ಬೆಳ್ತಂಗಡಿ:(ಜ.6) ಐತಿಹಾಸಿಕ ಧಾರ್ಮಿಕ ಝಿಯಾರತ್ ಕೇಂದ್ರವಾದ ಕಾಜೂರು ದರ್ಗಾ ಶರೀಫ್ ಉರೂಸ್ ಸಮಾರಂಭವು 2025 ಜನವರಿ 24 ರಿಂದ ಫೆಬ್ರವರಿ 2 ವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು,
ಇದನ್ನೂ ಓದಿ: Aries to Pisces: ಬೇರೆಯವರನ್ನು ಅತಿಯಾಗಿ ನಂಬಿ ಕನ್ಯಾ ರಾಶಿಯವರು ಮೋಸಹೋಗಬಹುದು!!!
ಎಟ್ಟಿಕ್ಕುಳಂ ತಾಜುಲ್ ಉಲಮಾ ಮಖ್ಬರದಲ್ಲಿ ಪೋಸ್ಟರ್ ಪ್ರದರ್ಶನ ಹಾಗೂ ಸಾಮೂಹಿಕ ಪ್ರಾರ್ಥನೆಯ ಮೂಲಕ ಉರೂಸಿನ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ವಕ್ಫ್ ಮಂಡಳಿಯ ಮಾಜಿ ರಾಜ್ಯಾಧ್ಯಕ್ಷ ಮೌಲಾನಾ ಎನ್‌ಕೆಎಮ್ ಶಾಫಿ ಸಅದಿ ಬೆಂಗಳೂರು, ಉರೂಸ್ ಸಮಿತಿ ಅಧ್ಯಕ್ಷ ಇಬ್ರಾಹಿಂ ಕೆ.ಯು,
ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹ್ರಿ ಕಿಲ್ಲೂರ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ.ಎಚ್, ಹಿರಿಯರಾದ ಅಬೂಬಕ್ಕರ್ ಮಲ್ಲಿಗೆಮನೆ ಮುಂತಾದವರು ಉಪಸ್ಥಿತರಿದ್ದರು.