Fri. Jan 10th, 2025

Mangaluru : ರಿವಲ್ವಾರ್ ಪರಿಶೀಲನೆ ವೇಳೆ ಗುಂಡು ತಗುಲಿ ಗಾಯಗೊಂಡ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ – ಏನದು?

ಮಂಗಳೂರು:(ಜ.9) ವ್ಯಕ್ತಿಯೊಬ್ಬರು ರಿವಾಲ್ವರ್ ನ್ನು ಹಿಡಿದುಕೊಂಡು ಹೊಟ್ಟೆಗೆ ಒತ್ತಿ ಅದರ ಟ್ರಿಗರ್ ಒತ್ತಿದ್ದಾರೆ. ಇದರ ಪರಿಣಾಮ ಹೊಟ್ಟೆಗೆ ಗುಂಡು ಹೊಡೆದು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರಲ್ಲಿ ನಡೆದಿತ್ತು. ಆದರೆ ಈಗ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.

ಇದನ್ನೂ ಓದಿ: ಸುರತ್ಕಲ್‌: ಸುರತ್ಕಲ್‌ ಬೀಚ್‌ಗೆ ಬಂದ ಮೂವರು ವಿದ್ಯಾರ್ಥಿಗಳು ನೀರುಪಾಲು

ಮಂಗಳೂರು ಹೊರವಲಯದ ವಾಮಂಜೂರಿನಲ್ಲಿ ಈ ರೀತಿಯ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಸಫ್ವಾನ್ ಎಂಬುವವರು ಗುಂಡು ಹೊಡೆದುಕೊಂಡು ಗಾಯಗೊಂಡ ವ್ಯಕ್ತಿ. ಆದರೆ ಇದು ಬರೀ ಕಟ್ಟಿದ ಕಥೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಪೊಲೀಸರ ತನಿಖೆಗ ವೇಳೆ ಪಿಸ್ತೂಲ್ ಗೆ ಲೈಸೆನ್ಸ್ ಇಲ್ಲ ಎಂದು ಸತ್ಯ ಬಯಲಾಗಿದ್ದು, ಇದೀಗ ಪ್ರಕರಣ ದಾಖಲಾಗಿದೆ.

ಕಟ್ಟಿದ ಕಥೆಯಲ್ಲಿ ಏನಿತ್ತು?
ವಾಮಂಜೂರಿನ ಸೆಕೆಂಡ್ ಹ್ಯಾಂಡ್ ಅಂಗಡಿಯೊಂದರಲ್ಲಿ ಭಾಸ್ಕರ್ ಎಂಬವರು ಗನ್ ಅನ್ನು ಟೇಬಲ್ ಮೇಲಿರಿಸಿ ವಾಶ್ ರೂಂ ಗೆಂದು ತೆರಳಿದ್ದರು. ಈ ವೇಳೆ ಸೆಕೆಂಡ್ ಹ್ಯಾಂಡ್ ಬಜಾರ್ ಗೆ ಖರೀದಿಗೆ ಬಂದಿದ್ದ ಸಫ್ವಾನ್ ಎಂಬವರು ಆಟದ ವಸ್ತುವೆಂದು ಭಾವಿಸಿ ಹೊಟ್ಟೆಯ ಮೇಲಿಟ್ಟು ಶೂಟ್ ಮಾಡಿಕೊಂಡಿದ್ದಾರೆ. ಪರಿಣಾಮ ಸಫ್ವಾನ್ ಹೊಟ್ಟೆಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ ಎನ್ನಲಾಗಿತ್ತು.

ಅಸಲಿಗೆ ನಡೆದದ್ದೇನು?
ವಾಮಂಜೂರಿನ ಅದ್ದು ಅಲಿಯಾಸ್ ಬದ್ರುದ್ದೀನ್ (34) ಗುಂಡು ಹಾರಿಸಿದ ಆರೋಪಿ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ‘ವಾಮಂಜೂರಿನ ಬಳಿ ಬದ್ರುದ್ದೀನ್ ರೆಟೇಲ್ ಮಳಿಗೆಯನ್ನು ನಡೆಸುತ್ತಿದ್ದ. ಆತ ಪರವಾನಗಿ ಇಲ್ಲದ ಪಿಸ್ತೂಲನ್ನು ಹೊಂದಿದ್ದು ಅದನ್ನು ಪರಿಶೀಲಿಸುವ ಉದ್ದೇಶದಿಂದ ಗುಂಡು ಹಾರಿಸಿದ್ದ.

ಆ ಗುಂಡು ಆತನ ಮಳಿಗೆಯ ಹೊರಗಡೆ ಕುಳಿತಿದ್ದ ಮೊಹಮ್ಮದ್ ಸಫಾನ್ (25 ವರ್ಷ) ಎಂಬುವರಿಗೆ ತಗುಲಿದೆ. ಗಾಯಾಳುವನ್ನು ಚಿಕಿತ್ಸೆ ಸಲುವಾಗಿ ಜನಪ್ರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಮೂಡುಶೆಡ್ಡೆಯ ಇಮ್ರಾನ್ ಎಂಬಾತ ಬದ್ರುದ್ದೀನ್‌ಗೆ ಪರವಾನಗಿ ಇಲ್ಲದ ಪಿಸ್ತೂಲ್ ನೀಡಿದ್ದ ಎಂದು ವಿಚಾರಣೆಯಿಂದ ಗೊತ್ತಾಗಿದೆ. ಸದ್ಯ ಇದೀಗ ಈ ಕುರಿತು ಹಲವಾರು ಕಾಯ್ದೆಗಳ ನಡೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *