ಬೆಳ್ತಂಗಡಿ:(ಜ.6) ಕರಾವಳಿಯ ಯುವಕರೇ ಸೇರಿ ನಿರ್ಮಿಸಿರುವ ದಸ್ಕತ್ ತುಳು ಚಲನಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ ಅನ್ನುವ ಮಾಹಿತಿಯೊಂದನ್ನು ಚಿತ್ರ ತಂಡ ಹಂಚಿಕೊಂಡಿದೆ.
ಇದನ್ನೂ ಓದಿ: ಬ್ರಹ್ಮಾವರ: ನವ ದಂಪತಿಗಳು ಸಂಚರಿಸುತ್ತಿದ್ದ ಬೈಕ್ ಗೆ ಕಂಟೈನರ್ ಲಾರಿ ಡಿಕ್ಕಿ
ಈಗಾಗಲೇ ಚಿತ್ರ ಬಿಡುಗಡೆಯಾಗಿ ಯಶಸ್ವಿ 25 ದಿನಗಳನ್ನು ಪೂರೈಸಿದ್ದು ದಾಖಲೆ ಮೊತ್ತಕ್ಕೆ ಡಬ್ಬಿಂಗ್ ರೈಟ್ಸ್ ಮಾರಾಟವಾಗಿದೆ ಎಂದು ಹೇಳಿದೆ. ಕಾಮಿಡಿ ಕಿಲಾಡಿಗಳು ಶೋ ನ ಕಲಾವಿದ ಅನೀಶ್ ಪೂಜಾರಿ ವೇಣೂರು ನಿರ್ದೇಶನದಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ.
ಈ ಸಿನಿಮಾದಲ್ಲಿ ನಾಯಕ ನಟನಾಗಿ ದೀಕ್ಷಿತ್ ಅಂಡಿಂಜೆ , ಖಳ ನಟನಾಗಿ ಯುವ ಶೆಟ್ಟಿ ಮೂಡಬಿದ್ರೆ, ಕನ್ನಡ ಚಲನಚಿತ್ರ ನಟ ಮೋಹನ್ ಶೇಣಿ, ಸೀರಿಯಲ್ ನಟಿ ಭವ್ಯ ಪೂಜಾರಿ, ಹಾಸ್ಯ ನಟ ದೀಪಕ್ ರೈ ಪಾಣಾಜೆ ಸೇರಿದಂತೆ ಹಲವು ಹಿರಿಯ ಮತ್ತು ಹೊಸ ಮುಖಗಳು ಈ ಚಿತ್ರದಲ್ಲಿ ನಟಿಸಿದ್ದಾರೆ.
ದಸ್ಕತ್ ಸಿನಿಮಾವು ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅರ್ಪಿಸುವ ತುಳುಚಿತ್ರವನ್ನು ರಾಘವೇಂದ್ರ ಕುಡ್ವ ನಿರ್ಮಿಸಿದ್ದಾರೆ. ತುಳುನಾಡಿನ ಬದುಕು, ಸಂಸ್ಕೃತಿ, ಸಂಘರ್ಷವನ್ನೇ ಕಥಾನಕವನ್ನಾಗಿ ಹೊಂದಿರುವ ಈ ಚಿತ್ರದಲ್ಲಿ ತುಳುನಾಡಿನ ದೈವದ ನಂಬಿಕೆಯನ್ನೂ ಬಿಂಬಿಸಲಾಗಿದೆ.
25 ದಿನಗಳಲ್ಲಿ ದಸ್ಕತ್ ತುಳು ನಾಡಿನಾದ್ಯಂತ ಭರ್ಜರಿ ಪ್ರದರ್ಶನ ಕಂಡಿದ್ದು, ಯಾರೆಲ್ಲಾ ಈ ಚಿತ್ರವನ್ನು ನೋಡಿಲ್ಲಾ ಅವರೆಲ್ಲ ಆದಷ್ಟು ಬೇಗನೆ ಚಿತ್ರವನ್ನು ಚಿತ್ರಮಂದಿರದಲ್ಲೇ ಬಂದು ನೋಡಿ ಎಂದು ಚಿತ್ರ ತಂಡ ಮನವಿ ಮಾಡಿದೆ.