ಬೆಳ್ತಂಗಡಿ :(ಜ.9) ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡಬಿದ್ರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡಬಿದ್ರೆ ಇವರ ಸಹಭಾಗಿತ್ವದಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರತಿಭಾ ಕಲೋತ್ಸವ ಸ್ವರ್ಧೆ ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾಗಿರಿ ಮೂಡಬಿದ್ರೆ ಯಲ್ಲಿ ನಡೆಯಿತು.
ಇದನ್ನೂ ಓದಿ: ಬಳ್ಳಾರಿ: ತಿರುಪತಿ ಕಾಲ್ತುಳಿತದಲ್ಲಿ ಬಳ್ಳಾರಿಯ ಮಹಿಳೆ ಸಾವು!!
ಜಿಲ್ಲಾ ಮುಖ್ಯ ಆಯುಕ್ತರಾದ ಡಾ. ಮೋಹನ್ ಆಳ್ವಾರವರ ನೇತೃತ್ವದಲ್ಲಿ ನಡೆದ ಪ್ರತಿಭಾ ಕಲೋತ್ಸವ ಸ್ವರ್ಧೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಬುಲ್ ಬುಲ್ ವಿದ್ಯಾರ್ಥಿನಿಯಾದ ಅನಘಾ ಎ. ಜಿ ಅಭಿನಯ ಗೀತೆಯಲ್ಲಿ ಪ್ರಥಮ ಸ್ಥಾನ, ಕಥೆ ಹೇಳುವ ಸ್ಪರ್ಧೆಯಲ್ಲಿ ಬುಲ್ ಬುಲ್ ವಿದ್ಯಾರ್ಥಿನಿಯಾದ ದಿಶಾ ಡಿ ಎ ದ್ವಿತೀಯ ಸ್ಥಾನ, ಜಾನಪದ ಗೀತೆಯಲ್ಲಿ ಗೈಡ್ಸ್ ವಿಭಾಗದಲ್ಲಿ ತೃತಿಯ ಸ್ಥಾನ, ಬೃಂದ ಗೈಡ್ಸ್ ವಿಭಾಗದಲ್ಲಿ ಚಿತ್ರಕಲೆಯಲ್ಲಿ ಮೊದಲ ಸ್ಥಾನ ಪಡೆದಿರುತ್ತಾರೆ.
ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ರವರ ಮಾರ್ಗದರ್ಶನದಲ್ಲಿ ಶಿಕ್ಷಕಿ ರಮ್ಯಾ ಬಿ ಜಿ ರವರ ತರಬೇತಿ , ಗೀತಾ, ಸ್ಕೌಟ್ ಮಾಸ್ಟರ್ ಮಂಜುನಾಥ್ ರವರ ಸಹಕಾರದೂಂದಿಗೆ, ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಶ್ರೀಮತಿ ಪ್ರಮೀಳರವರ ಸೂಚನೆಯೊಂದಿಗೆ ಜಿಲ್ಲಾ ಮಟ್ಟದ ಸಮಗ್ರ ಪ್ರಶಸ್ತಿ ಚಾಂಪಿಯನ್ ಶಿಪ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆಯಲು ಸಾಧ್ಯವಾಯಿತು.ಕಬ್ ಬುಲ್ ಬುಲ್ , ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳ ಸತತ ಪ್ರಯತ್ನ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಾಧನೆಗೆ ಪ್ರೇರಣೆಯಾಯಿತು.