Fri. Jan 10th, 2025

Nagpur: ಮಧ್ಯರಾತ್ರಿವರೆಗೆ ವಿವಾಹ ವಾರ್ಷಿಕೋತ್ಸವದ ಪಾರ್ಟಿ – ವಧು-ವರರಂತೆ ಸಿಂಗರಿಸಿಕೊಂಡು ಸಾವಿಗೆ ಶರಣಾದ ದಂಪತಿ!!!

Nagpur:(ಜ.9) ಮಹಾರಾಷ್ಟ್ರ ನಾಗ್ಪುರದಲ್ಲಿ ದಂಪತಿಗಳು ವಧು-ವರರಂತೆ ಸಿಂಗರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವನವನ್ನು ಅರ್ಧಕ್ಕೆ ಮುಗಿಸಿದ್ದಾರೆ.

ಇದನ್ನೂ ಓದಿ: ಬಂದಾರು : “ಪೆರ್ಲ ಬೈಪಾಡಿ ಊರುದ ಭಕ್ತಿದ ಎಸಲ್” ತುಳು ಆಡಿಯೋ & ವಿಡಿಯೋ ಆಲ್ಬಮ್ ಬಿಡುಗಡೆ

ದಂಪತಿಗಳಿಬ್ಬರು, ಸ್ನೇಹಿತರೊಂದಿಗೆ ಮಧ್ಯರಾತ್ರಿವರೆಗೆ ತಮ್ಮ 26ನೇ ವಿವಾಹ ವಾರ್ಷಿಕೋತ್ಸವದ ಪಾರ್ಟಿ ನಡೆಸಿ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ರಾತ್ರಿ ನಡೆದಿದೆ.

ಮೃತ ದಂಪತಿಗಳನ್ನು ಜೆರಿಲ್ ಡ್ಯಾಮ್ಸನ್ ಆಸ್ಕರ್ (57) ಮತ್ತು ಆಯನ್ (46) ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಂಪತಿ ಕಳುಹಿಸಿದ ಮೊಬೈಲ್​ ಸಂದೇಶದಿಂದ ಘಟನೆ ಬೆಳಕಿಗೆ ಬಂದಿದ್ದು, ಈ ದಂಪತಿಗಳು ತಮ್ಮ ಮದುವೆ ದಿನದಂದು ಧರಿಸಿದ್ದ ವಸ್ತ್ರವನ್ನೇ ಧರಿಸಿ ದಂಪತಿಗಳು ತಮ್ಮ 26ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಮಾಹಿತಿ ಪ್ರಕಾರ, ಮದುವೆಯಾಗಿ 25 ವರ್ಷ ಕಳೆದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಇದರಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಇಬ್ಬರು ಮರಣಪತ್ರವನ್ನು ಬರೆದಿಟ್ಟಿದ್ದಾರೆ. ಆದರೆ ತಮ್ಮ ಪತ್ರದಲ್ಲಿ ಅವರು ತಮ್ಮ ಆತ್ಮಹತ್ಯಗೆ ಯಾರನ್ನು ಸಹ ಹೊಣೆ ಮಾಡಿಲ್ಲ. ಇನ್ನು ದಂಪತಿಯ ಕೊನೆಯ ಆಸೆಯಂತೆ, ಮಂಗಳವಾರ ಸಂಜೆ ಜರಿಪಟ್ಕಾ ಕ್ಯಾಥೋಲಿಕ್ ಸ್ಮಶಾನದಲ್ಲಿ ಅವರ ದಂಪತಿಗಳಿಗೆ ಒಟ್ಟಿಗೆ ಶವಪೆಟ್ಟಿಗೆಯನ್ನು ತಯಾರಿಸಿ ನಂತರ ಅದನ್ನು ಒಟ್ಟಿಗೆ ಸ್ಮಶಾನದಲ್ಲಿ ಜೋಡಿಸಲಾಗಿದೆ.

ಅದಲ್ಲದೆ ದಂಪತಿಯು ಕಳೆದ ಎರಡು ತಿಂಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ ಕೊನೆಗೆ ಸಂಬಂಧಿಕರೊಂದಿಗೆ ಕ್ರಿಸ್ಮಸ್ ಆಚರಣೆಯ ನಂತರ, ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡು ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದರು. ಮೃತದೇಹಗಳನ್ನು ಅಂತ್ಯಕ್ರಿಯೆಗಾಗಿ ಸಂಬಂಧಿಕರಿಗೆ ಹಸ್ತಾಂತರಿಸುವ ಮೊದಲು ಮೇಯೊ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಘಟನೆಯಲ್ಲಿ ಯಾವುದೇ ದುಷ್ಕೃತ್ಯ ನಡೆದಿಲ್ಲ. ಹೀಗಾಗಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *