ಮೇಷ ರಾಶಿ :ನಿಮ್ಮ ಗತಿ ಯಾವುದರಲ್ಲಿ ಎನ್ನುವುದು ಗೊಂದಲವಾಗುವುದು. ಇಂದು ಅಂದುಕೊಂಡ ದೇವರ ಕಾರ್ಯವು ನಡೆಯದೇಹೋಗಬಹುದು. ಸ್ತ್ರೀಯರಿಗೆ ಮಾತುಗಾರಿಕೆಯಿಂದ ಪ್ರಶಂಸೆ ಸಿಗಲಿದೆ. ನಯವಾದ ಮಾತಿನಿಂದ ನಿಮ್ಮನ್ನು ಕಾರ್ಯಕ್ಕೆ ಒಲಿಸಿಬಹುದು. ಉದ್ಯೋಗದಲ್ಲಿ ಭಡ್ತಿ ಸಿಗುವ ಸಾಧ್ಯತೆ ಇದೆ. ಗೊಂದಲದಿಂದ ಇರುವ ಮನಸ್ಸು ಇಂದು ಪ್ರಶಾಂತವಾಗಲಿದೆ.
ವೃಷಭ ರಾಶಿ :ವೃತ್ತಿಯಲ್ಲಿ ಹೊಂದಾಣಿಕೆಯನ್ನು ರೂಢಿಸಿಕೊಳ್ಳುವಿರಿ. ಅನಿರೀಕ್ಷಿತ ಪ್ರಯಾಣದಿಂದ ಆಯಾಸವು ಅಧಿಕವಾದೀತು. ಯಾವುದಕ್ಕೂ ನಿರಾಸೆ ಇಟ್ಟುಕೊಳ್ಳುವುದು ಬೇಡ. ಸಮಯವು ಬೇಕಾಗಬಹುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಖರ್ಚು ಮಾಡಬೇಕಾಗಿಬರಬಹುದು. ಗೊಂದಲದಿಂದ ಹೊರಬರಲು ಸಹಾಯವನ್ನು ಪಡೆಯಿರಿ. ಮನಸ್ಸಿಗೆ ನಿಮ್ಮವರು ಆಡಿದ ಮಾತುಗಳು ಹಿಂಸೆಯನ್ನು ಕೊಡಬಹುದು.
ಮಿಥುನ ರಾಶಿ : ಅನಾರೋಗ್ಯ ಹೋದರೂ ಆಯಾಸ ಹೋಗುವುದಿಲ್ಲ. ಸಕಾರಾತ್ಮಕ ಅಂಶಗಳನ್ನು ಹೆಚ್ಚು ಸ್ವೀಕರಿಸಿ. ಇಂದು ತಂದೆ ಹಾಗು ತಾಯಿಯರ ಸೇವೆಯನ್ನು ಮಾಡುವ ಅವಕಾಶವು ನಿಮಗೆ ಸಿಗುವುದು. ನಿಮ್ಮ ಪಾಲಿಗೆ ಎಲ್ಲ ಬಾಂಧವ್ಯಗಳೂ ಸಮಯಕ್ಕೆ ಆಗಲಾರವು. ಸಹೋದ್ಯೋಗಿಗಳಿಂದ ಕಾರ್ಯಗಳಿಗೆ ವಿಘ್ನವುಂಟಾಗುವುದು. ತಪ್ಪು ನಿರ್ಧಾರಗಳಿಂದ ಆರ್ಥಿಕ ಹೊಡೆತವನ್ನು ತಿನ್ನಬೇಕಾಗುವುದು.
ಕರ್ಕಾಟಕ ರಾಶಿ :ಹೂಡಿಕೆಯ ಪ್ರಯೋಜನವನ್ನು ಇಂದು ಕಾಣುವಿರಿ. ಇಂದು ನೀವು ಯಾರನ್ನೂ ಲಘುವಾಗಿ ಕಾಣುವುದು ಬೇಡ. ಹಿತಶತ್ರುಗಳ ಕಾರಣದಿಂದ ಅವಕಾಶದಿಂದ ವಂಚಿತರಾಗುವಿರಿ. ವಾಹನ ಸಂಚಾರದಲ್ಲಿ ವ್ಯತ್ಯಯವಾಗುವುದು. ಆರ್ಥಿಕಲಾಭವನ್ನು ಕೇವಲ ತರ್ಕದಿಂದ ಸಾಧಿಸಲಾಗದು. ಎಲ್ಲ ರೀತಿಯಿಂದಲೂ ಅನುಕೂಲವಾಗಲಿ ಎಂಬ ಮನೋಭಾವವು ಇರಲಿದೆ. ಹಿತಶತ್ರುಗಳ ತೊಂದರೆಯ ನಡುವೆಯೂ ನಿಮ್ಮ ಅಭಿವೃದ್ಧಿಯು ಆಗಲಿದೆ.
ಸಿಂಹ ರಾಶಿ :ಪ್ರಾಮಾಣಿಕತೆಯಿಂದ ಶೀಘ್ರ ಯಶಸ್ಸು ಸಿಗದು. ಅನಿರೀಕ್ಷಿತ ಪ್ರಯಾಣವಾದರೂ ಕಾರ್ಯದಲ್ಲಿ ಜಯ ಸಿಕ್ಕೀತು. ಇಂದು ನಿಮ್ಮ ಪ್ರೀತಿಪಾತ್ರರ ಭೇಟಿಯಾಗಲಿದೆ. ಶುಭ ಕಾರ್ಯದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರಲಿದೆ. ಆಸ್ತಿಯ ಮಾರಾಟದಿಂದ ನಿಮಗೆ ಹೆಚ್ಚಿನ ಲಾಭವು ಸಿಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವು ಹೆಚ್ಚಾಗಿ ತೋರುವುದು. ಭೂಸ್ವಾದೀನವನ್ನು ಮಾಡಿಕೊಳ್ಳುವ ಸಂದರ್ಭವು ಬರಬಹುದು.
ಕನ್ಯಾ ರಾಶಿ :ತೋರಿಕೆಗೆ ಮಾಡುವ ಪ್ರೀತಿ ಕೆಲವು ಸಮಯವಷ್ಟೇ ಜೀವಂತವಾಗಿ ಇರುವುದು. ಇಂದು ನಿಮ್ಮ ಹಳೆಯ ಕಾರ್ಯಗಳನ್ನೇ ಯಾರಾದರೂ ನೆನಪಿಸಿಯಾರು. ಬಾಂಧವರ ನಡುವೆ ವ್ಯವಹಾರದ ಕಾರಣ ಭಿನ್ನಾಭಿಪ್ರಾಯ ಬರಬಹುದು. ಕಾರ್ಯದಲ್ಲಿ ಜಯವಿದ್ದರೂ ಆರ್ಥಿಕ ನಷ್ಟವು ಆಗಬಹುದು. ಹಿತಶತ್ರುಗಳ ಕಾರಣದಿಂದ ಇಂದಿನ ವ್ಯವಹಾರವು ಹಿಂದೆ ಸಾಗಲಿದೆ. ಒಳ್ಳೆಯದನ್ನು ಮಾಡಲು ಅನುಕೂಲವಿದ್ದರೂ ಮಾಡುವ ಮನಸ್ಸು ಬಾರದು.
ತುಲಾ ರಾಶಿ :ಮೇಲಧಿಕಾರಿಗಳು ನಿಮ್ಮ ಮೇಲೆ ಮಾನಸಿಕವಾಗಿ ದಾಳಿ ಮಾಡುವರು. ಇಂದು ನಿಮ್ಮ ಮುಂದೆಯೇ ವಿವಾಹದ ಪ್ರಸ್ತಾಪಗಳು ಬರಬಹುದು. ಕಡೆಗಣಿಸುವ ಸ್ಥಿತಿಯಲ್ಲಿ ನೀವಿಲ್ಲ. ಕಛೇರಿಯ ಕಾರ್ಯದ ನಿಮಿತ್ತ ಓಡಾಟವನ್ನು ಮಾಡಬೇಕಾಗಿದ್ದು ನಿಮಗೆ ಕಷ್ಟವಾದೀತು. ವಾದವನ್ನು ಮಾಡಿ ಎಲ್ಲರಿಂದ ದೂರಾಗುವಿರಿ. ಶತ್ರುಗಳು ಮಾನಸಿಕ ಕಿರುಕುಳವನ್ನು ಯಾವ ರೀತಿಯಿಂದಲೂ ಕೊಡಬಹುದು.
ವೃಶ್ಚಿಕ ರಾಶಿ :ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವಿದ್ದರೂ ಸಾಮಾಜಿಕವಾಗಿ ಕಷ್ಟವಾಗುವುದು. ಧಾರ್ಮಿಕ ಆಚರಣೆಯನ್ನು ಸಂಭ್ರಮದಿಂದ ಮಾಡುವಿರಿ. ಅಕ್ರಮ ವ್ಯವಹಾರಗಳು ಎಲ್ಲರಿಗೂ ಗೊತ್ತಾದೀತು. ಉದ್ಯೋಗದಲ್ಲಿ ಪ್ರಗತಿ ಇಲ್ಲ ಎಂದು ಬೇಸರಗೊಂಡಿದ್ದರೆ ನಿಮಗೆ ಅಲ್ಪ ನೆಮ್ಮದಿಯ ಸಂಗತಿಯು ಇರಲಿದೆ.
ಧನು ರಾಶಿ :ನೀವು ಯಾರ ಹಿಡಿತದಲ್ಲಿಯೂ ಇರಲು ಇಷ್ಟಪಡುವುದಿಲ್ಲ ಚರಾಸ್ತಿಯ ಹಂಚಿಕೆಯನ್ನು ನೀವು ಪಕ್ಷಪಾತದಿಂದ ಮಾಡುವಿರಿ. ದೀರ್ಘಕಾಲದ ಪ್ರೇಮವು ಸಾಕೆನಿಸುವುದು. ಏನನ್ನೂ ಮಾಡದೇ ಸುಮ್ಮನಿರಲಾರಿರಿ. ಸಂತಾನ ಪ್ರಾಪ್ತಿಯಿಂದ ನಿಮಗೆ ಖುಷಿ ಸಿಗಲಿದೆ. ಅವಿವಾಹಿತರಿಗೆ ವಿವಾಹದಿಂದ ಮನೆಯಲ್ಲಿ ನೆಮ್ಮದಿಯು ಇರುವುದು.
ಮಕರ ರಾಶಿ :ಪಾಲುದಾರಿಕೆಯಿಂದ ಹೊರ ಬಂದು ಸ್ವತಂತ್ರರಾಗಲು ಯೋಜನೆ ಮಾಡುವಿರಿ. ಬೇಕಾದ ವಸ್ತುಗಳನ್ನು ಅಗ್ಗದಲ್ಲಿ ಖರೀದಿಸಲು ಪ್ರಯತ್ನಿಸುವಿರಿ. ನೀವು ಹಿರಿಯರ ಜೊತೆ ಗೌರವಯುತವಾಗಿ ವರ್ತಿಸಿ. ಕೆಲವರು ಅಕಾರಣವಾಗಿ ಬಿಟ್ಟುಹೋಗಬಹುದು. ಅಲ್ಪ ಪ್ರಗತಿಯೂ ನಿಮಗೆ ಸಂತೋಷವನ್ನು ಕೊಡುವುದು. ನಿಮ್ಮ ಸಮಸ್ಯೆಯು ಗಂಭೀರ ರೂಪವನ್ನು ಪಡೆಯಬಹುದು.
ಕುಂಭ ರಾಶಿ :ಸ್ವ ಉದ್ಯೋಗಕ್ಕೆ ಆರ್ಥಿಕ ಸಂಸ್ಥೆಗಳ ಸಹಾಯವನ್ನು ಕೇಳುವಿರಿ. ಹಿರಿಯರಾಗಿ ಉತ್ತಮ ಮಾರ್ಗದರ್ಶನ ಮಾಡಬೇಕಾಗುವುದು. ಸಾಮರಸ್ಯದ ಅಭಾವದಿಂದ ಮಾನಸಿಕ ಸ್ಥಿತಿಯು ಅಸಮತೋಲನವಾಗಲಿದೆ. ನಿರೀಕ್ಷಿತ ಲಾಭವು ಆಗದಿದ್ದರೂ ನೆಮ್ಮದಿಗೆ ಕೊರತೆ ಕಾಣದು. ಅಪವಾದವನ್ನು ಸರಿ ಮಾಡಿಕೊಳ್ಳಲು ಬಹಳ ಪ್ರಯತ್ನಿಸುವಿರಿ. ಚಂಚಲವಾದ ಮನಸ್ಸಿನಿಂದ ನಿಮ್ಮ ನಿರ್ಧಾರವು ಪೂರ್ಣವಾಗದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗಬಹುದು. ಶುಭ ಕಾರ್ಯವೇ ಆಗಿದ್ದರೆ ದೈವಾನುಗ್ರಹ ನಿಮ್ಮ ಪಾಲಿಗೆ ಇದೆ.
ಮೀನ ರಾಶಿ :ನಿಮ್ಮಿಂದ ನಂಬಿಕೆ ಬರುವಂತಹ ಮಾತುಗಳನ್ನು ಆಡಿಸುವರು. ನಿಮ್ಮ ಮೂಲ ಧನವನ್ನು ತೆಗೆಯಬೇಕಾಗಬಹುದು. ಅನಿರೀಕ್ಷಿತ ತಿರುವುಗಳು ನಿಮ್ಮನ್ನು ಉದ್ವಿಗ್ನಗೊಳಿಸಬಹುದು. ಹೋರಾಟದ ಮನೋಭಾವವು ಇಂದು ಎದ್ದು ತೋರುವುದು. ಕಛೇರಿಯ ಕೆಲಸವು ನಿಮಗೆ ಸಮಾಧಾನ ಕೊಡದು. ನಿದ್ರೆಯು ಸರಿಯಾಗಿ ಆಗದೇ ಕಷ್ಟವಾದೀತು. ಪ್ರೀತಿಪಾತ್ರರ ಜೊತೆ ಧನಾತ್ಮಕವಾದ ಚಿಂತನೆಯನ್ನು ಮಾಡುವಿರಿ. ಉದ್ಯೋಗದಲ್ಲಿ ಸ್ಥಿರತೆಯು ಕಾಣದ ಕಾರಣ ಬದಲಿಸುವಿರಿ. ನಿರಂತರ ಅಸ್ತಿತ್ವದಲ್ಲಿ ಇರುವಂತೆ ನಿಮ್ಮನ್ನು ಇರಿಸಿಕೊಳ್ಳಿ.