ಉಡುಪಿ(ಜ.6); ಬನ್ನಂಜೆ ಸರಕಾರಿ ಬಸ್ಸು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಯುವತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಹಾಗೂ 112 ಪೋಲಿಸ್ ಸಹಾಯವಾಣಿ ಘಟಕವು ರಕ್ಷಿಸಿದೆ.
ಇದನ್ನೂ ಓದಿ : ಕಾರ್ಕಳ: ಬೈಕ್ ಗೆ ಕಾರು ಡಿಕ್ಕಿಯಾಗಿ 25 ವರ್ಷದ ಯುವಕ ಸಾವು!!!
ರವಿವಾರ ತಡ ರಾತ್ರಿ ಕಾರ್ಯಾಚರಣೆ ನಡೆದಿದ್ದು, ರಕ್ಷಿಸಲ್ಪಟ್ಟ ಯುವತಿಗೆ ಸಮಾಜಸೇವಕ ಒಳಕಾಡುವರು, ನಿಟ್ಟೂರು ಸಖಿ ಕೇಂದ್ರದಲ್ಲಿ ತಡ ರಾತ್ರಿಯಲ್ಲಿಯೇ ಪುರ್ನವಸತಿಯ ವ್ಯವಸ್ಥೆಗೊಳಿಸಿದರು.
ಕೆಲವು ದಿನಗಳಿಂದ ಬಸ್ಸು ತಂಗುದಾಣದಲ್ಲಿ ಯುವತಿ ದಿನಗಳನ್ನು ಕಳೆಯುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು, 112 ಸಹಾಯವಾಣಿಗೆ ಮಾಹಿತಿ ನೀಡಿದ್ದರು.
ರಕ್ಷಿಸಲ್ಪಟ್ಟ ಯುವತಿಯ ಹೆಸರು ಲಕ್ಷ್ಮೀ, ತಂದೆ ನಾಗರಾಜು, ಮೈಸೂರು ಕ್ಯಾತಮಾರನಹಳ್ಳಿಯ ನಿವಾಸಿ ಎಂದು ತಿಳಿದುಬಂದಿದೆ. ಸಂಬಂಧಿಕರು ಉಡುಪಿ ನಿಟ್ಟೂರು ಸಖಿ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.