ಮಂಗಳೂರು:(ಜ.5) “ಹರೀಶ್ ಕುಮಾರ್ ಇರಾ ಎಂಬವರು ಭಗವತಿ ಬ್ಯಾಂಕ್ ನಲ್ಲಿ ಹಿಂದೆ ಸದಸ್ಯರಾಗಿದ್ದು ನಂತರ ಒಬ್ಬ ನಿರ್ದೇಶಕರಾಗಿದ್ದರು. ಅವರು ನಿರ್ದೆಶಕರಾಗಿರುವ ಸಂದರ್ಭದಲ್ಲಿ ಅವರು ತಮ್ಮ ಪರವಾಗಿರುವ ಗ್ರಾಹಕರಿಗೆ ಸಾಲದ ಬಗ್ಗೆ ಶಿಫಾರಸು ಮಾಡಿ, ಸಾಲ ಕೊಡಿಸುವಾಗ ಕಮೀಷನ್ ಪಡೆದಿರುವ ಬಗ್ಗೆ ಅಂದಿನ ಆಡಳಿತ ಮಂಡಳಿಯ ಗಮನಕ್ಕೆ ಬಂದ ನಂತರ ಅವರ ಶಿಫಾರಸ್ಸಿನ ಯಾವುದೇ ಸಾಲದ ಅರ್ಜಿಗಳನ್ನು ಅಂದಿನ ಆಡಳಿತ ಮಂಡಳಿ ಪರಿಗಣನೆಗೆ ತೆಗೆಯಲಿಲ್ಲ.
ಇದನ್ನೂ ಓದಿ: ಕೋಲಾರ: ಹೆಂಡತಿ ಇದ್ದರೂ, ಹೆಂಡ್ತಿ ಆರೋಗ್ಯ ವಿಚಾರಿಸಲು ಬಂದಿದ್ದ ಯುವತಿ ಮೇಲೆ ಬಿತ್ತು ಕಣ್ಣು
ಈ ಕಾರಣದಿಂದ ಬ್ಯಾಂಕ್ ಮೇಲೆ ಬೇರೆ ಬೇರೆ ರೀತಿಯಲ್ಲಿ ಅವಹೇಳನಕಾರಿ ಆಪಾದನೆಗಳನ್ನು ಮಾಡಿದ್ದಲ್ಲದೆ ಬೇರೆ ಬೇರೆ ಅಧಿಕಾರಿಗಳಿಗೆ ದೂರು ಅರ್ಜಿ ಹಾಕಿದ್ದಾರೆ. ಈ ಬಗ್ಗೆ ವಿಚಾರಣೆಯು ನಡೆದಿರುತ್ತದೆ. ಅದರ ನಂತರ ಹರೀಶ್ ಕುಮಾರ್ ಇರಾರವರು ತಮ್ಮ ಮೊಬೈಲ್‌ನಲ್ಲಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರು ಮತ್ತು ಶಾಖಾಧಿಕಾರಿಗಳ ಮೇಲೆ ಹಲವು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಪ್ರಧಾನ ವ್ಯವಸ್ಥಾಪಕರ ಮಾನ ಹಾನಿ ಆಗುವ ರೀತಿಯಲ್ಲಿ ಅವರು ತಮ್ಮ ಮೊಬೈಲ್‌ನಲ್ಲಿ ವಿಚಾರಗಳನ್ನು ಪ್ರಕಟಿಸುತ್ತಿದ್ದರು” ಎಂದು ಶ್ರೀ ಭಗವತೀ ಸಹಕಾರ ಬ್ಯಾಂಕ್ ಇದರ ಅಧ್ಯಕ್ಷರಾದ ಮಾಧವ ಬಿ.ಎಂ. ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಹರೀಶ್ ಕುಮಾರ್ ಇರಾರವರು ಈ ರೀತಿಯ ಅವಹೇಳನ ಮತ್ತು ಸುಳ್ಳು ಆರೋಪಗಳನ್ನು ಮಾಡುವುದನ್ನು ಸಹಿಸಲಾಗದೆ ಮತ್ತು ಬ್ಯಾಂಕಿಗೆ ಕೆಟ್ಟ ಪರಿಣಾಮ ಬೀಳುವ ಹಿತದೃಷ್ಟಿಯಿಂದ ಅವರನ್ನು ಬ್ಯಾಂಕಿನ ಸದಸ್ಯತನದಿಂದ 02-03-2023ರಂದು ಅಮಾನತು ಮಾಡಲಾಯಿತು. 24-09-2023ರ ಮಹಾಸಭೆಯಲ್ಲಿ ಅವರನ್ನು ಬ್ಯಾಂಕಿನ ಸದಸ್ಯತನದಿಂದ ವಜಾ ಮಾಡುವ ಸಂದರ್ಭದಲ್ಲಿ ಅವರ ವಿವರಣೆಯನ್ನು ಮಹಾಸಭೆಗೆ ತಿಳಿಸುವಂತೆ ಸೂಚಿಸಲಾಯಿತು. ಆದರೆ ಬ್ಯಾಂಕಿನ ಮಹಾಸಭೆಯು ಸರ್ವಾನುಮತದಿಂದ ಅವರನ್ನು ಸದಸ್ಯತನದಿಂದ ವಜಾ ಮಾಡಲು ತೀರ್ಮಾನಿಸಲಾಯಿತು.
ಇದರಿಂದ ಬ್ಯಾಂಕ್ ವಿರುದ್ಧ ಹರೀಶ್ ಕುಮಾರ್ ಇರಾರವರು ಸುಳ್ಳು ಆರೋಪಗಳನ್ನು ಹೊರಿಸಿ, ಅವ್ಯವಹಾರ ನಡೆದಿದೆ ವ್ಯಾಪಕವಾಗಿ ಬ್ಯಾಂಕಿನ ಅಧ್ಯಕ್ಷರ ಮತ್ತು ಪ್ರಧಾನ ವ್ಯವಸ್ಥಾಪಕರು ಹಾಗೂ ಶಾಖಾಧಿಕಾರಿ ರಾಘವ ಉಚ್ಚಿಲ್‌ರವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿರುತ್ತಾರೆ. ಇದರ ಉದ್ದೇಶವೇನೆಂದರೆ ರಾಘವ ಉಚ್ಚಿಲ್‌ರವರು ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಒಬ್ಬ ಸ್ಪರ್ಧಿಯಾಗಿದ್ದಾರೆ.
ಅವರ ಮೇಲೆ ಕೆಟ್ಟ ಪರಿಣಾಮ ಬೀರಲಿ ಎಂಬ ಉದ್ದೇಶದಿಂದ ಈ ಅಪಪ್ರಚಾರ ನಡೆಸಲಾಗಿದೆ. ಆದುದರಿಂದ ಶ್ರೀ ಭಗವತೀ ಸಹಕಾರ ಬ್ಯಾಂಕ್ ನಿ. ಇದರ ಎಲ್ಲ ಗ್ರಾಹಕರೂ ಹರೀಶ್ ಕುಮಾರ್ ಇರಾರವರು ಪ್ರಕಟಿಸಿರುವ ಸುಳ್ಳು ಆಪಾದನೆಗಳಿಗೆ ಕಿವಿ ಕೊಡಬಾರದಾಗಿ ವಿನಂತಿ. ನಾವು ಶ್ರೀ ಭಗವತೀ ಸಹಕಾರ ಬ್ಯಾಂಕಿನ ವ್ಯವಹಾರವನ್ನು ಇನ್ನಷ್ಟು ಪ್ರಬಲವಾಗಿ ಬೆಳೆಸುತ್ತೇವೆ ಎಂದು ಈ ಮೂಲಕ ಆಡಳಿತ ಮಂಡಳಿ ಎಲ್ಲಾ ಗ್ರಾಹಕರಿಗೂ ಆಶ್ವಾಸನೆ ಕೊಡುತ್ತಿದ್ದೇವೆ.
ಹರೀಶ್ ಕುಮಾರ್‌ರವರು ಉಲ್ಲೇಖಿಸಿರುವ ಬ್ಯಾಂಕ್ ಸದಸ್ಯರಿಗೆ ಮಂಜೂರು ಮಾಡಿರುವ ಸಾಲದ ಬಗ್ಗೆ, ಸಂಬಂಧಪಟ್ಟ ಸಾಲಗಾರರೇ ಸೂಕ್ತ ಮಾಹಿತಿಗಳನ್ನು ನೀಡಲಿದ್ದಾರೆ. ಹರೀಶ್ ಕುಮಾರ್‌ರವರು ನಮ್ಮ ಬ್ಯಾಂಕಿನ ಸದಸ್ಯರಲ್ಲವಾದುದರಿಂದ ಮತ್ತು ಸಾಲ ಪಡೆದಿರುವ ಗ್ರಾಹಕರ ಸಂಬಂಧಿಕರಲ್ಲದ ಕಾರಣ ಅವರ ಬ್ಯಾಂಕಿನ ಸಾಲ ಖಾತೆಯ ಬಗ್ಗೆ ಈಗ ನಮಗೆ ಮಾಹಿತಿ ನೀಡಲು ಅಸಾಧ್ಯವಾಗಿರುತ್ತದೆ. ಈ ಬಗ್ಗೆ ಹರೀಶ್ ಕುಮಾರ್ ಇರಾ ವಿರುದ್ಧ ಸೂಕ್ತ ಮಾನನಷ್ಟ ಮೊಕದ್ದಮೆಯನ್ನು ಜರುಗಿಸಲಾಗುತ್ತದೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರು ಮಾಧವ ಬಿ.ಎಂ,ಉಪಾಧ್ಯಕ್ಷ ದೇವದಾಸ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾದ ಸುಷ್ಮಾ, ನಿರ್ದೇಶಕರು ಸರೀಲ್ ಅರುಣ್ ಬಂಗೇರ,ಬಿ.ಆನಂದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.