ಬೆಂಗಳೂರು:(ಜ.10) ಶಸ್ತ್ರಾಸ್ತ್ರ ತ್ಯಜಿಸಿ ಪೊಲೀಸರ ಮುಂದೆ ಶರಣಾದ 6 ಮಂದಿ ನಕ್ಸಲರು ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಬಿಗಿ ಪೊಲೀಸ್ ಭದ್ರತೆಯೊಂದಿಗೆ ಅವರನ್ನು ಜೈಲಿಗೆ ಕಳುಹಿಸಲಾಯಿತು.
ಇದನ್ನೂ ಓದಿ: ಉಜಿರೆ: “ಕಾಲ್ಪನಿಕ ಬರವಣಿಗೆ: ಅನುವಾದ ಮತ್ತು ಪ್ರದರ್ಶನ” ರಾಷ್ಟ್ರೀಯ ವಿಚಾರ ಸಂಕಿರಣ
ಹೈ ಸೆಕ್ಯೂರಿಟಿ ಬ್ಯಾರಕ್ ಗೆ ಪುರುಷ ನಕ್ಸಲರು ಹಾಗೂ ಮಹಿಳಾ ಬ್ಯಾರಕ್ ಗೆ ಮಹಿಳಾ ನಕ್ಸಲರು ಶಿಫ್ಟ್ ಆಗಿದ್ದಾರೆ. 3 ಕೆಎಸ್ ಆರ್ ಪಿ, 5ಕ್ಕೂ ಹೆಚ್ಚು ವಾಹನಗಳ ಹೈ ಸೆಕ್ಯೂರಿಟಿ ಮೂಲಕ ಶರಣಾಗತ ನಕ್ಸಲರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಯಿತು.
ಗುರುವಾರ ಮಧ್ಯಾಹ್ನ ಶರಣಾಗತ ನಕ್ಸಲರನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದರು. 6 ಮಂದಿಗೂ ಜನವರಿ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ.