ಬಂದಾರು :(ಜ.10) ಬಂದಾರು ಗ್ರಾಮದ ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಷ್ಠಬಂಧ ಬ್ರಹ್ಮಕಲಶೋತ್ಸವ ಶುಭ ಸಂದರ್ಭದಲ್ಲಿ ಉಜಿರೆ, ಬೆಳಾಲು, ಮಾಯಾ, ಕೊಲ್ಪಾಡಿ ಗ್ರಾಮದ ಭಕ್ತಾಧಿಗಳಿಂದ ಚೆಂಡೆ, ವಾದ್ಯ, ಬ್ಯಾಂಡ್ ವಾಳಗದೊಂದಿಗೆ ಮೆರವಣಿಗೆಯ ಮೂಲಕ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಇದನ್ನೂ ಓದಿ: ಮುಂಬೈ: ಪ್ರೀತಿ ನಿರಾಕರಿಸಿದ್ದಕ್ಕೆ ನೂರಾರು ಜನರ ಮುಂದೆಯೇ ಯುವತಿಯ ಬರ್ಬರ ಹತ್ಯೆ
ತಾಂಬೂಲ ನೀಡುವ ಮೂಲಕ ಬರಮಾಡಿಕೊಳ್ಳಲಾಯಿತು. , ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕರಾದ ಬಾಲಕೃಷ್ಣ ಪೂಜಾರಿ ಬಜ ಗುತ್ತು, ಅಧ್ಯಕ್ಷರಾದ ಮಹಾಬಲ ಗೌಡ, ಕಾರ್ಯದರ್ಶಿ ಹರೀಶ್ ಗೌಡ ಪರಪ್ಪಾಜೆ, ಕೋಶಾಧಿಕಾರಿ ಕೇಶವ ಗೌಡ ಕೊಂಗುಜೆ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ ಗೌಡ ಅಡ್ಡಾರು,
ಕಾರ್ಯದರ್ಶಿ ಉಮೇಶ್ ಗೌಡ ಅಂಗಡಿಮಜಲು, ಅರ್ಚಕರಾದ ಅನಂತರಾಮ ಶಬರಾಯ, ಅನುವಂಶೀಯ ಆಡಳಿತ ಮೊಕ್ತೇಸರರಾದ ಕುಕ್ಕಪ್ಪ ಗೌಡ, ಡೀಕಯ್ಯ ಗೌಡ ಕಂಚರೋಟ್ಟು, ಬಂದಾರು ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಪಂಚಾಯತ್ ಸದಸ್ಯರಾದ ಅನಿತಾ ಕುರುಡಂಗೆ, ಹೊನ್ನಪ್ಪ ಗೌಡ ಸೋನಕುಮೇರು,
ಶ್ರೀನಿವಾಸ ಗೌಡ ಬೆಳಾಲು, ಸತೀಶ್ ಗೌಡ ಎಳ್ಳುಗದ್ದೆ, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ, ಉದ್ಯಮಿ ಜಯಣ್ಣ ಮೀನoದೆಲು, ಪದ್ಮ ಗೌಡ ಬೆಳಾಲು, ವಿವಿಧ ಸಮಿತಿಗಳ ಪದಾಧಿಕಾರಿಗಳು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.