ಸುಬ್ರಹ್ಮಣ್ಯ (ಜ.9): ಕಡಬ ತಾಲೂಕು ದ. ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಸಿರಿಬಾಗಿಲು ಇಲ್ಲಿಯ ಶಾಲಾ ಎಸ್ ಡಿ ಎಂ ಸಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ: ತಮಿಳುನಾಡು: ಕೆಎಸ್ಆರ್ ಟಿ ಸಿ ಬಸ್ & ಕ್ಯಾಂಟರ್ ನಡುವೆ ಭೀಕರ ಅಪಘಾತ
ಸಮಾರಂಭದ ಅಧ್ಯಕ್ಷತೆಯನ್ನು ಕೊಂಬಾರು ಗ್ರಾಮ ಪಂಚಾಯತ್ ಅಧ್ಯಕ್ಷ ಮಧುಸೂಧನ ವಹಿಸಿದ್ದರು. ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಯನ್ನು ಪ್ರಸನ್ನ ಕುಮಾರ್ ಕೆ.ಎನ್. ನಿರ್ವಹಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೊಂಬಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಜಾತ ಜಯರಾಮ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಯಶ್ರೀ ರಾಮಚಂದ್ರ ಕಾಪಾರು,
ಸರಿತಾ ನಿತ್ಯಾನಂದ ,ಚೆನ್ನ ಕೇಶವ ಕೈoತಿಲ, ಗಣೇಶ ಪಿಲಿಕಜೆ , ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ಕಡಬ ತಾಲೂಕಿನ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಹೈಕೋರ್ಟ್ ವಕೀಲರಾದ ಪ್ರವೀಣ್ ಕುಮಾರ್ ಕೆ.ಎನ್, ಕ್ಯಾಮ್ಕೋ ಉದ್ಯೋಗಸ್ಥರಾದ ಗಣೇಶ್ ಕಟ್ಟೆ, ಶಾಲಾ ಮುಖ್ಯ ಶಿಕ್ಷಕ ವಿಜಯಕುಮಾರ ನಡುತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡ ಸಹ ಶಿಕ್ಷಕ ದಿನೇಶ್ ಆಚಾರ್ಯ ಹಾಗೂ ಸದ್ಯದಲ್ಲೇ ನಿವೃತ್ತಿಗೊಳ್ಳಲಿರುವ ಮುಖ್ಯ ಶಿಕ್ಷಕ ವಿಜಯಕುಮಾರ ನಡುತೋಟ ಅವರುಗಳನ್ನ ಗೌರವಿಸಲಾಯಿತು. ಹಾಗೆ ಶಾಲಾ ವಾರ್ಷಿಕೋತ್ಸವಕ್ಕೆ ರೂ .5,000/= ಕ್ಕಿಂತ ಮೇಲ್ಪಟ್ಟ ಸಹಾಯಧನ ನೀಡಿದವರನ್ನು ಗೌರವಿಸಲಾಯಿತು.
ಸಭಾ ಕಾರ್ಯಕ್ರಮ ನಂತರ ಅಂಗನವಾಡಿ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮಗಳು ,ಶಾಲಾ ವಿದ್ಯಾರ್ಥಿಗಳಿಂದ ಸಿರಿ ವೈಭವ ಸಾಂಸ್ಕೃತಿಕ ಕಾರ್ಯಕ್ರಮ,
ಹಳೆ ವಿದ್ಯಾರ್ಥಿಗಳು ಹಾಗೂ ಊರವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ನಂತರ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ,ಮಂಜೇಶ್ವರ ತಂಡದವರು ಅಭಿನಯಿಸಿದ ತುಳು ಪೌರಾಣಿಕ ಮತ್ತು ಸಾಮಾಜಿಕ ಭಕ್ತಿ ಪ್ರಧಾನ ನಾಟಕ ಕಲ್ಜಿಗದ ಮೈಕಾರ ಪಂಜುರ್ಲಿ ಪ್ರದರ್ಶನಗೊಂಡಿತು.