Tue. Jan 7th, 2025

ಮೇಷ ರಾಶಿ: ಅಲ್ಪ ಕರುಣೆಯಾದರೂ ನಿಮ್ಮಿಂದ ಮಕ್ಕಳಿಗೆ ಸಿಗಲಿ. ಅಪಕ್ವವಾದ ಮಾತುಗಳಿಗೆ ಅವಕಾಶ ಕೊಡಬೇಡಿ. ಸಹವಾಸದಿಂದ ದಾರಿಯು ಬದಲಾಗುವುದು ಸಾಧ್ಯತೆ ಇದೆ. ಆಪ್ತರ ಜೊತೆಗಿನ ಮಾತುಕತೆಯು ನಿಮಗೆ ಆಹ್ಲಾದವನ್ನು ಉಂಟುಮಾಡುವುದು. ಭೂಮಿಯ ಮೇಲೆ ಸಾಲವನ್ನು ಮಾಡಬೇಕಾದೀತು. ಹಳೆಯ ಕೆಲಸದಲ್ಲಿ ಮಂದಗತಿ ಇರಲಿದೆ. ಒತ್ತಾಯದಿಂದ ನಿಮಗೆ ಗೌರವ ಪ್ರಾಪ್ತವಾಗಬಹುದು.

ವೃಷಭ ರಾಶಿ; ವಿಭಿನ್ನವಾಗಿ ಯಾವುದನ್ನಾದರೂ ಮಾಡಬಹುದು. ಬೇರೆಯವರ ಮನಸ್ತಾಪವನ್ನು ಸರಿ ಮಾಡಲು ನಿಮಗೆ ಉತ್ಸಾಹವು ಇರಲಿದೆ‌. ಬಾಡಿಗೆ ಮನೆಯಲ್ಲಿ ಇರುವವರು ಬದಲಾವಣೆ ಮಾಡಬೇಕಾದ ಸ್ಥಿತಿಯು ಬರಬಹುದು. ಸರ್ಕಾರದ ನಿಮ್ಮ ಕೆಲಸವು ಬೇಗನೆ ಮುಗಿದುಹೋಗುವುದು. ಮಿತ್ರರ ಕಾರಣದಿಂದ ವೃಥಾ ಕಾಲಹರಣವಾಗಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರುವುದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು.

ಮಿಥುನ ರಾಶಿ; ಇಂದು ಮಾಡುವ ಕಾರ್ಯವನ್ನು ಮುಂದೂಡುವುದು ಬೇಡ. ಇಂದು ನಿಮಗೆ ಮಹಿಳೆಯರಿಂದು ಅವಮಾನವು ಆಗಬಹುದು. ಆಪ್ತರಿಗಾಗಿ ಕೊಟ್ಟ ಸಮಯವೂ ವ್ಯರ್ಥವಾದೀತು. ಸ್ಥಿರಾಸ್ತಿಗಾಗಿ ಹೆಚ್ಚು ಓಡಾಡುವಿರಿ. ವಿದೇಶ ಪ್ರಯಾಣವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡುವುದು ಅನಿವಾರ್ಯವಾದೀತು. ಉದ್ಯಮವು ಬೆಳೆಯುತ್ತಿರುವುದು ಸಂತೋಷ ಕೊಡುವುದು.

ಕರ್ಕಾಟಕ ರಾಶಿ: ಒಳ್ಳೆಯ ಗುಣಗಳೇ ನಿಮಗೆ ಸತ್ಫಲವನ್ನು ಕೊಡುವುದು. ಎಂದೋ ಮಾಡಿದ ಕೆಲಸವು ಇಂದು ನಿಮ್ಮ ಕಾಲಿಗೆ ಸುತ್ತಿಕೊಳ್ಳುವುದು. ಇನ್ನೊಬ್ಬರ ಅನುಭವವು ನಿಮಗೆ ಪಾಠವಾಗಬಹುದು. ಭೂಮಿಯ ಲಾಭದ ವಿಚಾರದಲ್ಲಿ ಸರಿಯಾದ ಮಾತುಕತೆಗಳು ಆಗಲಿ. ಆರೋಪ ಪ್ರತ್ಯಾರೋಪಗಳಿಂದ ಪರಸ್ಪರ ಕಲಹವೂ ಆಗುವುದು. ದುಸ್ಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ಪ್ರಯತ್ನಿಸುವುದು ಬೇಡ.

ಸಿಂಹ ರಾಶಿ: ನಿಮ್ಮ ಮೇಲೆ ಅಪನಂಬಿಕೆಗೆ ಪ್ರಯತ್ನ ನಡೆಯಲಿದೆ. ಕುಟುಂಬದಲ್ಲಿ ಎಲ್ಲರೂ ಸುಖದಿಂದ ಜೀವಿಸುವ ಕಾರಣ ನಿಮ್ಮಲ್ಲಿಯೂ ನೆಮ್ಮದಿಯು ಕಾಣಿಸುವುದು. ದಾಂಪತ್ಯದಲ್ಲಿ ಪರಸ್ಪರ ನೋವು ಹಂಚಿಕೊಂಡು ಸಮಾಧಾನವಾಗುವಿರಿ. ನಿಮ್ಮ ನಡವಳಿಕೆಗೆ ಬಂಧುಗಳಿಂದ ಪ್ರಶಂಸೆಯು ಸಿಗಲಿದೆ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ಇನ್ನೊಬ್ಬರ ಗೊತ್ತಿಲ್ಲದ ವಿಚಾರವನ್ನು ಹೇಳುವುದು ಬೇಡ.

ಕನ್ಯಾ ರಾಶಿ; ಇಂದು ದೈವಾನುಗ್ರಹಕ್ಕೆ ಬೇಕಾದ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ವ್ಯಾಪಾರದಲ್ಲಿ ಹಿತಶತ್ರುಗಳ ಕಾಟದಿಂದ ನಿಮಗೆ ತೊಂದರೆಗಳು ಆಡಬಹುದು. ಇದರಿಂದ ನಿಮ್ಮ ನೆಮ್ಮದಿಯೂ ದೂರವಾದೀತು. ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಸಾಧಿಸಲು ಅನೇಕ ಮಾರ್ಗಗಳು ಇರಲಿದೆ. ನಿಮ್ಮನ್ನು ಬಳಸಿಕೊಳ್ಳಬಹುದು, ಯಾರನ್ನೂ ಅತಿಯಾಗಿ ನಂಬಿ ನೀವು ಮೋಸಹೋಗಬಹುದು.‌ ನ್ಯಾಯಾಲಯದ ವಿಚಾರವನ್ನು ಯಾರ ಬಳಿಯೂ ಹೇಳಲು ಇಚ್ಛಿಸುವುದಿಲ್ಲ.

ತುಲಾ ರಾಶಿ: ನಿಮ್ಮ ಸತ್ಯಕ್ಕೆ ಸಾಕ್ಷಿಯ ಕೊರತೆ. ಸರ್ಕಾರದ ಕೆಲಸಲದಲ್ಲಿ ಗೊತ್ತಿಲ್ಲದೇ ತಪ್ಪುಗಳು ಆಗಬಹುದು. ಸತ್ಪಾತ್ರರಿಗೆ ದಾನವನ್ನು ಕೊಟ್ಟಿದ್ದು ನಿಮಗೆ ಖುಷಿಯಾಗಲಿದೆ. ತಜ್ಞರ ಜೊತೆ ಇಂದಿನ ಸಮಯವನ್ನು ಕಳೆಯುವಿರಿ. ಸಹನೆಯಿಂದ ಅದನ್ನು ಎದುರಿಸಬೇಕಾಗುವುದು. ದುಡುಕಿ ಏನನ್ನಾದರೂ ಮಾಡಿಕೊಳ್ಳುವುದು ಬೇಡ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯ ಸಾಧ್ಯತೆ ಇದೆ. ನಿಮಗೆ ಬರಬೇಕಾದ ಹಣದ ವಿಚಾರದಲ್ಲಿಯೂ ನಿಮಗೆ ಸೋಲಾಗುವುದು.

ವೃಶ್ಚಿಕ ರಾಶಿ: ಮಾನಸಿಕವಾದ ನೋವನ್ನು ಮರೆಯುವ ಪ್ರಯತ್ನವು ಬೇರೆ ರೀತಿಯಲ್ಲಿ ನಡೆಯುವುದು. ವಿದ್ಯಾರ್ಥಿಗಳು ಅಹಂಕಾರದ ವರ್ತನೆಯನ್ನು ತೋರಿಸಬಹುದು. ತಿಳಿವಳಿಕೆಯನ್ನು ಹೇಳಬೇಕಾದೀತು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ತೊಂದರೆಯಾಗಿ ಉಳಿಯದು. ಪ್ರಯಾಣದಲ್ಲಿ ಯಾವುದೇ ತೊಂದರೆಯು ಬಾರದಂತೆ ದೈವವನ್ನು ಪ್ರಾರ್ಥಿಸಿ.

ಧನು ರಾಶಿ: ವಿದೇಶದ ಸುತ್ತಾಟದಲ್ಲಿ ಇರುವವರಿಗೆ ಆತಂಕದ ಸೂಚನೆ ಕಾಣಿಸುವುದು. ಇಷ್ಟವಿಲ್ಲದಿದ್ದರೂ ಶುಭ ಕಾರ್ಯದಲ್ಲಿ ನೀವು ಭಾಗವಹಿಸುವಿರಿ. ಕಳೆದುಕೊಂಡ ಸಂಪತ್ತು ಮತ್ತಾವುದೋ ರೀತಿಯಲ್ಲಿ ಬರಬಹುದು. ಬಹಳ‌ ದಿನಗಳ‌ ಅನಂತರ ಕುಟುಂಬದವರನ್ನು ಭೇಟಿಯಾಗುತ್ತಿರುವುದು ನಿಮ್ಮ‌ ಮುಖದಲ್ಲಿ ಹರುಷ ಕಾಣುವುದು. ಸಣ್ಣ ಮಕ್ಕಳಿಂದ ನೆಮ್ಮದಿಯು ಸಿಗಲಿದೆ. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು.

ಮಕರ ರಾಶಿ: ಇಂದು ನಿಮ್ಮ ಮಕ್ಕಳ ಅಭ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುವಿರಿ. ಆರ್ಥಿಕ ಸಂಕಷ್ಟವು ನಿಮ್ಮ ಮಾನಸಿಕ ಸ್ಥಿತಿಯನ್ನು ಹಾಳುಮಾಡುವುದು. ನಿಮಗೆ ನೆಮ್ಮದಿ ಬೇಕಾದರೆ ಸುತ್ತಲಿನವರ ಜೊತೆ ಸೌಹಾರ್ದತೆ ಮುಖ್ಯ. ಹಣವು ವ್ಯಯವಾಗಬಹುದು. ಕಳ್ಳರ ಭೀತಿಯು ಇರಲಿದೆ. ಒತ್ತಡದಿಂದ ನಿಮ್ಮ ಕಾರ್ಯವು ಮಂದಗತಿಯಲ್ಲಿ ಸಾಗುವುದು. ಯಂತ್ರಜ್ಞರು ಇಂದು ಬಹಳ ಒತ್ತಡದಿಂದ ಇರುವರು. ಸ್ವಲ್ಪ ಮಾನಸಿಕ‌ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ. ಪರಿಹಾರವನ್ನು ಕಂಡುಕೊಳ್ಳಬಹುದು.

ಕುಂಭ ರಾಶಿ: ಸುಮ್ಮನೇ ಏನನ್ನೋ ಕಲ್ಪಿಸಿಕೊಂಡು ಹತಾಶರಾಗುವಿರಿ. ಸಾಮಾಜಿಕ ಕಾರ್ಯಕ್ಕೆ ಇಂದು ಸಮಯವು ಸಿಗದು. ವೈದ್ಯ ವೃತ್ತಿಯವರಿಗೆ ಅಪವಾದವು ಬರಬಹುದು. ಸಾಲಗಾರರಿಂದ ನಿಮ್ಮ ಮಾನಸಿಕ ಸ್ಥಿತಿಯು ಕೆಡಬಹುದು. ಯಾರದೋ ತಪ್ಪಿಗೆ ನೀವು ತಲೆಕೊಡಬೇಕಾದೀತು. ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳಿ. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ.

ಮೀನ ರಾಶಿ: ಶುಭ ಸಮಾರಂಭಕ್ಕೆ ಹೋಗುವಿರಿ. ಯಾವುದೋ ಆಲೋಚನೆಯಲ್ಲಿ ನಿಮ್ಮ ಮನಸ್ಸು ಇರುವುದು. ಹೆಚ್ಚಿನ ಸೌಕರ್ಯದಿಂದ ನೀವು ಸೋಮಾರಿಯಾಗುವಿರಿ. ಕೇಳಿದವರಿಗೆ ನಿಮ್ಮ‌ ಸಹಾಯವು ಸಿಗಲಿದೆ.‌ ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಕಳೆದ ಕೆಟ್ಟ ಕಾಲವನ್ನು‌ ನೆನಪಿಸಿಕೊಳ್ಳುವಿರಿ. ಉದ್ಯೋಗದಲ್ಲಿ ನಿಮ್ಮ ಕೇಂದ್ರವಾಗಿ ಇರಿಸಿಕೊಂಡು ಮಾತನಾಡುವರು. ಸಹೋದ್ಯೋಗಿಗಳ ಮಾತಿನ ಬಗ್ಗೆ ಅಧಿಕವಾಗಿ ಪ್ರತಿಕ್ರಿಯೆ ಬೇಡ. ನೌಕರರ ಮೇಲೆ ನಿಮ್ಮದೊಂದು ಲಕ್ಷ್ಯ ಇರಬೇಕಾಗುವುದು. ಏಕಾಗ್ರತೆಯು ಭಂಗವಾಗಲು ಅನೇಕ ಕಾರಣಗಳು ಇರಲಿವೆ.

Leave a Reply

Your email address will not be published. Required fields are marked *