ಶಿರಾಡಿ:(ಜ.7) ರಬ್ಬರ್ ತೋಟಕ್ಕೆ ಉಪಯೋಗಿಸುವ ಆಸಿಡ್ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಕಳಪ್ಪಾರು ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: Mangaluru: ಲಾರಿ ಮತ್ತು ಬೈಕಿನ ನಡುವೆ ಭೀಕರ ಅಪಘಾತ
ಶಿರಾಡಿ ಗ್ರಾಮದ ಕಳಪ್ಪಾರು ನಿವಾಸಿ ಮಾಧವ ಗೌಡ (64ವ) ಮೃತವ್ಯಕ್ತಿ.
ಮಾಧವ ಗೌಡರವರು ಜ.5 ರಂದು ಬೆಳಗ್ಗೆ 10 ಗಂಟೆಗೆ ಮನೆಯಲ್ಲಿಯೇ ಯಾವುದೋ ಕಾರಣಕ್ಕೆ ಮನನೊಂದು ರಬ್ಬರ್ ತೋಟಕ್ಕೆ ಉಪಯೋಗಿಸುವ ಆಸಿಡ್ ಸೇವನೆ ಮಾಡಿ ಬೊಬ್ಬೆ ಹೊಡೆಯುತ್ತಿದ್ದರು.
ಇದನ್ನು ಗಮನಿಸಿದ ಮನೆಯವರು ತಕ್ಷಣವೇ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು.
ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ದಾರಿ ಮಧ್ಯೆ ಮಾಧವ ಗೌಡರವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮೃತರ ಪುತ್ರ ಮಂಜುಪ್ರಸಾದ್ ರವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.