ಕುತ್ಯಾರು:(ಜ.7) ಆನೆಗುಂದಿ ಸರಸ್ವತೀ ಪೀಠ ಸೂರ್ಯ ಚೈತನ್ಯ ಶಾಲೆ, ಕುತ್ಯಾರು ಇದರ ವಾರ್ಷಿಕೋತ್ಸವವನ್ನು ಪಡುಕುತ್ಯಾರು ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಇದನ್ನೂ ಓದಿ: Daily Horoscope: ದಾಂಪತ್ಯದಲ್ಲಿ ನ ವಿರಸದಿಂದ ವೃಷಭ ರಾಶಿಯವರ ಮಾನಸಿಕ ಆರೋಗ್ಯ ಕೆಡುವುದು!!!
ಮುಖ್ಯ ಅತಿಥಿಗಳಾಗಿ ಉದ್ಯಮಿ ಹರೀಶ್ ಆಚಾರ್ಯ ಕಾಂಜರಕಟ್ಟೆ, ಸಿವಿಲ್ ಕಂಟ್ರಾಕ್ಟರ್ ನಾಗೇಶ್ ಭಂಡಾರಿ, ಆನೆಗುಂದಿ ಮೂಲ ಮಠದ ಅಧ್ಯಕ್ಷರಾದ ದಿನೇಶ್ ಆಚಾರ್ಯ ಪಡುಬಿದ್ರಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯನಿ ಸಂಗೀತಾ ರಾವ್ ವಾರ್ಷಿಕ ವರದಿಯನ್ನು ವಾಚಿಸಿದರು. ನರ್ಸರಿಯಿಂದ 10ನೇ ತರಗತಿಯ ವರೆಗಿನ ಸ್ಪರ್ಧಾವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಕಲಾ ರಂಗ (ರಿ)ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ಜರಗಿದ ಯಕ್ಷಗಾನ ತರಗತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಗುರುಗಳಾದ ರಾಮಕೃಷ್ಣ ನಂದಿಕೂರು ಇವರನ್ನು ಶಾಲಾ ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ ಗೌರವಿಸಿದರು . ಉಸ್ತುವಾರಿ ಶಿಕ್ಷಕಿ ಅನಿತಾ ತರಬೇತಿಯ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಕಾರ್ಯದರ್ಶಿ ಗುರುರಾಜ್ ಆಚಾರ್ಯ. ಕೆ ಮಾತನಾಡಿ ನೂತನ ಕಟ್ಟಡದಲ್ಲಿ ಎಲ್ ಕೆ ಜಿ,ಯು ಕೆ ಜಿ ಮತ್ತುಕಂಪ್ಯೂಟರ್ ವಿಭಾಗ ಆರಂಭದಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಲಿದ್ದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೆಚ್ಚಿನ ಮಕ್ಕಳು ದಾಖಲಾಗುವಂತೆ ಪೋಷಕರು ಮತ್ತು ಶಿಕ್ಷಕರು ಸಹಕರಿಸಬೇಕೆಂದು ತಿಳಿಸಿದರು.
ಅಸ್ಸೆಟ್ ಅಧ್ಯಕ್ಷ ಬಿ ಸೂರ್ಯ ಕುಮಾರ ಹಳೆಯಂಗಡಿ, ಗೌರವಾಧ್ಯಕ್ಷ ಬಿ. ಮೋಹನ್ ಕುಮಾರ್ ಬೆಳ್ಳೂರು, ಉಪಾಧ್ಯಕ್ಷರಾದ ವಿವೇಕಆಚಾರ್ಯ ಶಿರ್ವ, ಜನಾರ್ದನ ಆಚಾರ್ಯ ಬಜಕೂಡ್ಲು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ತಂತ್ರಿ, ಮಾತೃ ಮಂಡಳಿಯ ಅಧ್ಯಕ್ಷೆ ಶೋಭಾ ಆಚಾರ್ಯ ಇವರು ಕ್ರೀಡೆ, ಕಲಿಕೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಿಸಿದರು.
ಶಿಕ್ಷಕಿ ಸೌಮ್ಯ ಸ್ವಾಗತಿಸಿ ಶಿಕ್ಷಕಿ ಪ್ರತಿಮಾ, ವಾಣಿ, ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಬಹುಮಾನ ವಿತರಣೆಯಲ್ಲಿ ಸಹಕರಿಸಿದರು . ಶಿಕ್ಷಕಿ ಭವ್ಯಶ್ರೀ ಕಾರ್ಯಕ್ರ ನಿರೂಪಿಸಿ ಅಮಿತಾ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ರಮ್ಯಾ ಹಾಗೂ ಮಂಜುನಾಥ ಶೇಟ್ ನಿರ್ವಹಿಸಿದರು.