ಮಂಗಳೂರು:(ಜ.7) ಆಕಸ್ಮಿಕವಾಗಿ ಗುಂಡು ತಗುಲಿ ವ್ಯಕ್ತಿಯೋರ್ವ ಗಾಯಗೊಂಡಿರುವ ಘಟನೆ ವಾಮಂಜೂರಿನಲ್ಲಿ ನಡೆದಿದೆ.
ಇದನ್ನೂ ಓದಿ: ಮಂಗಳೂರು: ಕಾರಾಗೃಹದ ಆವರಣಕ್ಕೆ ಕೆಂಪು ಟೇಪ್‌ನಲ್ಲಿ ಸುತ್ತಿದ ಬಂಡಲ್‌ಗಳನ್ನು ಎಸೆಯಲು ಯತ್ನ
ಸಫ್ವಾನ್ ಗಾಯಗೊಂಡ ವ್ಯಕ್ತಿ.
ಸಫ್ವಾನ್ ವಾಮಂಜೂರಿನ ಅಂಗಡಿಯೊಂದಕ್ಕೆ ಹೋಗಿದ್ದ ಸಂದರ್ಭದಲ್ಲಿ ಗ್ರಾಹಕನೊಬ್ಬ ಅಲ್ಲಿಯೇ ಇಟ್ಟಿದ್ದ ರಿವಾಲ್ವರ್ ಅನ್ನು
ಪರಿಶೀಲಿಸಿದ್ದಾನೆ.
ಈ ಸಂದರ್ಭದಲ್ಲಿ ರಿವಾಲ್ವರ್ ನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಗುಂಡು ಹೊಟ್ಟೆಗೆ ತಗುಲಿ ಸಫ್ವಾನ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.