ಕಿನ್ನಿಗೋಳಿ:(ಜ.4) ಗದ್ದೆಯಲ್ಲಿನ ಕಳೆಗೆ ಜೌಷದಿ ಸಿಂಪಡಿಸುವಾಗ ವ್ಯಕ್ತಿಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಪಟ್ಟೆ ಮಾಗಂದಡಿ ನಿವಾಸಿ ಅಶೋಕ್ ಶೆಟ್ಟಿ ಎಂದು ಗುರುತಿಸಲಾಗಿದೆ. ಅಶೋಕ್ ಶೆಟ್ಟಿಯವರು ರೈತರಾಗಿದ್ದು, ತಮ್ಮ ಗದ್ದೆಯಲ್ಲಿನ ಕಳೆ ನಿವಾರಣೆಗೆ ಜೌಷದಿ ಸಿಂಪಡಿಸುತ್ತಿದ್ದು, ಈ ಸಂದರ್ಭ ಗದ್ದೆಯಲ್ಲೇ ಕುಸಿದು ಬಿದ್ದಿದ್ದಾರೆ.
ಸ್ವಲ್ಪ ಸಮಯ ಗದ್ದೆಯಲ್ಲಿಯೇ ಹೊರಳಾಡಿದ್ದು, ಯಾರೂ ನೋಡಿರಲಿಲ್ಲ, ಬಳಿಕ ಅದೇ ಹಾದಿಯಲ್ಲಿ ಹೋಗುತ್ತಿದ್ದ ಮಹಿಳೆ ಗಮನಿಸಿದ್ದಾರೆ, ಕೂಡಲೇ ಅಶೋಕ್ ಅವರನ್ನು ಅಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತ ಪಟ್ಟಿದ್ದು.
ಸಾವಿಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ, ಓರ್ವ ಪುತ್ರ ಓರ್ವ ಪುತ್ರಿಯರನ್ನು ಅಗಲಿದ್ದಾರೆ.