Vishal: (ಜ.7) ತಮಿಳು ನಟ ವಿಶಾಲ್ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಅವರು ಮಾಸ್ ಆಗಿ ಗಮನ ಸೆಳೆಯುತ್ತಾರೆ. ಯಾವುದೇ ವಿಚಾರ ಇದ್ದರೂ ನೇರ ಮಾತುಗಳಲ್ಲಿ ಹೇಳುತ್ತಾರೆ. ಯಾರೇ ಪ್ರಶ್ನೆ ಮಾಡಿದರೂ ಅವರಿಗೆ ಉತ್ತರ ನೀಡುತ್ತಾರೆ. ಇಂಥ ವಿಶಾಲ್ ಅವರು ಈಗ ಸಖತ್ ಡಲ್ ಆಗಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಮದ ಗಜ ರಾಜ’ ಸಿನಿಮಾದ ಪ್ರಿ ರಿಲೀಸ್ ಈವೆಂಟ್ಗೆ ಆಗಮಿಸಿದ್ದರು. ಆಗ ಅವರ ಕೈ ನಡುಗಿದೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಇದನ್ನೂ ಓದಿ: Chahal and Dhanashree: ಚಹಾಲ್ & ಧನಶ್ರೀ ವರ್ಮಾ ದಾಂಪತ್ಯದಲ್ಲಿ ಬಿರುಕು?!
ಚೆನ್ನೈನಲ್ಲಿ ಇತ್ತೀಚೆಗೆ ‘ಮದ ಗಜ ರಾಜ’ ತಂಡದವರು ಅದ್ದೂರಿಯಾಗಿ ಪ್ರಿ-ರಿಲೀಸ್ ಈವೆಂಟ್ ಮಾಡಿದರು. ಈ ಚಿತ್ರಕ್ಕೆ ವಿಶಾಲ್ ಹೀರೋ. ಹೀಗಾಗಿ, ಅವರು ಕೂಡ ವೇದಿಕೆ ಏರಿದ್ದರು. ಅವರು ಮಾತನಾಡುವಾಗ ಕೈ ನಡುಗುತ್ತಿತ್ತು. ಮಾತುಗಳನ್ನಾಡಲು ಕಷ್ಟಪಟ್ಟರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಶಾಲ್ಗೆ ಏನಾಯಿತು ಎಂದು ಫ್ಯಾನ್ಸ್ ಆತಂಕ ಹೊರಹಾಕಿದ್ದಾರೆ.
ವಿಶಾಲ್ ಅವರು ಮಾತನಾಡುವಾಗ ಮೈಕ್ನ ಗಟ್ಟಿ ಹಿಡಿದು ಮಾತನಾಡುತ್ತಿದ್ದರು. ಅವರ ಮಾತುಗಳು ನೇರವಾಗಿ ಇರುತ್ತಿದ್ದವು. ಆದರೆ, ಮೊದಲಿದ್ದ ವಿಶಾಲ್ ಈಗ ಕಾಣೆ ಆಗಿದ್ದಾರೆ. ಈಗ ಕೇಳಿ ಬರುತ್ತಿರುವ ಸ್ಪಷ್ಟನೆ ಏನೆಂದರೆ ಅವರಿಗೆ ಆ ಸಂದರ್ಭದಲ್ಲಿ ತೀವ್ರ ಜ್ವರ ಇತ್ತು. ಆದಗ್ಯೂ ಅವರು ವೇದಿಕೆ ಏರಿ ಮಾತನಾಡಿದ್ದರು. ಜ್ವರ ಇದ್ದ ಕಾರಣದಿಂದಲೇ ಅವರಿಗೆ ನಡುಕ ಶುರುವಾಗಿತ್ತು ಎನ್ನಲಾಗಿದೆ.
ಸದ್ಯ ವಿಶಾಲ್ ಬಗ್ಗೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಜ್ವರದ ಮಧ್ಯೆಯೂ ಅವರು ಕಮಿಟ್ಮೆಂಟ್ ಮರೆಯಲಿಲ್ಲ ಎಂದು ಅನೇಕರು ಹೇಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ‘ವಿಶಾಲ್ ಡೆಡಿಕೇಷನ್. ಅವರು ಜ್ವರದ ಮಧ್ಯೆಯೂ ಸಿನಿಮಾ ಪ್ರಮೋಟ್ ಮಾಡಿದ್ದಾರೆ’ ಎಂದಿದ್ದಾರೆ ಅಭಿಮಾನಿಗಳು.