ಧರ್ಮಸ್ಥಳ:(ಜ.10) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಧರ್ಮಸ್ಥಳ , ಅಖಿಲ ಕರ್ನಾಟಕ ಜನ ಜನಜಾಗೃತಿ ವೇದಿಕೆ ಟ್ರಸ್ಟ್ ಧರ್ಮಸ್ಥಳ ಇದರ ವತಿಯಿಂದ ಜನಜಾಗೃತಿ ವೇದಿಕೆಯ ಸರ್ವ ಸದಸ್ಯರ ಸಮಾವೇಶವು ಧರ್ಮಸ್ಥಳದ ಅಮೃತವರ್ಷಿಣಿಯಲ್ಲಿ ನಡೆಯಿತು.
ಇದನ್ನೂ ಓದಿ: ಸುರತ್ಕಲ್: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಪ್ರಜೆ ಅರೆಸ್ಟ್!!
ಕಾರ್ಯಕ್ರಮವನ್ನು ಮಾತೃಶ್ರೀ ಡಾ. ಹೇಮಾವತಿ ವೀ. ಹೆಗ್ಗಡೆಯವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು , ಗ್ರಾಮಾಭಿವೃದ್ಧಿ ಯೋಜನೆ ಅನ್ನುವುದು ವಟ ವೃಕ್ಷ ಇದ್ದಂತೆ. ಜನ ಜಾಗೃತಿ ಸೇರಿ ಬೇರೆ ಬೇರೆ ವಿಭಾಗಗಳು ಅದರ ರೆಂಬೆಗಳಾಗಿದೆ. ಜನ ಜಾಗೃತಿ ಎಂಬ ರೆಂಬೆ ಬೇರೆ ಬೇರೆ ರೀತಿಯ ಫಲ ನೀಡುತ್ತದೆ ಎಂದರು.
ಹೆಣ್ಣು ಮಕ್ಕಳಿಗೆ ಮಾತ್ರ ಬೇರೆಯವರ ಕಷ್ಟ ಅರ್ಥ ಆಗುತ್ತದೆ. ಆ ನೋವು ಅನುಭವಿಸಿದ್ದರಿಂದ ಆ ನೋವು ಅರ್ಥ ಆಗುತ್ತೆ. ಜನ ಜಾಗೃತಿಯಲ್ಲಿ ಮಹಿಳೆಯರು ಕೂಡ ಸದಸ್ಯರಾಗಿ ಇರೋದು ನನಗೆ ಖುಷಿ ತಂದಿದೆ ಎಂದರು. ಈ ಬಾರಿಯ ಹೊಸ ವರ್ಷಕ್ಕೆ ಮದ್ಯದ ಹೊಳೆ ಹರಿದಿತ್ತು.
ಕುಡಿದಿದ್ದ ಯುವಕ – ಯುವತಿಯರನ್ನು ಎತ್ತಿಕೊಂಡು ಹೋಗುವ ಘಟನೆಗಳನ್ನು ನಾವು ಮಾಧ್ಯಮಗಳ ಮೂಲಕ ನೋಡಿದ್ದೇವೆ. ಯುವಕ ಯುವತಿಯರು ಹೀಗೆ ಚಟಕ್ಕೆ ಬಿದ್ದರೆ ದೇಶದ ಭವಿಷ್ಯಕ್ಕೆ ಕುತ್ತು ತರಲಿದೆ ಎಂದರು. ಹೀಗಾಗಿ ಒಬ್ಬ ಕುಡುಕನನ್ನು ಬದಲು ಮಾಡಿದರೆ ಅದುವೇ ದೊಡ್ಡ ಬದಲಾವಣೆ ಎಂದರು. “ಕತ್ತಲ ಕುಡುಕರ ಬೆಳಕಿನ ಮಕ್ಕಳು” ಎಂಬ ಪುಸ್ತಕವನ್ನು ಶ್ರೀಮತಿ ಶ್ರದ್ಧಾ ಅಮಿತ್ ಅವರು ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು , ಮದ್ಯಪಾನ ಅನ್ನುವುದು ಈಗಿನ ಕಾಲದಲ್ಲಿ ಜೀವನ ಶೈಲಿಯಾಗಿದೆ. ಹೊಸ ಮನೆ ಕಟ್ಟಿದರೆ ಬೇರೆ ಬೇರೆ ವಿಭಾಗಗಳ ನಾವು ಹಿಂದೆ ಎಲ್ಲ ತೋರಿಸುತ್ತಾ ಇದ್ದೆವು. ಆದರೆ ಈಗ ಮನೆಯೊಳಗೆ ಬಾರ್ ಮಾಡಿದ್ದೇವೆ ಅಂತ ಜನರು ತೋರಿಸುವ ಶೈಲಿ ಈಗ ಆರಂಭವಾಗಿದೆ ಎಂದರು.
ಎಲ್ಲರೂ ಕುಡಿತಾರೆ, ಎಲ್ಲರೂ ಮಾಡ್ತಾರೆ ಅದರಲ್ಲಿ ಬೇರೆ ವಿಶೇಷತೆ ಏನು ಇಲ್ಲ ಎನ್ನುವ ಜಾಯಮಾನವಾಗಿದೆ ಎಂದರು. ಇಂತಹ ಕಾಲಘಟ್ಟದಲ್ಲಿ ಅಂತಹ ಜನರಿಗೆ ಮಾಹಿತಿ ಕೊಟ್ಟರೆ ಎಲ್ಲರಿಗೂ ಉಪಯೋಗವಾಗಲಿದೆ ಎಂದರು.
ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ನಟರಾಜ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ತನು ಮನ ಧನದಿಂದ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ:
ಕಾರ್ಯಕ್ರಮದ ಅಧ್ಯಕ್ಷರು ಡಾ .ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ನಮ್ಮ ಕ್ಷೇತ್ರದ ಹಲವು ಕಾರ್ಯಕ್ರಮಗಳಲ್ಲಿ ಅತ್ಯಂತ ಪವಿತ್ರ ಕಾರ್ಯ ಅಂದ್ರೆ ಅದು ಮದ್ಯ ವರ್ಜನ ಶಿಬಿರ ಎಂದರು . ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡವರಿಗೆ ಅಭಿನಂದನೆ , ಹೊಸ ಹೊಸ ಅಧ್ಯಕ್ಷರುಗಳಿಗೆ ಹೊಸ ಹೊಸ ಸವಾಲುಗಳಿದೆ. ವರ್ಷ ವರ್ಷ ಶಿಬಿರಗಳು ಜಾಸ್ತಿ ಆಗುತ್ತಿದೆ ಹೀಗಾಗಿ ಸವಾಲುಗಳು ಜಾಸ್ತಿ ಅಂದರು. ಈ ಮದ್ಯ ವರ್ಜನ ಕಾರ್ಯಕ್ರಮದಲ್ಲಿ ಶತ್ರುಗಳು ಜಾಸ್ತಿ , ಮದ್ಯದ ಉದ್ಯಮಿಗಳು ನಮ್ಮನ್ನು ಶತ್ರುಗಳಾಗಿ ನೋಡುತ್ತಾರೆ. ಆದರೆ ನಾವು ಕುಡಿತ ಬಿಡಿಸುವುವ ಕೆಲಸ ಮಾಡುತ್ತಿದ್ದೇವೆ ಅಷ್ಟೇ .! ಯಾರಿಗೂ ಸಮಸ್ಯೆ ಮಾಡುತ್ತಿಲ್ಲ ಅಂದರು. ಜನ ಜಾಗೃತಿಯಲ್ಲಿ ಇರುವ ಎಲ್ಲರೂ ಪುಣ್ಯದ ಕೆಲಸ ಮಾಡುತ್ತಿದ್ದೀರಿ ಇಂತಹ ಕೆಲಸ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಜನ ಜಾಗೃತಿ ಟ್ರಸ್ಟ್ ನ ಕಾರ್ಯದರ್ಶಿ ವಿವೇಕ್ ವಿ. ಪಾೈಸ್ ಸ್ವಾಗತಿಸಿದರು, ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ ಪೈ ಧನ್ಯವಾದ ತಿಳಿಸಿದರು.