Tue. Jan 7th, 2025

Kasaragod: ಕುಂಬ್ಳೆ ಶ್ರೀಧರ ರಾವ್ ಸ್ಮೃತಿಯಲ್ಲಿ ತಾಳಮದ್ದಳೆ, ಯಕ್ಷಗಾನ ಮತ್ತು ಸ್ಮೃತಿ ಗ್ರಂಥ ಬಿಡುಗಡೆ

ಕಾಸರಗೋಡು:(ಜ.6)ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ಮತ್ತು ಧರ್ಮಸ್ಥಳ ಮೇಳದಲ್ಲಿ 5 ದಶಕ ಸೇರಿ 6 ದಶಕದಿಂದಲೂ ಹೆಚ್ಚಿನ ಅವಧಿಯಲ್ಲಿ ಸ್ತ್ರಿ ಮತ್ತು ಪುರುಷ ವೇಷಧಾರಿಯಾಗಿ ಹಾಗೂ ತಾಳಮದ್ದಳೆಯ ಅರ್ಥಧಾರಿಯಾಗಿ ಜನಪ್ರಿಯರಾಗಿದ್ದ ಕಲಾವಿದ ಕುಂಬಳೆ ಶ್ರೀಧರರಾವ್ ದಿನಾಂಕ 5.7. 2024 ರಂದು ವಿಧಿವಶರಾದರು.

ಇದನ್ನೂ ಓದಿ: ಉಪ್ಪಿನಂಗಡಿ: ಮಹಾಭಾರತ ಸರಣಿ ತಾಳಮದ್ದಳೆ

ಅವರ ಅಭಿನಂದನಾ ಗ್ರಂಥ ಕಲಾ ಶ್ರೀಧರ ಬಿಡುಗಡೆಯಾಗುವ ಮೊದಲೇ ಅವರು ದೈವಾಧೀನರಾದರು.ಅವರ ಅಭಿಮಾನಿ ಬಳಗವು ಕುಂಬ್ಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ದಿನಾಂಕ 29/12/2024 ರಂದು ಶ್ರೀಧರ ಸ್ಮೃತಿ ಕಾರ್ಯಕ್ರಮವನ್ನುಆಯೋಜಿಸಿತ್ತು ಕಲಾಶ್ರೀಧರ ಗ್ರಂಥ ಬಿಡುಗಡೆ, ತಾಳಮದ್ದಳೆ, ಯಕ್ಷಗಾನ ಪ್ರದರ್ಶನ ದೊಂದಿಗೆ ಅಗಲಿದ ಕಲಾವಿದನಿಗೆ ವಿಶಿಷ್ಟರೀತಿಯಲ್ಲಿ ಗೌರವ ಸಲ್ಲಿಕೆಯಾಯಿತು.

ಕಾರ್ಯಕ್ರಮದ ಉದ್ಘಾಟನ ಸಮಾರಂಭದ ಬಳಿಕ ಸುದರ್ಶನ ವಿಜಯ ತಾಳಮದ್ದಳೆಯಲ್ಲಿ ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ ಹಿಮ್ಮೇಳದಲ್ಲಿ ಲಕ್ಷೀಶ ಅಮ್ಮಣ್ಣಾಯ, ಪಿ. ಜಿ ಜಗನ್ನಿವಾಸ ರಾವ್, ರಾಮಾಮೂರ್ತಿ ಕುದ್ರೆಕೂಡ್ಲು ಅರ್ಥಧಾರಿಗಳಾಗಿ ಗೋಪಾಲ ನಾಯಕ್ ಸೂರಂಬೈಲು (ವಿಷ್ಣು)
ಸುಣ್ಣoಬಳ ವಿಶ್ವೇಶ್ವರ ಭಟ್ (ಸುದರ್ಶನ ) ಶಂಭು ಶರ್ಮ ವಿಟ್ಲ(ಲಕ್ಶ್ಮೀ ) ನಳ ದಮಯಂತಿ ಪ್ರಸಂಗ ಆಯ್ದ ಭಾಗದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಭಾಗವತಿಕೆ. ಯಂ. ಕೆ ರಮೇಶ ಆಚಾರ್ಯ ತೀರ್ಥಹಳ್ಳಿ (ದಮಯಂತಿ )ದಿವಾಕರ ಆಚಾರ್ಯ ಗೇರುಕಟ್ಟೆ (ಚೈದ್ಯ ರಾಣಿ )ವಸಂತ ಗೌಡ ಕಾಯರ್ತಡ್ಕ(ಸುದೇವ ) ಭಾಗವಹಿಸಿದ್ದರು. ಅಪರಾಹ್ನ ಜರಗಿದ
ಶ್ರೀ ಕೃಷ್ಣ ಸಂಧಾನದಲ್ಲಿ ಭಾಗವತರಾಗಿ ದಿನೇಶ ಅಮ್ಮಣ್ಣಾಯ ಹಿಮ್ಮೇಳದಲ್ಲಿ ಲವಕುಮಾರ ಐಲ, ರಾಮಮೂರ್ತಿ ಕುದ್ರೆಕೂಡ್ಲು ಅರ್ಥದಾರಿಗಳಾಗಿ
ಡಾ. ಎಂ. ಪ್ರಭಾಕರ ಜೋಶಿ (ಕೌರವ )ಉಜಿರೆ ಅಶೋಕ್ ಭಟ್ (ಶ್ರೀಕೃಷ್ಣ ) ಅಶೋಕ ಕುಂಬ್ಳೆ (ವಿದುರ )ಭಾಗವಹಿಸಿದ್ದರು. ಸಿರಿ ಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ( ರಿ )ಕಾಸರಗೋಡು ಕಾರ್ಯಕ್ರಮದ ಸಂಯೋಜನೆ ಮಾಡಿದ್ದರು.

ಸಭಾ ಕಲಾಪದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಧಾಮ ಮಾಣಿಲದ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿಯವರು ಕಲಾವಿದ ಪತ್ರಕರ್ತ ನಾ.ಕಾರಂತ ಪೆರಾಜೆ ಸಂಪಾದಕತ್ವದ ಕಲಾ ಶ್ರೀಧರ ಸ್ಮೃತಿಕೃತಿ ಬಿಡುಗಡೆಗೊಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಕ್ಷೇತ್ರದ ಮೇಳದಲ್ಲಿ ಅವರ ಪಾತ್ರ ನಿರ್ವಹಣೆಯನ್ನು ನೆನಪಿಸಿಕೊಂಡರು . ಡಾ. ಎಂ ಪ್ರಭಾಕರ್ ಜೋಶಿಯವರು ಶ್ರೀಧರ್ ರಾವ್ ಅವರ ಕಲಾ ಸಾಧನೆಯ ಬಗ್ಗೆ ಬೆಳಕು ಚೆಲ್ಲಿದರು. ಕಾರ್ಯಕ್ರಮದಲ್ಲಿ ಕುಂಬ್ಲೆ ರಾವ್ ಅವರ ಪತ್ನಿ ಸುಲೋಚನಾ. ಕೆ, ಪುತ್ರರಾದ ಗಣೇಶ್ ಪ್ರಸಾದ್ ಕುಂಬಳೆ ಕೃಷ್ಣಪ್ರಸಾದ್ ಕುಂಬಳೆ ದೇವಿ ಪ್ರಸಾದ್ ಕುಂಬಳೆ ಸಹೋದರ ಗೋಪಾಲ ಕುಂಬ್ಳೆ ಮತ್ತು ಬಂಧು ವರ್ಗದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಶ್ರೀ ಧಾಮಮಾಣಿಲ ಶ್ರೀ ಮಹಾಲಕ್ಷ್ಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಕಂಸ ವಧೆ ಯಕ್ಷಗಾನ ಪ್ರದರ್ಶನ ಜರಗಿತು. ದಿನವಿಡಿ ನಡೆದ ಈ ಕಾರ್ಯಕ್ರಮಕ್ಕೆ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘ ನಾರಾಯಣ ಮಂಗಳ,ಪಾರ್ತಿಕುಂಬ್ಳೆ ಶ್ರೀಧರ ರಾವ್ ಸ್ಮೃತಿಯಲ್ಲಿ ತಾಳಮದ್ದಳೆ,ಯಕ್ಷಗಾನ ಮತ್ತು ಸ್ಮೃತಿಗ್ರಂಥ ಬಿಡುಗಡೆ.

ತೆಂಕು ತಿಟ್ಟಿನ ವಿವಿಧ ಮೇಳಗಳಲ್ಲಿ ಮತ್ತು ಧರ್ಮಸ್ಥಳ ಮೇಳದಲ್ಲಿಯೇ 45 ವರ್ಷದ ತಿರುಗಾಟದೊಂದಿಗೆ 6ದಶಕದ ಅವಧಿಯಲ್ಲಿ ಸ್ತ್ರಿ ಮತ್ತು ಪುರುಷ ವೇಷಧಾರಿಯಾಗಿ ಹಾಗೂ ತಾಳಮದ್ದಳೆಯ ಅರ್ಥಧಾರಿಯಾಗಿ ಜನಪ್ರಿಯರಾಗಿದ್ದ ಕಲಾವಿದ ಕುಂಬಳೆ ಶ್ರೀಧರರಾವ್ 2024 ಜುಲೈಯಲ್ಲಿ ವಿಧಿವಶರಾಗಿದ್ದರು.

ಅಭಿನಂದನಾ ಗ್ರಂಥ ಕಲಾ ಶ್ರೀಧರ ಬಿಡುಗಡೆಯಾಗುವ ಮೊದಲೇ ಅವರು ದೈವಾಧೀನರಾದರು.ಅವರ ಅಭಿಮಾನಿ ಬಳಗವು ಕುಂಬ್ಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಇತ್ತೀಚೆಗೆ ಅವರ ಸ್ಮೃತಿಯಲ್ಲಿ ಕಲಾಶ್ರೀಧರ ಗ್ರಂಥ ಬಿಡುಗಡೆ, ತಾಳಮದ್ದಳೆ, ಯಕ್ಷಗಾನ ಪ್ರದರ್ಶನದೊಂದಿಗೆ ವಿಶಿಷ್ಟರೀತಿಯಲ್ಲಿ ಗೌರವ ಸಲ್ಲಿಸಿದರು .

ಕಾರ್ಯಕ್ರಮದ ಉದ್ಘಾಟನ ಸಮಾರಂಭದ ಬಳಿಕ ಸುದರ್ಶನ ವಿಜಯ ತಾಳಮದ್ದಳೆಯಲ್ಲಿ ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ ಹಿಮ್ಮೇಳದಲ್ಲಿ ಲಕ್ಷೀಶ ಅಮ್ಮಣ್ಣಾಯ, ಪಿ. ಜಿ ಜಗನ್ನಿವಾಸ ರಾವ್, ರಾಮಾಮೂರ್ತಿ ಕುದ್ರೆಕೂಡ್ಲು ಅರ್ಥಧಾರಿಗಳಾಗಿ ಗೋಪಾಲ ನಾಯಕ್ ಸೂರಂಬೈಲು (ವಿಷ್ಣು)
ಸುಣ್ಣoಬಳ ವಿಶ್ವೇಶ್ವರ ಭಟ್ (ಸುದರ್ಶನ ) ಶಂಭು ಶರ್ಮ ವಿಟ್ಲ(ಲಕ್ಶ್ಮೀ ) ನಳ ದಮಯಂತಿ ಪ್ರಸಂಗ ಆಯ್ದ ಭಾಗದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಭಾಗವತಿಕೆ. ಯಂ. ಕೆ ರಮೇಶ ಆಚಾರ್ಯ ತೀರ್ಥಹಳ್ಳಿ (ದಮಯಂತಿ )ದಿವಾಕರ ಆಚಾರ್ಯ ಗೇರುಕಟ್ಟೆ (ಚೈದ್ಯ ರಾಣಿ )ವಸಂತ ಗೌಡ ಕಾಯರ್ತಡ್ಕ(ಸುದೇವ ) ಭಾಗವಹಿಸಿದ್ದರು. ಅಪರಾಹ್ನ ಜರಗಿದ
ಶ್ರೀ ಕೃಷ್ಣ ಸಂಧಾನದಲ್ಲಿ ಭಾಗವತರಾಗಿ ದಿನೇಶ ಅಮ್ಮಣ್ಣಾಯ ಹಿಮ್ಮೇಳದಲ್ಲಿ ಲವಕುಮಾರ ಐಲ, ರಾಮಮೂರ್ತಿ ಕುದ್ರೆಕೂಡ್ಲು ಅರ್ಥದಾರಿಗಳಾಗಿ
ಡಾ. ಎಂ. ಪ್ರಭಾಕರ ಜೋಶಿ (ಕೌರವ )ಉಜಿರೆ ಅಶೋಕ್ ಭಟ್ (ಶ್ರೀಕೃಷ್ಣ ) ಅಶೋಕ ಕುಂಬ್ಳೆ (ವಿದುರ )ಭಾಗವಹಿಸಿದ್ದರು. ಸಿರಿ ಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ( ರಿ )ಕಾಸರಗೋಡು ಕಾರ್ಯಕ್ರಮದ ಸಂಯೋಜನೆ ಮಾಡಿದ್ದರು.

ಸಮಾರಂಭದಲ್ಲಿ ಭಾಗವಹಿಸಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಧಾಮ ಮಾಣಿಲದ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿಯವರು ಕಲಾವಿದ ಪತ್ರಕರ್ತ ನಾ.ಕಾರಂತ ಪೆರಾಜೆ ಸಂಪಾದಕತ್ವದ ಕಲಾ ಶ್ರೀಧರ ಸ್ಮೃತಿಕೃತಿಯನ್ನು ಬಿಡುಗಡೆಗೊಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಕ್ಷೇತ್ರದ ಮೇಳದಲ್ಲಿ ಅವರ ಪಾತ್ರ ನಿರ್ವಹಣೆಯನ್ನು ನೆನಪಿಸಿಕೊಂಡರು . ಡಾ. ಎಂ ಪ್ರಭಾಕರ ಜೋಶಿಯವರು ಶ್ರೀಧರ್ ರಾವ್ ಅವರ ಕಲಾ ಸಾಧನೆಯ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕುಂಬ್ಲೆ ರಾವ್ ಅವರ ಪತ್ನಿ ಸುಲೋಚನಾ. ಕೆ, ಪುತ್ರರಾದ ಗಣೇಶ್ ಪ್ರಸಾದ್ ಕುಂಬಳೆ ಕೃಷ್ಣಪ್ರಸಾದ್ ಕುಂಬಳೆ,ದೇವಿ ಪ್ರಸಾದ್ ಕುಂಬಳೆ,ಸಹೋದರ ಗೋಪಾಲ ಕುಂಬ್ಳೆ ಮತ್ತು ಬಂಧು ವರ್ಗದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಕಂಸ ವಧೆ ಯಕ್ಷಗಾನ ಪ್ರದರ್ಶನ ಜರಗಿತು. ದಿನವಿಡಿ ನಡೆದ ಈ ಕಾರ್ಯಕ್ರಮಕ್ಕೆ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘ ನಾರಾಯಣ ಮಂಗಳ,ಪಾರ್ತಿಸುಬ್ಬ ಯಕ್ಷಗಾನ ಕಲಾ ಸಂಘ ಶೇಡಿಕಾವು ಮತ್ತು ಕುಂಬ್ಳೆ ಅಭಿಮಾನಿ ಬಳಗವು ಸಹಕಾರ ನೀಡಿದ್ದರು.

Leave a Reply

Your email address will not be published. Required fields are marked *