ಉಡುಪಿ:(ಜ.6) ಯುವತಿಯೋರ್ವಳು ಇನ್‌ಸ್ಟಾಗ್ರಾಂ ನೋಡುತ್ತಿರುವಾಗ ಖಾತೆಗೆ ಬಂದ ವರ್ಕ್ ಪ್ರಮ್ ಹೋಮ್ ಲಿಂಕ್ ಅನ್ನು ಒತ್ತಿ 12.46 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ನಡೆದಿದೆ.
ಇದನ್ನೂ ಓದಿ: ಉಜಿರೆ : ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ
ಇನ್‌ಸ್ಟಾಗ್ರಾಂ ಲಿಂಕ್ ಬಳಸಿ, ಹಣ ಕಳೆದುಕೊಂಡ ಯುವತಿ ಶಿವಳ್ಳಿ ಗ್ರಾಮದ ಸಪ್ನ (28) ಎಂದು ತಿಳಿದು ಬಂದಿದೆ.
ಇವರ ಇನ್‌ಸ್ಟಾಗ್ರಾಂ ಖಾತೆಗೆ ವರ್ಕ್ ಪ್ರಮ್ ಹೋಮ್ ಎನ್ನುವ ಲಿಂಕ್ ವೊಂದು ಬಂದಿದ್ದು, ಅದನ್ನು ಅವರು ಓಪನ್ ಮಾಡಿರುತ್ತಾರೆ. ಆಗ ಯುವತಿಗೆ ಆ ಪ್ಲಾಟ್‌ಫಾರ್ಮ್ ನಲ್ಲಿ ಆರಂಭದಲ್ಲಿ 200 ರೂ. ಹೂಡಿಕೆ ಮಾಡಲು ಹೇಳಿದ್ದರು.
ಹುಡುಗಿ ಆ ಲಿಂಕ್ ಅನ್ನು ನಂಬಿ ಹೂಡಿಕೆ ಮಾಡಿದ್ದು, ಅದಕ್ಕೆ ಪ್ರತಿಫಲ ಎನ್ನುವಂತೆ ಯುವತಿಗೆ 50ರೂ. ಕಮಿಷನ್ ದೊರಕಿದೆ. ಇದನ್ನು ನಂಬಿದ ಯುವತಿ ಹೆಚ್ಚಿನ ಕಮಿಷನ್ ಬರುವುದಾಗಿ ನಂಬಿ ಡಿ.9ರಿಂದ ಡಿ.28ರ ನಡುವಿನ ಅವಧಿಯಲ್ಲಿ ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಫೋನ್ ಪೇ,
ಪೇಟಿಎಂ ಹಾಗೂ ಕ್ಯಾಶ್ ಡೆಪಾಸಿಟ್ ಮೂಲಕ ಒಟ್ಟು 12,46,000 ರೂ. ಹಣವನ್ನು ಹೂಡಿಕೆ ಮಾಡಿದ್ದು, ಹಣ ವಾಪಸ್ ಸಿಗದೆ ಮೋಸ ಹೋಗಿದ್ದಾರೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.