Bengaluru :(ಜ.5) ಶಾಲೆಯಿಂದ ಮನೆಗೆ ತೆರಳುತ್ತಿದ್ದ 15 ವರ್ಷದ ಬಾಲಕಿಯ ಮೇಲೆ ನಿರ್ಮಾಣ ಹಂತದ ಮರದ ತುಂಡು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ವಿವಿ ಪುರಂ ಮೆಟ್ರೋ ನಿಲ್ದಾಣದ ಬಳಿ ಘೋರ ದುರಂತ ನಡೆದಿದೆ.
ಇದನ್ನೂ ಓದಿ: ಬಂಟ್ವಾಳ : ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಶಾಲಾ ವಾರ್ಷಿಕೋತ್ಸವ
ಮೃತ ಬಾಲಕಿಯನ್ನು ತೇಜಸ್ವಿನಿ ಎಂದು ತಿಳಿದುಬಂದಿದೆ. ಬೆಂಗಳೂರಿನವಿವಿ ಪುರಂ ಮೆಟ್ರೋ ನಿಲ್ದಾಣದ ಬಳಿ ತೇಜಸ್ವಿನಿ ಎಂಬ 15 ವರ್ಷದ ಬಾಲಕಿ ಶಾಲೆ ಬಿಟ್ಟು ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ನಿರ್ಮಾಣ ಹಂತದ 4ನೇ ಮಹಡಿಯಿಂದ ಮರದ ತುಂಡು ಒಂದು ಏಕಾಏಕಿ ಬಾಲಕಿ ತೇಜಸ್ವಿನಿ ಮೇಲೆ ಬಿದ್ದಿದೆ. ಆಗ ಸ್ಥಳದಲ್ಲೇ ಬಾಲಕಿ ಸಾವನ್ನಪ್ಪಿದ್ದಾಳೆ.