ್ನು ನೀವು ಸಮಯವರಿತು ಹಿಂಪಡೆಯುವಿರಿ. ಸಾರ್ವಜನಿಕವಾಗಿ ಇರಲು ನಿಮಗೆ ಭಯವಾಗಬಹುದು. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವುದು ಕಷ್ಟವಾಗಬಹುದು. ಆದಾಯದ ಮೂಲದಿಂದ ನಿಮಗೆ ನೆಮ್ಮದಿ ಸಿಗುವುದು. ಧಾರ್ಮಿಕ ಮುಖಂಡರ ಭೇಟಿಯಾಗುವುದು.‌

Leave a Reply

Your email address will not be published. Required fields are marked *