Fri. Jan 10th, 2025

Manipal: ಅಪಾರ್ಟ್‌ಮೆಂಟ್‌ ನಲ್ಲಿ ವೇಶ್ಯಾವಾಟಿಕೆ ದಂಧೆ – ನಾಲ್ವರು ಆರೋಪಿಗಳ ಬಂಧನ

ಮಣಿಪಾಲ:(ಜ.5) ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸಿದ ಆರೋಪದಡಿಯಲ್ಲಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: ವಿಟ್ಲ: ಮದುವೆ ಬಳಿಕ ಮತ್ತೊಬ್ಬಳ ಜೊತೆ ಚಕ್ಕಂದ

ಆರೋಪಿತರನ್ನು 1.ರವೀಶ 2.ರಘುನಂದನ ಎಮ್‌ ಡಿ, 3. ಅಮೀನಾ ಬೇಗಂ, 4.ಡಯನಾ ಲೂವಿಸ್ ಎಂದು ಗುರುತಿಸಲಾಗಿದೆ.

ಜನವರಿ 4 ರಂದು 12:15 ಗಂಟೆಗೆ ದೇವರಾಜ್‌ ಟಿ ವಿ ಪೊಲೀಸ್‌ ನಿರೀಕ್ಷಕರು, ಮಣಿಪಾಲ ಪೊಲೀಸ್‌ ಠಾಣೆ ಇವರು ಠಾಣೆಯಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಪೆರಂಪಳ್ಳಿ ಎಂಬಲ್ಲಿ ಇರುವ ಅಪಾರ್ಟ್‌ಮೆಂಟ್‌ ನ ಎರಡನೇ ಮಹಡಿಯಲ್ಲಿನ ಕೊಠಡಿಯಲ್ಲಿ ಅಕ್ರಮ ಲಾಭಕ್ಕಾಗಿ ಬಲವಂತವಾಗಿ ಮಹಿಳೆಯರನ್ನು ಇರಿಸಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ತಕ್ಷಣ, ದಾಳಿ ಮಾಡುವ ಸಲುವಾಗಿ ಮಾನ್ಯ ಪೊಲೀಸ್‌ ಅಧೀಕ್ಷಕರಿಂದ ದಾಳಿಗೆ ಮೌಖಿಕ ಅನುಮತಿ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದ್ದಾರೆ.

ನೊಂದ ಮಹಿಳೆಯನ್ನು ರಕ್ಷಿಸಿ ಆರೋಪಿತರಾದ 1.ರವೀಶ 2.ರಘುನಂದನ ಎಮ್‌ ಡಿ, 3. ಅಮೀನಾ ಬೇಗಂ, 4.ಡಯನಾ ಲೂವಿಸ್ ಇವರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು