ಸುರತ್ಕಲ್:(ಜ.9) ಮಂಗಳೂರು ನಗರದ ಹೊರವಲಯದ ಕುಳಾಯಿ ಹೊಸಬೆಟ್ಟು ಬೀಚ್ ಗೆ ಪ್ರವಾಸಕ್ಕೆ ಬಂದಿದ್ದ ನಾಲ್ವರ ಪೈಕಿ ಮೂವರು ನೀರುಪಾಲಾಗಿರುವ ಘಟನೆಯೊಂದು ದುರ್ಘಟನೆ ನಡೆದಿದೆ. ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ತಿರುಪತಿ: ವೈಕುಂಠ ಏಕಾದಶಿ ಮುನ್ನ ತಿರುಪತಿಯಲ್ಲಿ ಕಾಲ್ತುಳಿತ
ಬೆಂಗಳೂರಿನಿಂದ ನಾಲ್ವರು ಪ್ರವಾಸಕ್ಕೆಂದು ಬಂದಿದ್ದು, ಬೀದರ್‌ನ ಪರಮೇಶ್ವರ್ ರಕ್ಷಣೆ ಮಾಡಲಾಗಿದ್ದು, ಚಿತ್ರದುರ್ಗ ಜಿಲ್ಲೆಯ ಮಂಜುನಾಥ್ ಎಸ್, ಶಿವಮೊಗ್ಗ ಜಿಲ್ಲೆಯ ಶಿವಕುಮಾರ್ ಮತ್ತು ಬೆಂಗಳೂರಿನ ಸತ್ಯವೇಲು ಸಾವಿಗೀಡಾಗಿದ್ದಾರೆ.
ಶಿವಕುಮಾರ್ ಮತ್ತು ಸತ್ಯವೇಲು ಮೃತದೇಹಗಳು ಪತ್ತೆಯಾಗಿದ್ದು, ಮಂಜುನಾಥನ ಮೃತದೇಹಕ್ಕೆ ಪತ್ತೆ ಕಾರ್ಯ ನಡೆದಿದೆ.
ಸುರತ್ಕಲ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದು, ಪರಿಶೀಲನೆ ಮಾಡಿದ್ದಾರೆ.
ಬೆಂಗಳೂರಿನ ಎಎಂಸಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾದ ಇವರು ನೀರಿನ ಆಳ ತಿಳಿಯದೆ ಕೊಚ್ಚಿ ಹೋಗಿದ್ದಾರೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.