ಪದ್ಮುಂಜ :(ಜ.4) ಪದ್ಮುಂಜ ಪ್ರಾಥಮಿಕ ಸಹಕಾರ ಸಂಘ (ನಿ.) ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಬೆಂಬಲಿತ 12 ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ.
ಇದನ್ನೂ ಓದಿ: Daily Horoscope: ಕಚೇರಿಯ ಕೆಲಸದಲ್ಲಿ ಮಿಥುನ ರಾಶಿಯವರಿಗೆ ಒತ್ತಡ ಇರಲಿದೆ!!!
ಸಾಮಾನ್ಯ ಕ್ಷೇತ್ರದಿಂದ ಉದಯ ಭಟ್ ಕೊಳಬ್ಬೆ , ಡೀಕಯ್ಯ ಗೌಡ ಕoಚರೊಟ್ಟು, ನಾರಾಯಣ ಗೌಡ, ಪ್ರಸಾದ್. ಎ, ರಕ್ಷಿತ್ ಪಣೆಕ್ಕರ, ರುಕ್ಮಯ್ಯ ಯಾನೆ ಪ್ರಭಾಕರ ಗೌಡ ಗುತ್ಯೋಡಿ, ಹಾಗೂ ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಉದಯ ಕುಮಾರ್ ಬಿ.ಕೆ ಬಂದಾರು ,
ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಅಶೋಕ ಗೌಡ ಪಾoಜಾಳ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ದಿನೇಶ್ ನಾಯ್ಕ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಚಂದನ್, ಮಹಿಳಾ ಕ್ಷೇತ್ರದಿಂದ ಶಾರದಾ. ಆರ್. ರೈ, ಶೀಲಾವತಿ ಮುಗೇರಡ್ಕ ಇವರುಗಳು ಗೆದ್ದು ಸಹಕಾರಿ ಭಾರತಿ ಮಡಿಲಿಗೆ ಗೆಲುವಿನ ನಗೆ ಬೀರಿದ್ದಾರೆ.