ಕಾಪು: (ಜ.5) ನಕಲಿ ದಾಖಲೆ ಸೃಷ್ಟಿಸಿ, ಸಹಿ ಫೋರ್ಜರಿ ಮಾಡಿ ಕಟಪಾಡಿ ಸಹಕಾರಿ ಬ್ಯಾಂಕ್‌ನಿಂದ 45 ಲಕ್ಷ ರೂ. ಹಣ ಪಡೆದು ವಂಚಿಸಿದ ಘಟನೆ ನಡೆದಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ರಾಯ್ ಪುರ: ರಸ್ತೆ ಹಗರಣಕ್ಕೆ ಸಂಬಂಧಿಸಿದಂತೆ ವರದಿ ಮಾಡಿದ ಮರುದಿನವೇ ಪತ್ರಕರ್ತ ಶವವಾಗಿ ಪತ್ತೆ!!!
ವಂಚಿಸಿದ ಆರೋಪಿಗಳನ್ನು ರಿಯಾನತ್ ಬಾನು ಹಾಗೂ ಆಕೆಯ ಪತಿ ನೂಮನ್ ಇಸ್ಮಾಯಿಲ್ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ: ಆರೋಪಿಗಳಿಬ್ಬರು ಕಟಪಾಡಿ ಸಹಕಾರಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದ, ಅವರಿಗೆ ದಿನೇಶ್ ಮತ್ತು ರಾಜೇಶ್ ಜಾಮೀನುದಾರರಾಗಿದ್ದರು. ಸಾಲ ಪಡೆದ ಆರೋಪಿಗಳು ಮೂರು ತಿಂಗಳ ಮಾಸಿಕ ಕಂತನ್ನು ಸಂಘಕ್ಕೆ ಪಾವತಿಸಿದ್ದು ಅನಂತರದ ಕಂತನ್ನು ಪಾವತಿ ಮಾಡದೇ ಬಾಕಿಯಿರಿಸಿಕೊಂಡಿದ್ದರು.
ಈ ಬಗ್ಗೆ ಸಂಘದವರಿಗೆ ಆರೋಪಿಗಳ ಮೇಲೆ ಅನುಮಾನ ಬಂದಿದ್ದು, ನಂತರದಲ್ಲಿ ಅವರು ನೀಡಿರುವ ದಾಖಲೆಗಳನ್ನು ಸಂಬಂಧಪಟ್ಟ ಸರಕಾರಿ ಅಧಿಕಾರಿಗಳೊಂದಿಗೆ ಪರಿಶೀಲಿಸಿದಾಗ, ಆರೋಪಿಗಳು ಸಾಲ ತೆಗೆದುಕೊಳ್ಳುವ ಉದ್ದೇಶಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿ, ಸಹಿ ಫೋರ್ಜರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.