ಮಂಗಳೂರು:(ಜ.6) ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಅಪರೂಪದ ಹೆರಿಗೆಯೊಂದು ಆಗಿದೆ. ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ಇದನ್ನೂ ಓದಿ: ವಿಟ್ಲ: ಸಿಂಗಾರಿ ಬೀಡಿ ಮಾಲೀಕನ ಮನೆಯಲ್ಲಿ ದರೋಡೆ ಪ್ರಕರಣ
ತೆಲಂಗಾಣದ ತೇಜ ಎಂಬವರ ಪತ್ನಿ ಬಾನೋತ್ ದುರ್ಗಾ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ. ಎರಡು ಹೆಣ್ಣು ಹಾಗೂ ಎರಡು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 30 ವಾರಗಳ ಹೆರಿಗೆಯಾಗಿದ್ದು, ಪ್ರಸವ ಪೂರ್ವ ಜನನವಾದ್ದರಿಂದ ಮಕ್ಕಳನ್ನು ಎನ್‌ಐಸಿಯುವಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದು ಅಪರೂಪದ ಹೆರಿಗೆಯಾಗಿದ್ದು 7,00,000 ಗರ್ಭಧಾರಣೆಗಳಲ್ಲಿ ಒಂದರಲ್ಲಿ ಮಾತ್ರ ಸಂಭವಿಸುತ್ತವೆ ಎಂದು ಮಹಿಳೆಗೆ ಪ್ರಸವಪೂರ್ವ ಆರೈಕೆ ಮಾಡಿದ ಸ್ತ್ರೀರೋಗತಜ್ಞೆ ಡಾ.ಜೋಯೀನ್ ಡಿ.ಅಲ್ಮೇಡಾ ಹೇಳಿದ್ದಾರೆ.