ಮೇಷ ರಾಶಿ: ಲಾಭದ ವ್ಯವಹಾರಕ್ಕಾಗಿ ಇಂದು ಧಾವಂತ ಕಾಣಿಸುವುದು. ಹಣಕಾಸಿನ ಮುಲಾಜಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಮಿತ್ರರು ನಿಮ್ಮಆಸಕ್ತಿಯ ಕ್ಷೇತ್ರವನ್ನು ಬದಲಿಸಬಹುದು. ವಿನಯದಿಂದ ಇದ್ದರೆ ಅಲ್ಪವಾದರೂ ನಿಮಗೆ ಸಹಾಯವಾದೀತು. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ಪೋಷಕರನ್ನು ಕಡೆಗಣಿಸಿದ್ದು ನಿಮಗೆ ಪಾಪಪ್ರಜ್ಞೆ ಕಾಡಬಹುದು.
ವೃಷಭ ರಾಶಿ: ನಿಮ್ಮ ವೃತ್ತಿಯ ಸಂಕಟವನ್ನು ಹೇಳಲಾಗದು. ಕ್ಷಮಿಸುವುದೂ ಒಂದು ದೊಡ್ಡಗುಣವೇ. ಯಾರದೋ ಜಗಳದಲ್ಲಿ ಪ್ರವೇಶ ಮಾಡಿ ಅಪಮಾನದಲ್ಲಿ ಸಿಕ್ಕಿಕೊಳ್ಳಬೇಕಾದೀತು. ಬಂಧುಗಳ ಒಡನಾಟ ನಿಮಗೆ ಸಿಗಲಿದೆ. ಸ್ನೇಹಿತರ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳುವಿರಿ. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು.
ಮಿಥುನ ರಾಶಿ: ಸ್ತ್ರೀಯರಿಗೆ ಈ ದಿನ ಒತ್ತಡ ಹೆಚ್ಚಾಗುವುದು. ಅತಿಯಾದ ಮರೆವಿನ ಸಮಸ್ಯೆಯಿಂದ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮವನ್ನು ಬೀರುವುದು. ಬಿಂಬದಂತೆ ಪ್ರತಿಬಿಂಬ ಕಾಣಿಸುವುದು. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಒಂದೇ ವಿಚಾರವನ್ನು ಎಲ್ಲರಿಂದಲೂ ಕೇಳಿ ಜಿಗುಪ್ಸೆ ಬಂದೀತು.
ಕರ್ಕಾಟಕ ರಾಶಿ: ಕೆಲವರ ಮಾತು ಕಷ್ಟವಾದರೂ ಇಷ್ಟಪಡುವುದು ಅನಿವಾರ್ಯವಾಗುವುದು. ಅಚಾತುರ್ಯವನ್ನು ನೆನಪುಮಾಡಿಕೊಂಡು ಮನಸ್ಸು ಕೆಡುವುದು. ಸತತ ಸೋಲಿನಿಂದ ಉತ್ಸಾಹವೂ ಕುಗ್ಗಬಹುದು. ಗೆಳೆಯರ ಸಹಕಾರವು ನಿಮಗೆ ಬೇಕೆನಿಸುವುದು. ಬೇರೆಯವರಿಗೆ ನಿಮ್ಮ ಬಗ್ಗೆ ನಕಾರಾತ್ಮಕ ಭಾವವು ಇರಬಹುದು. ಗುರಿಯನ್ನು ಬದಲಿಸದೇ ಮುನ್ನುಗ್ಗಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಟ್ಟು ಪ್ರಗತಿ ಕಾಣಬಹುದು.
ಸಿಂಹ ರಾಶಿ: ಪರರ ಗೃಹದಲ್ಲಿ ಅಪಮಾನವಾದೀತು. ದೋಷವನ್ನು ಹೇಳುವ ಮೊದಲು ಗುಣಗಳನ್ನು ಹೇಳಿ, ನಿಮ್ಮ ಬಗ್ಗೆ ಭಾವನೆ ಬದಲಾದೀತು. ಆಪ್ತರಿಗೆ ಉಡುಗೊರೆ ಕೊಟ್ಟು ಮನಸ್ತಾಪವನ್ನು ಸರಿ ಮಾಡಿಕೊಳ್ಳುವಿರಿ. ತೊಂದರೆಗೆ ಸಿಕ್ಕಿಕೊಳ್ಳಲು ನಿಮ್ಮ ಮೊಂಡುತನವೇ ಕಾರಣ. ಇದೇ ನಿಮಗೆ ಮುಳುವಾಗಬಹುದು. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು.
ಕನ್ಯಾ ರಾಶಿ: ಸಾಲದ ಮುಕ್ತಾಯವನ್ನು ಸರಿಯಾಗಿ ಮಾಡಿಕೊಳ್ಳಿ. ಜೀವನದ ಹೊಸ ಅಧ್ಯಾಯಕ್ಕೆ ಒಳ್ಳೆ ಹೆಜ್ಜೆ ಇರಲಿ. ಮಕ್ಕಳಿಂದ ನಿಮಗೆ ಧನಪ್ರಾಪ್ತಿಯ ಸಂಭವವಿದೆ. ನಿಮಗೆ ಗೊತ್ತಿರುವುದಷ್ಟೇ ಸತ್ಯವಾಗಿ ಇರದು. ಸಂಗಾತಿಯ ಪ್ರೀತಿಯನ್ನು ಹೋಲಿಸಿಕೊಳ್ಳುವುದು ಬೇಡ. ಹೊಸತನಕ್ಕೆ ನೀವು ಒಗ್ಗುವುದು ಕಷ್ಟವಾದೀತು. ನಿಮ್ಮ ನಿಷ್ಠೆಯನ್ನು ಬದಲಾಯಿಸುವುದು ಬೇಡ.
ತುಲಾ ರಾಶಿ; ಪರರಿಗೆ ತಿಳಿವಳಿಕೆಯನ್ನು ಕೊಡುವುದು ಕಷ್ಟವಾದೀತು. ಹಳೆಯ ಘಟನೆಗಳನ್ನು ಸ್ಮರಿಸಿ ದುಃಖಿಸುವಿರಿ. ನಿಮ್ಮ ಸಮಯ ಮೀರಿದ ಕೆಲಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಯಾರದೋ ಮೇಲಿನ ಸಿಟ್ಟನ್ನು ಮನೆಮಂದಿಯ ಮೇಲೆ ತೋರಿಸುವಿರಿ. ವಾಹನ ಓಡಾಡವು ಸುಖಕರವಲ್ಲ. ತಾಯಿಗೆ ಕೊಡುವ ಗೌರವವು ಕಡಿಮೆ ಆದೀತು.
ವೃಶ್ಚಿಕ ರಾಶಿ: ಆರ್ಥಿಕತೆಗೆ ಸಂಬಂಧಿಸಿದ ವೃತ್ತಿಯಲ್ಲಿ ಒತ್ತಡ ಕಾಣಿಸುವುದು. ದೈವಬಲದಿಂದ ಯಶಸ್ಸು ಸಿಗುವುದು. ಹೊಸ ಮನೆಯಲ್ಲಿ ನಿಮಗೆ ಬೇಕಾದ ಅನುಕೂಲತೆಗಳ ಮನೆಯವರಲ್ಲಿ ಹೇಳುವಿರಿ. ನೀವು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕಾದೀತು. ಗುರಿಯ ಕಡಗೆ ಮಾತ್ರ ನಿಮ್ಮ ಗಮನವಿರಲಿ.
ಧನು ರಾಶಿ: ಭೂಮಿಯ ವ್ಯವಹಾರವು ನಿಮಗೆ ಸಂಬಂಧಿಸಿದರೆ ಮಾತ್ರ ಮಾತ್ರ ಪ್ರವೇಶಿಸಿ. ಲಾಭದ ಆಸೆಯಿಂದ ಹೋದರೆ ಗಂಭೀರತೆಯನ್ನು ಎದುರು ನೋಡಬೇಕಾಗಬಹುದು. ಬೆಂಬಲಿಗರಿಗೆ ಸಂತೋಷವನ್ನು ಕೊಡುವಿರಿ. ಸರಳ ಎಂದುಕೊಂಡ ಕೆಲಸವೇ ಇಂದು ಕಷ್ಟವಾಗುವುದು. ನಿಮ್ಮ ಸಂಬಂಧಗಳ ಬಗ್ಗೆ ಇಂದು ಹೆಚ್ಚು ಆಲೋಚಿಸುವಿರಿ. ಇಂದು ನಿಮ್ಮ ನಕಾರಾತ್ಮಕ ಭಾವನೆಗಳು ಹೆಚ್ಚಿರುವುದು.
ಮಕರ ರಾಶಿ; ಇಂದು ನಿಮಗೆ ನೆಮ್ಮದಿಯೇ ದೊಡ್ಡಲಾಭವಾಗಿ ಕಾಣಿಸುವುದು. ವಿವಾಹದ ಮಾತುಕತೆಗೆ ನಿಮ್ಮ ಒಪ್ಪಿಗೆ ಇರದು.ಸ್ತ್ರೀಯರಲ್ಲಿ ಸಹಾಯವನ್ನು ಕೇಳಲು ಹಿಂಜರಿಯುವಿರಿ. ನಿಮಗೆ ಇಷ್ಟವಾದದನ್ನು ಪಡೆಯುವ ಕಡೆಗೆ ಗಮನ ಇರಲಿ. ನೀವು ವೃತ್ತಿಯನ್ನು ಮಾಡುತ್ತಲೇ ಉನ್ನತ ಪದವಿಯನ್ನು ಪಡೆಯುವಿರಿ.
ಕುಂಭ ರಾಶಿ: ಇಂದು ನಿಮಗೆ ಹೋದಲ್ಲೆಲ್ಲ ನಕಾರಾತ್ಮಕ ಅಂಶಗಳೇ ಕಾಣಿಸುವುದು. ನಿಮ್ಮ ಸಾಹಸಕ್ಕೆ ಮೆಚ್ಚುಗೆ ಸಿಗಬಹುದು. ಬಂಧುಗಳ ಬಗ್ಗೆ ನಿಮಗೆ ಒಳ್ಳೆಯ ಅಭಿಪ್ರಾಯ ಬರದು. ಇಂದು ನಿಮಗೆ ಆತ್ಮೀಯರ ಒಡನಾಡ ಅಧಿಕವಾಗಲಿದೆ. ನಿಮ್ಮ ಸ್ವಭಾವದಿಂದ ನಿಮಗೆ ಕಿರಿಕಿರಿಯಾಗಬಹುದು. ಇನ್ನೊಬ್ಬರ ಮಾತುಗಳನ್ನು ನೀವು ಸಹಿಸುವುದು ಕಷ್ಟವಾದೀತು.
ಮೀನ ರಾಶಿ: ಪರರ ಸ್ಥಾನವನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನ ನಡೆಯುವುದು. ನಿಮ್ಮನ್ನು ಎಲ್ಲ ಕಡೆಯಿಂದ ನಿಯಂತ್ರಿಸುವ ಕಾರ್ಯವನ್ನು ಗೊತ್ತಾಗದಂತೆ ಮಾಡುವರು. ಉದ್ಯಮದ ಸ್ವರೂಪವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯನ್ನು ಹಾಕಿಕೊಳ್ಳುವಿರಿ. ಸಾಮಾಜಿಕ ಜಾಲತಾಣದಿಂದ ಸಮಸ್ಯೆಗೆ ಸಿಕ್ಕಿಕೊಳ್ಳುವಿರಿ. ದುಷ್ಟ ಮಾನಸಿಕತೆಯು ನಿಮಗೆ ಶೋಭೆ ತರದು. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಬಗ್ಗೆ ಸಂಶಯವನ್ನು ಅನ್ಯರ ಬಳಿ ವ್ಯಕ್ತಪಡಿಸಬಹುದು.