ಬೆಳ್ತಂಗಡಿ:(ಜ.9)ಕರ್ನಾಟಕ ರಾಜ್ಯ ಡಾಕ್ಟರ್ ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ನೃತ್ಯ ಪರಿಕರಗಳ ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಕುಮಾರಿ ಅದಿತಿ ಮುಗೆರೋಡಿ ಇವರು ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆಯಾಗಿದ್ದಾರೆ.
ಇದನ್ನೂ ಓದಿ: ಕಾಸರಗೋಡು: ಕಾರಿನಲ್ಲಿ ಗಾಂಜಾ ಸಾಗಾಟ
ಅದಿತಿ ಅವರು, ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ ರಿಜಿಸ್ಟರ್ಡ್ ಪುತ್ತೂರು ಇದರ ನಿರ್ದೇಶಕರಾದ ವಿದ್ವಾನ್ ಸುದರ್ಶನ್ ಎಂ ಎಲ್ ಭಟ್ ಇವರ ಶಿಷ್ಯೆ ವಿದುಷಿ ಡಿಂಪಲ್ ಶಿವರಾಜ್ ಇವರಿಂದ ಶ್ರೀ ಶಾರದಾ ಕಲಾ ಶಾಲೆ ಪದ್ಮುಂಜ ಶಾಖೆ ಇಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.
ವಿಶ್ವವಿದ್ಯಾನಿಲಯ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯನ್ನು ಪೂರೈಸಿದ ಅತೀ ಕಿರಿಯ ಅಭ್ಯರ್ಥಿಯಾದ ಅದಿತಿ ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪದ್ಮುಂಜ ಇಲ್ಲಿನ 5ನೇ ತರಗತಿ ವಿದ್ಯಾರ್ಥಿನಿ. ಇವರು ಮಂಜುಳಾ ಮತ್ತು ಪುರುಷೋತ್ತಮ ಮುಗೆರೋಡಿ ದಂಪತಿಯ ಪುತ್ರಿ.